ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಿಕ್ಕು ತಪ್ಪಿದ ಸಂಸತ್ ಕಲಾಪ, ಸಮಯ ವ್ಯರ್ಥ ಪೋಲು

|
Google Oneindia Kannada News

ನವದೆಹಲಿ, ಡಿಸೆಂಬರ್, 09: ಪ್ರಮುಖ ಚರ್ಚೆಗಳಾಗಬೇಕಿದ್ದ ಸಂಸತ್ ಕಲಾಪ ಇದೀಗ ಸಂಪೂರ್ಣ ದಿಕ್ಕು ತಪ್ಪಿದೆ. ಆರಂಭದ ದಿನಗಳು ಅಸಹಿಷ್ಣುತೆ ಗೊಂದಲದಲ್ಲಿ ಮುಗಿದುಹೋದರೆ ಇದೀಗ ನ್ಯಾಷನಲ್ ಹೆರಾಲ್ಡ್ ನೆಪಕ್ಕೆ ಕಲಾಪ ಬಲಿಯಾಗುತ್ತಿದೆ.

ಮಂಗಳವಾರ ಅರುಣ್ ಜೇಟ್ಲಿ ಮತ್ತು ರಾಹುಲ್ ಗಾಂಧಿ ನಡುವಿನ ಜಟಾಪಟಿಗೆ ಕಾರಣವಾಗಿದ್ದ ನ್ಯಾಶನಲ್ ಹೆರಾಲ್ಡ್ ಕುರಿತ ಚರ್ಚೆ ಕಾಂಗ್ರೆಸ್ ಕೈಯಿಂದ 'ಡರ್ಟಿ ಗೇಮ್ ' ಎಂಬ ಹೆಸರು ಪಡೆದುಕೊಂಡಿದೆ.[ನ್ಯಾಷನಲ್ ಹೆರಾಲ್ಡ್ ಪ್ರಕರಣ: ರಾಹುಲ್ VS ಅರುಣ್ ಜೇಟ್ಲಿ]

ರಾಜ್ಯಸಭೆಯಲ್ಲಿ ವಾಗ್ದಾಳಿ ಮಾಡಿದ ಕಾಂಗ್ರೆಸ್ ಮುಖಂಡ ಗುಲಾಂ ನಬಿ ಆಜಾದ್ ಕೇಂದ್ರ ಸರ್ಕಾರ ದೇಶದಲ್ಲಿ ದ್ವೇಷ ರಾಜಕಾರಣದ ವಾತಾವರಣ ಇರುವುದು ನೋವು ತಂದಿದೆ ಎಂದು ರಾಜ್ಯಸಭೆಯಲ್ಲಿ ವಿರೋಧ ಪಕ್ಷ ನಾಯಕ ಗುಲಾಂ ನಬಿ ಆಜಾದ್‌ ಹೇಳಿದರು. ಕಳೆದ ಒಂದೂವರೆ ವರ್ಷ ಅವಧಿಯಲ್ಲಿ ಭಾರತವನ್ನು 'ವಿರೋಧ ಪಕ್ಷ ಮುಕ್ತ' ದೇಶವನ್ನಾಗಿ ಮಾಡಲು ಕೇಂದ್ರ ಸರ್ಕಾರ ಸಲ್ಲದ ತಂತ್ರ ಮಾಡುತ್ತಿದೆ ಎಂದು ಆರೋಪಿಸಿದರು.

 ಇದೇನು ಪ್ರಜಾಪ್ರಭುತ್ವ ವ್ಯವಸ್ಥೆಯೇ?

ಇದೇನು ಪ್ರಜಾಪ್ರಭುತ್ವ ವ್ಯವಸ್ಥೆಯೇ?

ಕಾಂಗ್ರೆಸ್ ಸದಸ್ಯರು ಯಾವ ಚರ್ಚೆಯಲ್ಲೂ ಸಮಪರ್ಕವಾಗಿ ಪಾಲ್ಗೊಳ್ಳುತ್ತಿಲ್ಲ. ಬೇಕಂತಲೇ ಕಲಾಪಕ್ಕೆ ಅಡ್ಡಿ ಮಾಡುತ್ತಿದ್ದಾರೆ . ನಾವು ನಿಜವಾಗಿಯೂ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದ್ದೇವಾ? ಎಂದು ಕೇಂದ್ರ ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು ಪ್ರಶ್ನೆ ಮಾಡಿದರು.

 ಸಮಯ ವ್ಯರ್ಥಕ್ಕೆ ಅರ್ಥವಿದೇಯಾ?

ಸಮಯ ವ್ಯರ್ಥಕ್ಕೆ ಅರ್ಥವಿದೇಯಾ?

ನ್ಯಾಶನಲ್ ಹೆರಾಲ್ಡ್‌ ಪ್ರಕರಣ ನ್ಯಾಯಾಲಯದಲ್ಲಿದೆ. ಅದನ್ನು ಇಟ್ಟುಕೊಂಡು ಸಮಯ ಹಾಳು ಮಾಡುವುದರಲ್ಲಿ ಅರ್ಥವಿಲ್ಲ. ನ್ಯಾಯಾಲಯ ಯಾವ
ತೀರ್ಮಾನ ನೀಡುತ್ತದೆ ಎಂಬುದನ್ನು ನೋಡಬೇಕು ವಿನಃ ಕಲಾಪಲ್ಲಿ ಗಲಾಟೆ ಮಾಡುವುದಲ್ಲ. ನಿತಿನ್ ಗಡ್ಕರಿ

ಇದೆಂಥ ದೇಶ?

ಇದೆಂಥ ದೇಶ?

ಇದೆಂಥ ದೇಶ ಎಂಬುದೇ ತಿಳಿಯುತ್ತಿಲ್ಲ. ಎಲ್ಲರ ಸಮಯ ಮತ್ತು ಶ್ರಮವನ್ನು ಹಾಳು ಮಾಡುವುದರಲ್ಲಿ ಯಾರು ಯಾವ ಪುರುಷಾರ್ಥವನ್ನು ಕಾಣುತ್ತಿದ್ದಾರೋ ತಿಳಿಯದು-ರಾಮ್ ಜೇಠ್ ಮಲಾನಿ

ಬಿಜೆಪಿ ಡರ್ಟಿ ಗೇಮ್

ಬಿಜೆಪಿ ಡರ್ಟಿ ಗೇಮ್

ದ್ವೇಷದ ರಾಜಕಾರಣ ಮಾಡುತ್ತ ಬಿಜೆಪಿ ಸರ್ಕಾರಿ ಸಂಸ್ಥೆಗಳನ್ನು ತನ್ನ ಸ್ವಾರ್ಥಕ್ಕೆ ಬಳಸುತ್ತಿದೆ. ಜಾರಿ ನಿರ್ದೇಶನಾಲುಯದ ನಿರ್ದೇಶಕರನ್ನು ಕೆಲ ದಿನಗಳಲ್ಲೇ ಬದಲಿಸಿದ್ದು ಯಾಕೆ ಎಂದು ಪ್ರಶ್ನೆ ಮಾಡಿದರು.

English summary
Leader of opposition in Rajya Sabha Ghulam Nabi Azad on Wednesday accused the government of playing a "dirty game" of targeting opposition leaders and said the recent sudden transfer of the Enforcement Directorate chief was aimed only to "fix" the opposition leaders with "false and irrelevant" cases, including the National Herald case. On the other side BJP Leaders, Ministers condem the Congress attitude.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X