ಹಿಂದೂ-ಮುಸ್ಲಿಂ ದಂಪತಿಗೆ ಪಾಸ್‌ಪೋರ್ಟ್‌ ಅಧಿಕಾರಿ ಅವಮಾನ

ಲಕ್ನೋ, ಜೂನ್ 21 : ಅಂತರ್‌ಜಾತಿ ವಿವಾಹವಾದ ದಂಪತಿಗಳಿಗೆ ಪಾಸ್‌ಪೋರ್ಟ್‌ ಕಚೇರಿ ಅಧಿಕಾರಿ ಅವಮಾನ ಮಾಡಿದ ಘಟನೆ ಲಕ್ನೋದಲ್ಲಿ ನಡೆದಿದೆ. ದಂಪತಿಗೆ ಪಾಸ್‌ಪೋರ್ಟ್ ನೀಡಲು ನಿರಾಕರಿಸಲಾಗಿದೆ ಮತ್ತು ಹಿಂದೂ ಧರ್ಮಕ್ಕೆ ಮತಾಂತರವಾಗುವಂತೆ ಹೇಳಿರುವುದು ವಿವಾದಕ್ಕೆ ಕಾರಣವಾಗಿದೆ.

ಟ್ವಿಟರ್‌ನಲ್ಲಿ ಈ ಘಟನೆ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ. ಪಾಸ್‌ಪೋರ್ಟ್‌ ನಿರಾಕರಿಸಿ, ನಮಗೆ ಅವಮಾನ ಮಾಡಿದ್ದಾರೆ ಎಂದು ದಂಪತಿಗಳು ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಟ್ವಿಟರ್ ಮತ್ತು ಈ ಮೇಲ್ ಮೂಲಕ ದೂರು ನೀಡಿದ್ದಾರೆ.

ತಾನ್ವಿ ಸೇಠ್ ಮತ್ತು ಮೊಹಮ್ಮದ್ ಅನಸ್ ಸಿದ್ದಿಕ್ಕಿ 2007ರಲ್ಲಿ ವಿವಾಹವಾಗಿದ್ದರು. ಪಾಸ್‌ಪೋರ್ಟ್ ಪಡೆಯಲು ಅವರು ಲಕ್ನೋದ ಪಾಸ್‌ಪೋರ್ಟ್‌ ಕಚೇರಿಗೆ ಅರ್ಜಿ ಹಾಕಿದ್ದರು. ಆಗ ಕಚೇರಿಯ ಅಧಿಕಾರಿ ಅವರನ್ನು ನಿಂದಿಸಿದ್ದಾರೆ ಮತ್ತು ಹಿಂದುತ್ವಕ್ಕೆ ಮತಾಂತರಗೊಳ್ಳುವಂತೆ ಸಿದಿಕ್ಕಿಗೆ ಹೇಳಿದ್ದಾರೆ.

ದಂಪತಿಗಳಿಗೆ ಅವಮಾನ ಮಾಡಿದ ಪಾಸ್‌ಪೋರ್ಟ್ ಕೇಂದ್ರದ ಅಧಿಕಾರಿಯನ್ನು ವರ್ಗಾವಣೆ ಮಾಡಲಾಗಿದೆ. ದಂಪತಿಗಳು ತಮಗೆ ಆದ ಅವಮಾನದ ಬಗ್ಗೆ ಟ್ವಿಟರ್‌ನಲ್ಲಿ ಮಾಹಿತಿ ನೀಡಿದ್ದು, ಸುಷ್ಮಾ ಸ್ವರಾಜ್ ಅವರಿಗೆ ದೂರನ್ನು ನೀಡಿದ್ದಾರೆ.

2007ರಲ್ಲಿ ವಿವಾಹ

2007ರಲ್ಲಿ ವಿವಾಹ

ತಾನ್ವಿ ಸೇಠ್ ಮತ್ತು ಮೊಹಮ್ಮದ್ ಅನಸ್ ಸಿದ್ದಿಕ್ಕಿ 2007ರಲ್ಲಿ ವಿವಾಹವಾಗಿದ್ದಾರೆ. ದಂಪತಿಗಳಿಗೆ 6 ವರ್ಷದ ಹೆಣ್ಣು ಮಗುವಿದೆ. ದಂಪತಿಗಳು ಎಂಎನ್‌ಸಿಯಲ್ಲಿ ಕೆಲಸ ಮಾಡುತ್ತಿದ್ದು, ಈಗ ಪಾಸ್‌ಪೋರ್ಟ್‌ ಪಡೆಯಲು ಅರ್ಜಿ ಹಾಕಿದ್ದಾರೆ.

'ಪಾಸ್‌ಪೋರ್ಟ್ ಪಡೆಯಲು ಸಂದರ್ಶನಕ್ಕೆ ಹೋದಾಗ ಅಧಿಕಾರಿ ಗಂಡನ ಹೆಸರು ನೋಡಿದ ತಕ್ಷಣ ತಾನ್ವಿ ವಿರುದ್ಧ ಕೂಗಾಡಿದ್ದಾರೆ. ಸಿದ್ದಿಕ್ಕಿಯನ್ನು ವಿವಾಹವಾಗಬಾರದಿತ್ತು ಎಂದು ಎಲ್ಲರ ಮುಂದೆ ಜೋರಾಗಿ ಕಿರುಚಾಡಿದ್ದಾನೆ. ಇದರಿಂದ ತಾನ್ವಿ ಅಳಲು ಪ್ರಾ ರಂಭಿಸಿದರು' ಎಂದು ಮೊಹಮ್ಮದ್ ಅನಸ್ ಸಿದ್ದಿಕ್ಕಿ ಹೇಳಿದ್ದಾರೆ.

ಹೆಸರು ಬದಲಾವಣೆ ಮಾಡಿಕೊಂಡಿಲ್ಲ

ಹೆಸರು ಬದಲಾವಣೆ ಮಾಡಿಕೊಂಡಿಲ್ಲ

ಘಟನೆ ಕುರಿತು ತಾನ್ವಿ ಸೇಠ್ ಟ್ವೀಟ್ ಮಾಡಿದ್ದು, 'ಮುಸ್ಲಿಂ ಯುವಕನನ್ನು ಮುದುವೆಯಾದರೂ ನಾನು ನನ್ನ ಹೆಸರನ್ನು ಬದಲಾವಣೆ ಮಾಡಿಕೊಂಡಿಲ್ಲ. ಕಚೇರಿಯ ಅಧಿಕಾರಿ ನನ್ನನ್ನು ಅವಮಾನ ಮಾಡಿದರು'.

ನನ್ನ ಆಯ್ಕೆ ನನ್ನಹಕ್ಕು

ನನ್ನ ಆಯ್ಕೆ ನನ್ನಹಕ್ಕು

'ನಾವಿಬ್ಬರು ವಿವಾಹವಾಗಿ 12 ವರ್ಷಗಳು ಕಳೆದಿವೆ. ಇದುವರೆಗೂ ನಾನು ಇಂತಹ ಅವಮಾನ ಎದುರಿಸಿರಲಿಲ್ಲ. ವಿವಾಹದ ನಂತರ ಹೆಸರನ್ನು ಆಯ್ಕೆ ಮಾಡಿಕೊಳ್ಳವುದು ನನ್ನ ವೈಯಕ್ತಿಕ ಆಯ್ಕೆಯಾಗಿದೆ'

ದಯವಿಟ್ಟು ಸಹಕರಿಸಿ

ದಯವಿಟ್ಟು ಸಹಕರಿಸಿ

ಮೊಹಮ್ಮದ್ ಅನಸ್ ಸಿದ್ದಿಕ್ಕಿ ತಮ್ಮ ಟ್ವೀಟ್‌ನಲ್ಲಿ ಸುಷ್ಮಾ ಸ್ವರಾಜ್, ಪಿಎಂಓ ಇಂಡಿಯಾ ಮುಂತಾದವರನ್ನು ಟ್ಯಾಗ್ ಮಾಡಿದ್ದು ನಮ್ಮ ಸಮಸ್ಯೆ ಬಗೆಹರಿಸಿ ಪಾಸ್‌ಪೋರ್ಟ್ ಕೊಡಿಸಿ ಎಂದು ವಿನಂತಿಸಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+