ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಠಾಣ್‌ ಕೋಟ್ ದಾಳಿ : ತನಿಖೆಗೆ ಬಂತು ಪಾಕ್‌ ತಂಡ

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು, ಮಾರ್ಚ್ 28 : ಪಂಜಾಬಿನ ಪಠಾಣ್ ಕೋಟ್ ವಾಯುನೆಲೆ ಮೇಲಿನ ಉಗ್ರರ ದಾಳಿಯ ತನಿಖೆ ನಡೆಸಲು ಆಗಮಿಸಿರುವ ಪಾಕ್‌ ತಂಡ ಇಂದು ಎನ್‌ಐಎ ಅಧಿಕಾರಿಗಳನ್ನು ಭೇಟಿ ಮಾಡಲಿದೆ. ತನಿಖಾ ತಂಡ ಪಠಾಣ್‌ ಕೋಟ್‌ಗೆ ಭೇಟಿ ನೀಡಲಿದ್ದು, ನಿಗದಿತ ಪ್ರದೇಶಗಳ ಭೇಟಿಗೆ ಮಾತ್ರ ಅವಕಾಶ ನೀಡಲಾಗಿದೆ.

ಐವರು ಸದಸ್ಯರ ಪಾಕಿಸ್ತಾನದ ತನಿಖಾ ತಂಡ (ಜೆಐಟಿ) ಭಾನುವಾರ ನವದೆಹಲಿಗೆ ಆಗಮಿಸಿದೆ. ತನಿಖಾ ತಂಡಕ್ಕೆ 7 ದಿನಗಳ ವೀಸಾ ನೀಡಲಾಗಿದ್ದು, ಅಷ್ಟರೊಳಗೆ ಮಾಹಿತಿ ಸಂಗ್ರಹಣೆ ಮಾಡಿಕೊಂಡು, ತಂಡ ಪಾಕ್‌ಗೆ ವಾಪಸ್ ಆಗಲಿದೆ. [ಪಠಾಣ್ ಕೋಟ್ ದಾಳಿ : ಉಗ್ರರ ಚಿತ್ರ ಬಿಡುಗಡೆ]

pathankot

ಸೋಮವಾರ ತಂಡ ದೆಹಲಿಯಲ್ಲಿರುವ ಎನ್‌ಐಎ ಕಚೇರಿಗೆ ಭೇಟಿ ನೀಡಲಿದೆ. ಪಠಾಣ್ ಕೋಟ್ ವಾಯುನೆಲೆ ಮೇಲಿನ ದಾಳಿಯ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ನಡೆಸುತ್ತಿದ್ದು, ಪಾಕ್ ತಂಡಕ್ಕೆ ಇದುವರೆಗಿನ ತನಿಖೆಯ ಮಾಹಿತಿಯನ್ನು ಎನ್‌ಐಎ ಅಧಿಕಾರಿಗಳು ನೀಡಲಿದ್ದಾರೆ. [ಪಠಾಣ್ ಕೋಟ್ ವಾಯುನೆಲೆಯ ವಿಶೇಷತೆಗಳೇನು?]

ಪಠಾಣ್ ಕೋಟ್‌ಗೆ ಭೇಟಿ : ಪಾಕ್ ತನಿಖಾ ತಂಡ ಎನ್‌ಐಎ ಕಚೇರಿಗೆ ಭೇಟಿ ನೀಡಿದ ಬಳಿಕ ಪಠಾಣ್ ಕೋಟ್ ವಾಯುನೆಲೆಗೆ ಭೇಟಿ ನೀಡಲಿದೆ. ವಾಯುನೆಲೆಯ ನಿಗದಿತ ಪ್ರದೇಶಗಳಿಗೆ ಭೇಟಿ ನೀಡಲು ಮಾತ್ರ ತನಿಖಾ ತಂಡಕ್ಕೆ ಅವಕಾಶ ಕಲ್ಪಿಸಲಾಗುತ್ತದೆ ಎಂದು ಭಾರತ ಸ್ಪಷ್ಟಪಡಿಸಿದೆ. [ಪಠಾಣ್ ಕೋಟ್ ಉಗ್ರರ ದಾಳಿ : ಟೈಮ್ ಲೈನ್]

ಪಾಕ್ ತನಿಖಾ ತಂಡದ ಜೊತೆ ಎನ್‌ಐಎ ಅಧಿಕಾರಿಗಳ ತಂಡವೂ ಪಠಾಣ್‌ ಕೋಟ್‌ ವಾಯುನೆಲೆಗೆ ಭೇಟಿ ನೀಡಲಿದೆ. ದಾಳಿ ನಡೆದ ಸ್ಥಳಗಳ ಪರಿಶೀಲನೆಗೆ ಮಾತ್ರ ಪಾಕ್ ತಂಡಕ್ಕೆ ಅನುಮತಿ ನೀಡಲಾಗಿದೆ. ಭದ್ರತೆಯ ಕಾರಣದಿಂದಾಗಿ ವಾಯುನೆಲೆಯ ಸೂಕ್ಷ್ಮ ಪ್ರದೇಶಗಳನ್ನು ಪರಿಶೀಲನೆ ನಡೆಸಲು ಅನುಮತಿ ಕೊಟ್ಟಿಲ್ಲ.

ಭಾರತ ಮತ್ತು ಪಾಕಿಸ್ತಾನದ ಗಡಿಭಾಗದಿಂದ ಕೇವಲ 40 ಕಿ.ಮೀ.ದೂರದಲ್ಲಿರುವ ಪಠಾಣ್ ಕೋಟ್ ವಾಯುನೆಲೆ, ದೇಶದ ಮಹತ್ವದ ಸೇನಾ ನೆಲೆಯಾಗಿದೆ. ಸುಮಾರು 75 ಎಕರೆ ಪ್ರದೇಶದಲ್ಲಿರುವ ವಾಯುನೆಲೆ ಮೇಲೆ ಪಾಕಿಸ್ತಾನದ ಕಣ್ಣಿದೆ. 1965, 1971ರ ಭಾರತ-ಪಾಕ್ ನಡುವಿನ ಯುದ್ಧದ ಸಮಯದಲ್ಲಿಯೂ ಪಾಕಿಸ್ತಾನ ಈ ವಾಯುನೆಲೆ ಮೇಲೆ ದಾಳಿ ಮಾಡಿತ್ತು. ಆದ್ದರಿಂದ, ಎಲ್ಲಾ ಪ್ರದೇಶಗಳ ಭೇಟಿಗೆ ಅನುಮತಿ ಕೊಟ್ಟಿಲ್ಲ.

English summary
A team of the National Investigation Agency will brief the members of the Joint Investigation Team from Pakistan about the Pathankot attack probe. The JIT which arrived in New Delhi on Sunday with a 7 day visa. The JIT will visit the Pathankot air base where it has been granted restricted access.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X