Get Updates
Get notified of breaking news, exclusive insights, and must-see stories!

Parliament Special Session: ಹಿಂದಿನವರ ಸಾಧನೆಯನ್ನು ಸ್ಮರಿಸುತ್ತಾ, ಹಾಗೇ ವಿಪಕ್ಷವನ್ನು ತಿವಿದ ಪಿಎಂ ಮೋದಿ

ಭಾರತದ ಸಂಸತ್ ಕಲಾಪಕ್ಕೆ 75ನೇ ವರ್ಷದ ಸಂಭ್ರಮ ಹಿನ್ನೆಲೆಯಲ್ಲಿ ವಿಶೇಷ ಅಧಿವೇಶನದ ಮೊದಲ ದಿನದ ಕಲಾಪ ಮುಕ್ತಾಯಗೊಂಡಿದೆ. ಸದನವನ್ನು ಉದ್ದೇಶಿಸಿ ಪ್ರಧಾನಮಂತ್ರಿ ನರೇಂದ್ರ ಮೋದಿ ಮ್ಯಾರಥಾನ್ ಭಾಷಣವನ್ನು ಮಾಡಿದ್ದಾರೆ. ಹಳೇ ಸಂಸತ್ತಿನಲ್ಲಿನ ಕೊನೆಯ ದಿನದ ಕಲಾಪದಲ್ಲಿ ಮೋದಿ ಸವಿಸ್ತಾರವಾಗಿ ಎಲ್ಲರ ಸಾಧನೆಯನ್ನು ಸ್ಮರಿಸಿಕೊಂಡಿದ್ದಾರೆ.

ಹೊಸ ಸಂಸತ್ ಭವನಕ್ಕೆ ಹೋಗುವ ಮುನ್ನ ಇತಿಹಾಸದ ಮಹತ್ವ ಪೂರ್ಣ ಕ್ಷಣಗಳನ್ನು ಸ್ಮರಿಸೋಣ ಎಂದು ಪ್ರಧಾನಿ, ನೆಹರೂ, ಲಾಲ್ ಬಹಾದ್ದೂರ್ ಶಾಸ್ತ್ರಿ, ಪಿ.ವಿ.ನರಸಿಂಹ ರಾವ್, ಅಟಲ್ ಬಿಹಾರಿ ವಾಜಪೇಯಿ, ಬಾಬಾ ಸಾಹೇಬ್ ಅಂಬೇಡ್ಕರ್, ಸರ್ದಾರ್ ಪಟೇಲ್, ಚಂದ್ರಶೇಖರ್, ಎಲ್.ಕೆ.ಆಡ್ವಾಣಿಯವರನ್ನು ಮೋದಿ ತಮ್ಮ ಭಾಷಣದಲ್ಲಿ ಉಲ್ಲೇಖಿಸಿದ್ದಾರೆ.

parliament-special-session-pm-raises-old-incident
Photo Credit: ಪಿಟಿಐ

ಇದರ ಜೊತೆಜೊತೆಗೆ ತುರ್ತು ಪರಿಸ್ಥಿತಿ ಹೇರಿಕೆ ಮತ್ತು ವೋಟಿಗಾಗಿ ನೋಟು ಹಗರಣವನ್ನು ಉಲ್ಲೇಖಿಸುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಸೈಲೆಂಟಾಗಿ ತಿವಿದಿದ್ದಾರೆ. ಕ್ಯಾಷ್ ಫಾರ್ ವೋಟ್ (Cash For Vote Scam) ಹಿಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರ ಅವಧಿಯಲ್ಲಿ ಆಗಿರುವುದು ಎನ್ನುವುದು ಗಮನಿಸಬೇಕಾದ ವಿಚಾರ. ಇಂದಿರಾ ಗಾಂಧಿಯವರ ನೇತೃತ್ವದಲ್ಲಿ ಬಾಂಗ್ಲಾದೇಶದ ವಿಮೋಚನೆಯ ಬಗ್ಗೆಯೂ ಮೋದಿ ತಮ್ಮ ಭಾಷಣದಲ್ಲಿ ಸ್ಮರಿಸಿಕೊಂಡಿದ್ದಾರೆ.

ಏನಿದು ಕ್ಯಾಷ್ ಫಾರ್ ವೋಟ್ ಹಗರಣ? ಜುಲೈ 22, 2008ರಂದು ಭಾರತ - ಅಮೆರಿಕಾ ಪರಮಾಣು ಒಪ್ಪಂದದ ಹಿನ್ನಲೆಯಲ್ಲಿ ಎಡರಂಗವು, ಮನಮೋಹನ್ ಸಿಂಗ್ ನೇತೃತ್ವದ ಸರ್ಕಾರಕ್ಕೆ ತಮ್ಮ ಬೆಂಬಲವನ್ನು ಹಿಂತೆಗೆದುಕೊಂಡಿತ್ತು.

ಮೊದಲ ವಿಶ್ವಾಸ ನಿರ್ಣಯ ಮಂಡನೆ

ಇದರಿಂದಾಗಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರವು ಮೊದಲ ವಿಶ್ವಾಸ ನಿರ್ಣಯ ಮಂಡನೆಯನ್ನು ಎದುರಿಸುವಂತಾಯಿತು. ಯುಪಿಎ 226 ಸದಸ್ಯರನ್ನು ಹೊಂದಿತ್ತು (ಕಾಂಗ್ರೆಸ್‌ನ 153) ಮತ್ತು 543 ರ ಸದನದಲ್ಲಿ ಅವಿಶ್ವಾಸದಲ್ಲಿ ಪಾಸ್ ಆಗಲು 272 ಸದಸ್ಯ ಬೆಂಬಲದ ಅಗತ್ಯವಿತ್ತು. ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ 170 ಸಂಸದರನ್ನು ಹೊಂದಿತ್ತು.

39 ಸಂಸದರನ್ನು ಹೊಂದಿದ್ದ ಮುಲಾಯಂ ಸಿಂಗ್ ಯಾದವ್

ಯುಪಿಎ ಮೈತ್ರಿಕೂಟದ ಸಂಚಾಲಕರು 39 ಸಂಸದರನ್ನು ಹೊಂದಿದ್ದ ಮುಲಾಯಂ ಸಿಂಗ್ ಯಾದವ್ ಅವರ ಸಮಾಜವಾದಿ ಪಕ್ಷದ ಬೆಂಬಲ ಪಡೆಯಲು ದೌಡಾಯಿಸಿದ್ದರು. "ಭಾರತ-ಅಮೆರಿಕ ಪರಮಾಣು ಒಪ್ಪಂದವು ದೇಶಕ್ಕೆ ಒಳ್ಳೆಯದು ಎಂದು ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಹೇಳಿದ್ದರು, ಹಾಗಾಗಿ ಅದನ್ನು ಬೆಂಬಲಿಸಲು ನಿರ್ಧರಿಸಿದ್ದೇನೆ" ಎಂದು ಮುಲಾಯಂ ತಮ್ಮ ಬೆಂಬಲವನ್ನು ಯುಪಿಎ ಮೈತ್ರಿಕೂಟಕ್ಕೆ ಘೋಷಿಸಿದ್ದರು.

parliament-special-session-pm-raises-old-incident
Photo Credit: ಪಿಟಿಐ

ಸೋಮನಾಥ್ ಚಟರ್ಜಿ ಸ್ಪೀಕರ್ ಆಗಿ ನೇಮಕಗೊಂಡಿದ್ದರು

ಆ ವೇಳೆ ಸಿಪಿಐ(ಎಂ) ಸಂಸದರೂ ಆಗಿದ್ದ ಸೋಮನಾಥ್ ಚಟರ್ಜಿ ಸ್ಪೀಕರ್ ಆಗಿ ನೇಮಕಗೊಂಡಿದ್ದರು. ಎಡಪಕ್ಷಗಳು ತಮ್ಮ ಬೆಂಬಲವನ್ನು ಹಿಂದಕ್ಕೆ ಪಡೆದುಕೊಂಡಿದ್ದರಿಂದ ತಮ್ಮ ನಾಯಕ ಸೋಮನಾಥ್ ಚಟರ್ಜಿ ಅವರಿಗೆ ಸ್ಪೀಕರ್ ಹುದ್ದೆಯಿಂದ ಕೆಳಗಿಳಿದು, ಸರ್ಕಾರದ ವಿರುದ್ಧ ಮತ ಚಲಾಯಿಸುವಂತೆ ಸೂಚಿಸಿತ್ತು. ಆದರೆ, ಚಟರ್ಜಿ ಇದನ್ನು ನಿರಾಕರಿಸಿದ್ದರು. ವಿಶ್ವಾಸ ಮತದ ಮರುದಿನವೇ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿತ್ತು.

ಅವಿಶ್ವಾಸದ ಮೇಲೆ ಎರಡು ದಿನಗಳ ಚರ್ಚೆ

ಅವಿಶ್ವಾಸದ ಮೇಲೆ ಎರಡು ದಿನಗಳ ಚರ್ಚೆಯ ನಂತರ, ಯುಪಿಎ ಸರ್ಕಾರವು 275 ಮತಗಳನ್ನು ಪಡೆಯುವ ಮೂಲಕ ಅವಿಶ್ವಾಸ ಗೆದ್ದುಕೊಂಡಿತು. ಆದರೆ 256 ಸಂಸದರು ಸರ್ಕಾರದ ವಿರುದ್ಧ ಮತ ಚಲಾಯಿಸಿದರು, ಹತ್ತು ಸಂಸದರು ಗೈರಾಗಿದ್ದರು. ಆಡಳಿತ ಮತ್ತು ವಿಪಕ್ಷದ ನಾಯಕರು ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದ ತಮ್ಮ ಸದಸ್ಯರನ್ನು ಮತ ಹಾಕಲು ಕರೆ ತಂದಿದ್ದರು.

ಬಿಜೆಪಿಯ ಮೂವರು ಸದಸ್ಯರಿಗೆ ಯುಪಿಎ ಆಫರ್

ಆ ವೇಳೆ ಬಿಜೆಪಿಯ ಮೂವರು ಸದಸ್ಯರಾದ ಅಶೋಕ್ ಅರಗಲ್, ಫಗ್ಗನ್ ಸಿಂಗ್ ಕುಲಾಸ್ತೆ, ಮಹಾವೀರ್ ಬಗೋರಾ, ನೋಟಿನ ಬಂಡಲ್ ಅನ್ನು ಪ್ರದರ್ಶಿಸುತ್ತಾ, ನಮ್ಮ ಮನೆಗೆ ಸರ್ಕಾರದ ಕಡೆಯವರು ನೋಟಿನ ಕಂತೆಯೊಂದಿಗೆ ಆಗಮಿಸಿ ಬೆಂಬಲಿಸುವಂತೆ ಸೂಚಿಸಿದ್ದರು ಎಂದು ಸದನದಲ್ಲೇ ಗುರುತರ ಆರೋಪವನ್ನು ಮಾಡಿದ್ದರು. ವಿಡಿಯೋ ಸಾಕ್ಷ್ಯದೊಂದಿಗೆ ಬಿಜೆಪಿ ಸಂಸದರು ಸದನಕ್ಕೆ ಆಗಮಿಸಿದ್ದರು.

ಮನಮೋಹನ್ ಸಿಂಗ್ ಅವರು ರಾಜೀನಾಮೆ ನೀಡಬೇಕೆಂದು ಬಿಜೆಪಿ ಒತ್ತಾಯ

ಮನಮೋಹನ್ ಸಿಂಗ್ ಅವರು ರಾಜೀನಾಮೆ ನೀಡಬೇಕೆಂದು ಬಿಜೆಪಿ ಒತ್ತಾಯಿಸಿದರೆ, ಇದೆಲ್ಲಾ ಬೃಹನ್ನಾಟಕ ಎಂದು ಕಾಂಗ್ರೆಸ್ ತಿರುಗೇಟು ನೀಡಿತ್ತು. ಬಿಜೆಪಿ ಸದಸ್ಯರ ಪ್ರತಿಭಟನೆ ಹೆಚ್ಚಾದ ಹಿನ್ನಲೆಯಲ್ಲಿ ಸ್ಪೀಕರ್ ಪೋಲಿಸ್ ವಿಚಾರಣೆಗೆ ಆದೇಶವನ್ನು ನೀಡಿದ್ದರು. ಬಿಜೆಪಿಯು ಕಾಂಗ್ರೆಸ್ ಮುಖಂಡ ಅಹ್ಮದ್ ಪಟೇಲ್ ಮತ್ತು ಎಸ್ಪಿ ಮುಖಂಡ ಅಮರ್ ಸಿಂಗ್ ಇದರ ಹಿಂದೆ ಇದ್ದಾರೆ ಎಂದು ಆರೋಪಿಸಿತ್ತು. ಡಿಸೆಂಬರ್ 2008ರಲ್ಲಿ ಸಾಕ್ಷ್ಯಾಧಾರದ ಕೊರತೆಯಿಂದ ಹಗರಣದ ವಿಚಾರಣೆಯನ್ನು ನಿಲ್ಲಿಸಲಾಯಿತು. ಮೋದಿ ಈ ವಿಚಾರವನ್ನು ಸಂಸತ್ತಿನಲ್ಲಿ ಇಂದು (ಸೆ 18, 2023) ಪ್ರಸ್ತಾವಿಸಿದರು. (ಚಿತ್ರಕೃಪೆ : ಪಿಟಿಐ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+