ಡಿಸೆಂಬರ್ 15ರಿಂದ ಸಂಸತ್ ಚಳಿಗಾಲದ ಅಧಿವೇಶನ ಆರಂಭ
ನವದೆಹಲಿ, ನವೆಂಬರ್ 24: ಕೊನೆಗೂ ಸಂಸತ್ತಿನ ಚಳಿಗಾಲ ಅಧಿವೇಶನದ ದಿನಾಂಕ ಪ್ರಕಟವಾಗಿದೆ. ಡಿಸೆಂಬರ್ 15ರಿಂದ ಜನವರಿ 5ರ ವರೆಗೆ ಚಳಿಗಾಲ ಅಧಿವೇಶನ ನಡೆಯಲಿದೆ.
ಈಗಾಗಲೇ ಸಂಸತ್ ಅಧೀವೇಶನ ಆರಮಭವಾಗಿ ಮುಕ್ತಾಯಗೊಳ್ಳಬೇಕಿತ್ತು. ಆದರೆ, ಗುಜರಾತ್ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಚಳಿಗಾಲದ ಅಧೀವೇಶನವನ್ನು ಮುಂದೂಡಿತ್ತು. ಇದೀಗ ಗುಜರಾತಿನ ಎರನಡೇ ಹಂತದ ಚುನಾವಣೆ 14ರಂದು ಮುಗಿದ ಮರುದಿನವೇ ಅಧೀವೇಶನ ನಡೆಸಲು ಕೇಂದ್ರ ಸಜ್ಜಾಗಿದೆ

ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಅಧಿವೇಶನವು ಬಿಜೆಪಿಯ ಸಾಧ್ಯತೆಗಳ ಮೇಲೆ ಪರಿಣಾಮ ಬೀರಬಹುದು ಎಂಬ ಭಯದಿಂದ ಸರ್ಕಾರ ಅಧಿವೇಶನ ಮುಂದೂಡಲು ಯತ್ನಿಸುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿತ್ತು.












Click it and Unblock the Notifications