ಪ್ರಯಾಣಿಕರೇ ಹುಷಾರ್! ಸ್ಲೀಪರ್ ಕೋಚ್ ಬಸ್‌ಗಳಲ್ಲಿ ಕಾಮದಾಟ- ಮುಚ್ಚಿದ ಪರದೆಯೊಳಗೆ ನಡೆಯುತ್ತೆ ವೇಶ್ಯಾವಾಟಿಕೆ!
ಚೆನ್ನೈ ಮೇ 20: ಪ್ರಯಾಣಿಕರ ಸುರಕ್ಷತೆ ಹಾಗೂ ಆರಾಮದಾಯಕ ಪ್ರಯಾಣಕ್ಕಾಗಿ ಸ್ಲೀಪರ್ ಕೋಚ್ ಬಸ್‌ಗಳನ್ನು ಪರಿಚಯಿಸಲಾಗಿದೆ. ಆದರೀಗ ಈ ಬಸ್‌ಗಳು ಎಷ್ಟು ಸುರಕ್ಷಿತ ಎನ್ನುವ ಪ್ರಶ್ನೆಗಳು ಹುಟ್ಟಿಕೊಂಡಿವೆ. ಚೆನ್ನೈನ ಉಳುಂದೂರುಪೇಟೆ ಟೋಲ್ ಬಳಿ ಸ್ಲೀಪರ್ ಕೋಚ್ ಬಸ್‌ನಲ್ಲಿ ನಡೆದ ಅತ್ಯಾಚಾರ ಪ್ರಕರಣ ಪ್ರಯಾಣಿಕರನ್ನು ಬೆಚ್ಚಿ ಬೀಳಿಸಿದೆ.
ಹೀಗಾಗಿ ಲಾಡ್ಜ್‌ಗಳಲ್ಲಿ ದಾಳಿ ನಡೆಸುತ್ತಿರುವಂತೆಯೇ ಓಮ್ನಿ ಸ್ಲೀಪರ್ ಕೋಚ್ ಬಸ್‌ಗಳ ಮೇಲೂ ದಾಳಿ ನಡೆಸಬೇಕು ಎಂಬ ಒತ್ತಾಯ ಕೇಳಿಬಂದಿದೆ. ಆರ್ಡಿನರಿ ಬಸ್‌ಗಳಿಗಿಂತ ಈಗ ಓಮ್ನಿ ಬಸ್‌ಗಳು ಹೆಚ್ಚು ಜನಪ್ರಿಯವಾಗುತ್ತಿವೆ. ಇವುಗಳನ್ನು ಎಸಿ ಬಸ್ ಎಂದು ಹೇಳಬೇಕಾಗಿಲ್ಲ. ಹಾಸಿಗೆ, ಪರದೆ, ಮಲಗುವ ವ್ಯವಸ್ಥೆ ಇತ್ಯಾದಿ ವಿಶೇಷ ಸೌಕರ್ಯಗಳೊಂದಿಗೆ ಸಜ್ಜುಗೊಂಡಿರುವ ಸ್ಲೀಪರ್ ಕೋಚ್ ಬಸ್‌ಗಳಿಗೆ ಈಗ ಬೇಡಿಕೆ ಹೆಚ್ಚಾಗಿದೆ.

ಪ್ರಯಾಣ ದರ ಜಾಸ್ತಿ..
ಸ್ಲೀಪರ್ ಕೋಚ್ ಬಸ್‌ಗಳಲ್ಲಿ ಹಬ್ಬ ಹರಿದಿನಗಳಲ್ಲಿ ಪ್ರಯಾಣ ದರ 3 ಪಟ್ಟು ಜಾಸ್ತಿ. ಆದರೆ ಪ್ರಯಾಣಿಕರಿಗೆ ನೆಮ್ಮದಿ ಒದಗಿಸುವ ಇಂತಹ ಓಮ್ನಿ ಬಸ್ಸುಗಳಲ್ಲಿ ನಿಗದಿತ ಸಮಯದೊಳಗೆ ತೊಂದರೆಯಿಲ್ಲದೆ ಊರುಗಳಿಗೆ ತಲುಪಬಹುದು. ಮಲಗಿಕೊಂಡು ಹೋಗುವುದರಿಂದ ಸಮಯದ ಉಳಿತಾಯ ಕೂಡ ಆಗುವುದರಿಂದ ಈ ಬಸ್‌ಗಳಿಗೆ ಬೇಡಿಕೆ ಅಧಿಕ.
ಸ್ಲೀಪರ್ ಕೋಚ್ ಬಸ್‌ನಲ್ಲಿ ವೇಶ್ಯಾವಾಟಿಕೆ :
ಇನ್ನೊಂದೆಡೆ ಸ್ಲೀಪರ್ ಕೋಚ್ ಗಳಲ್ಲಿ ಅಸಭ್ಯ ಸಂಗತಿಗಳೂ ಹೆಚ್ಚಾಗುತ್ತಿವೆ ಎನ್ನುವ ಮಾತುಗಳು ಕೇಳಿ ಬಂದಿವೆ. ಬಸ್ ನೊಳಗೆ ವೇಶ್ಯಾವಾಟಿಕೆ ನಡೆಯುತ್ತಿರುವ ಬಗ್ಗೆ ಚೆನ್ನೈ ಪೊಲೀಸರಿಗೆ ಸಾಕಷ್ಟು ದೂರುಗಳು ಬರುತ್ತಿವೆ. ಲಾಡ್ಜ್‌ಗಳಿಗಿಂತ ಬಸ್‌ಗಳು ಸೇಫ್ ಎಂದು ವೇಶ್ಯಾವಾಟಿಕೆ ನಡೆಯುತ್ತಿದೆ ಎನ್ನಲಾಗುತ್ತಿದೆ. ಹೀಗಾಗಿ ಪೊಲೀಸರು ಕೂಡ ಓಮ್ನಿ ಬಸ್‌ಗಳ ಮೇಲೆ ಕಣ್ಣಿಟ್ಟು ಪದೇ ಪದೇ ದಾಳಿ ನಡೆಸಿ ಅಪರಾಧ ಕಡಿಮೆ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಸೇಲಂ ಹುಡುಗಿ ಮೇಲೆ ಅತ್ಯಾಚಾರ:
6 ತಿಂಗಳ ಹಿಂದೆ ಸೇಲಂನಲ್ಲಿ ನಡೆದ ಘಟನೆ ಹೀಗಿದೆ. ಸೇಲಂ ಜಿಲ್ಲೆಯ ಆತೂರ್ ಬಳಿಯ ತಲೈವಾಸಲ್ ಕಟ್ಟುಕೊಟ್ಟೈ ಮೂಲದ ಹುಡುಗಿ (17) ಫೇಸ್ ಬುಕ್ ನಲ್ಲಿ ಪರಿಚಯವಾಗಿದ್ದ ದಿನೇಶ್ ಕುಮಾರ್ ಎಂಬುವವರನ್ನು ಭೇಟಿ ಮಾಡಿದಳು. 24 ವರ್ಷದ ದಿನೇಶ್ ಕುಮಾರ್ ಅವರು ಆತೂರು ಬೃಂಗಮಾದೇವಿಯವರು. ಚಾಟಿಂಗ್‌ನಲ್ಲಿ ಪರಿಚಯವಾಗಿದ್ದ ಇವರು ಒಮ್ಮೆ ಖುದ್ದಾಗಿ ಭೇಟಿ ಮಾಡಿ ಮಾತನಾಡಬೇಕು ಎಂದು ಭಯಸಿದ್ದರು. ಅದರಂತೆ ವಿದ್ಯಾರ್ಥಿಯೂ ದಿನೇಶ್ ನನ್ನು ಹುಡುಕಿಕೊಂಡು ಹೋಗಿದ್ದಾಳೆ. ಆ ವೇಳೆ ಯುವತಿಯನ್ನು ಪ್ರೀತಿಸಿ ಮದುವೆಯಾಗುವುದಾಗಿ ತಿಳಿಸಿದ ದಿನೇಶ್ ಕುಮಾರ್ ನನ್ನು ನಂಬಿ ಹುಡುಗಿ ಆಗಸ್ಟ್ 12 ರಂದು ಮನೆಯಿಂದ ನಾಪತ್ತೆಯಾಗಿದ್ದಳು.
ಸ್ಲೀಪರ್ ಕೋಚ್ನಲ್ಲಿ ಅತ್ಯಾಚಾರ:
ಇಬ್ಬರೂ ಸ್ಲೀಪರ್ ಕೋಚ್ ನಲ್ಲಿ ಪ್ರಯಾಣ ಮಾಡಿದ್ದರು. ಬಸ್ ಉಳುಂದೂರುಪೇಟೆ ಟೋಲ್ ಗೇಟ್ ಏರಿಯಾಕ್ಕೆ ಬಂದಾಗ ಟ್ರಾಫಿಕ್ ಜಾಮ್ ಆಗಿತ್ತು. ಹೀಗಾಗಿ ಬಸ್ ತುಂಬಾ ಹೊತ್ತು ನಿಂತಿತ್ತು. ಅದೇ ಸಮಯದಲ್ಲಿ ದಿನೇಶ್ ಕುಮಾರ್ ಬಸ್ಸಿನಲ್ಲಿ ಹುಡುಗಿ ಮೇಲೆ ಅತ್ಯಾಚಾರ ಎಸಗಿದ್ದನು. ಅಪ್ರಾಪ್ತ ಬಾಲಕಿಯನ್ನು ಅವಮಾನಿಸಿದ ಅಪರಾಧಕ್ಕೆ ಸಂಬಂಧಿಸಿದಂತೆ ದಿನೇಶ್ ನ್ನನ್ನು ಅರೆಸ್ಟ್ ಮಾಡಲಾಗಿದೆ.
ಈ ರೀತಿಯ ಅರಿವಿಲ್ಲದ ಘಟನೆಗಳು ಬಸ್‌ನಲ್ಲಿ ನಡೆಯುತ್ತಿದೆ. ಕೆಲ ಯುವಕ ಯುವತಿಯರು ತಮ್ಮ ಕಾಮ ತೀರಿಸಿಕೊಳ್ಳಲೂ ಲಾಡ್ಜ್ ರೂಮ್‌ಗಳಿಗಿಂತ ಬಸ್‌ನ್ನು ಬುಕ್ ಮಾಡುತ್ತಿರುವುದು ಕಂಡು ಬಂದಿದೆ ಎಂದು ಓಮ್ನಿ ಸ್ಲೀಪರ್ ಕೋಚ್ ಉದ್ಯೋಗಿಯೊಬ್ಬರು ಹೇಳುತ್ತಾರೆ.
ಹೆಸರು ಹೇಳಲು ಇಚ್ಚಿಸದ ಓಮ್ನಿ ಸ್ಲೀಪರ್ ಕೋಚ್ ಉದ್ಯೋಗಿ ಪ್ರಕಾರ "ಸ್ಲೀಪರ್ ಕೋಚ್‌ನಲ್ಲಿ ಅಶ್ಲೀಲ ಕೃತ್ಯಗಳು ನಡೆಯುತ್ತವೆ. ಗಂಡಸರು ಹುಡುಗಿಯ ಹೆಸರಲ್ಲಿ ಟಿಕೆಟ್ ಬುಕ್ ಮಾಡುತ್ತಾರೆ. ಉದಾಹರಣೆಗೆ, ಹೊರಗಿನ ವಿದ್ಯಾರ್ಥಿಯೊಬ್ಬ ಚೆನ್ನೈನ ಕಾಲೇಜಿನಲ್ಲಿ ಓದುತ್ತಿದ್ದಾನೆ ಎಂದಿಟ್ಟುಕೊಳ್ಳೋಣ. ಹುಡುಗಿ ರಜೆಯ ವೇಳೆ ಚೆನ್ನೈಗೆ ಹೋಗಬೇಕಾದರೆ, ಆಕೆಯ ಪೋಷಕರು ಓಮ್ನಿಯಲ್ಲಿ ಟಿಕೆಟ್ ಕಾಯ್ದಿರಿಸುತ್ತಾರೆ. ಪೋಷಕರು ಬಸ್‌ನಲ್ಲಿ ಯಾರಾದರೂ ಹೆಂಗಸರು ಬುಕ್ ಮಾಡಿದ್ದಾರೆಯೇ ಎಂದು ಪರಿಶೀಲಿಸಿ ತಮ್ಮ ಮನೆ ಹೆಣ್ಣು ಮಕ್ಕಳನ್ನು ಸುರಕ್ಷಿತವಾಗಿ ಕಳುಹಿಸುತ್ತಾರೆ. ಆದರೆ ಬಸ್ ಮುಂದೆ ಸಾಗುತ್ತಿದ್ದಂತೆ ಮುಂದೆ ನಡೆಯುವುದೇ ಬೇರೆ' ಎನ್ನುತ್ತಾರೆ ಹೆಸರು ಹೇಳಲು ಇಚ್ಚಿಸದ ಉದ್ಯೋಗಿ.
ಟಿಕೆಟ್ ಬುಕಿಂಗ್: ಇಲ್ಲಿ ಇಟ್ರಸ್ಟಿಂಗ್ ವಿಚಾರ ಅಂದರೆ, ಯುವತಿ ತನ್ನ ಹೆಸರಿನಲ್ಲಿ ಬುಕ್ ಆದ ಸೀಟ್ ನಂಬರ್ ಯುವಕನಿಗೆ ಮುಂಚಿತವಾಗಿ ಕಳುಹಿಸಿರುತ್ತಾಳೆ. ಆ ಯುವಕ ಮಹಿಳೆಯ ಹೆಸರಿನಲ್ಲಿ ಟಿಕೆಟ್ ಅನ್ನು ಯುವತಿ ಬೆಡ್ ಪಕ್ಕದಲ್ಲಿ ಬುಕ್ ಮಾಡುತ್ತಾನೆ. ಪೋಷಕರು ಯುವತಿಯನ್ನು ಬಸ್‌ನಲ್ಲಿ ಬಿಟ್ಟು ಹೋದ ಬಳಿಕ ಮುಂದಿನ ನಿಲ್ದಾಣದಿಂದ ಯುವಕ ಮಹಿಳೆಯ ಹೆಸರಿನಲ್ಲಿ ಬುಕ್ ಆದ ಸೀಟ್ ನಾನೇ ಮಾಡಿದ್ದು ಎಂದು ಬಸ್ ಹತ್ತುತ್ತಾನೆ.
ಹೀಗೆ ಹೆಂಗಸರ ಹೆಸರಲ್ಲಿ ಮುಂಗಡವಾಗಿ ಟಿಕೇಟ್ ಬುಕ್ ಮಾಡುತ್ತಾರೆ. 3 ಗಂಟೆ ಪ್ರಯಾಣವಾಗಲಿ ಅಥವಾ 7 ಗಂಟೆ ಪ್ರಯಾಣವಾಗಲಿ ತಪ್ಪಾಗಿ ಬಸ್ ಅನ್ನು ಬಳಸುತ್ತಾರೆ. ಆದರೆ ಎಲ್ಲರೂ ಅಲ್ಲ. ಹಾಗೆ.. 10 ಪರ್ಸೆಂಟ್ ಮಿಸ್ಟೇಕ್ ಆಗುತ್ತೆ. ದಾರಿಯಲ್ಲಿ ಊಟ ಮಾಡಲು ನಿಲ್ಲಿಸಿ, ಮತ್ತೆ ಬಸ್ ಸ್ಟಾರ್ಟ್ ಮಾಡಿದಾಗ ಎಲ್ಲರೂ ಹತ್ತಿದ್ದಾರಾ ಅಂತ ಚೆಕ್ ಮಾಡಬೇಕು. ಇಂತಹ ಕೃತ್ಯ ಎಸಗುವವರು ನಾವು ಕೇಳಿದರೂ ಉತ್ತರ ಕೊಡುವುದಿಲ್ಲ. ಹಾಗಾಗಿ ಪರೆದೆ ತೆಗೆದು ನೋಡಬೇಕಾಗುತ್ತದೆ. ಒಮ್ಮೆ ನಮಗೇ ನಾಚಿಕೆ ಎನಿಸುವಷ್ಟು ಕೆಟ್ಟ ದೃಶ್ಯಗಳನ್ನು ಬಸ್ ನಲ್ಲಿ ನಾವು ಕಂಡಿದ್ದೇವೆ ಎಂದು ಉದ್ಯೋಗಿ ಹೇಳಿಕೊಳ್ಳುತ್ತಾರೆ.
ಹೀಗಾಗಿ ಸ್ಲೀಪರ್ ಕೋಚ್ ಬಸ್‌ಗಳ ಮೇಲೂ ಅಧಿಕಾರಿಗಳು ನಿಗಾ ಇಡಬೇಕು. ಇಂತಹ ಕೃತ್ಯಗಳು ಪ್ರಯಾಣಿಕರಿಗೆ ಅಸುರಕ್ಷತೆಯಾಗಬಾರದು ಎಂದು ಮನವಿ ಮಾಡಿದ್ದಾರೆ.












Click it and Unblock the Notifications