ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Budget Session 2023: ಸಂಸತ್ತಿನ ಬಜೆಟ್ ಅಧಿವೇಶನ ಜ. 31 ರಿಂದ ಆರಂಭ , ಫೆ.1ಕ್ಕೆ ಬಜೆಟ್ ಮಂಡನೆ: ಮೂಲಗಳು

|
Google Oneindia Kannada News

ನವದೆಹಲಿ, ಜ. 02: ಸಂಸತ್ತಿನ ಬಜೆಟ್ ಅಧಿವೇಶನ ಜನವರಿ 31 ರಂದು ಪ್ರಾರಂಭವಾಗುವ ಸಾಧ್ಯತೆಯಿದೆ ಮತ್ತು ಏಪ್ರಿಲ್ 6 ರಂದು ಮುಕ್ತಾಯಗೊಳ್ಳುವ ನಿರೀಕ್ಷೆಯಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ ಎಂದು ಸೋಮವಾರ ವರದಿಯಾಗಿದೆ.

ಸಂಸತ್ತಿನ ಸೆಂಟ್ರಲ್ ಹಾಲ್‌ನಲ್ಲಿ ಲೋಕಸಭೆ ಮತ್ತು ರಾಜ್ಯಸಭೆಯ ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಭಾಷಣದೊಂದಿಗೆ ಅಧಿವೇಶನ ಆರಂಭವಾಗಲಿದೆ. ಕಳೆದ ವರ್ಷ ಆಗಸ್ಟ್‌ನಲ್ಲಿ ದ್ರೌಪದಿ ಮುರ್ಮು ಅವರು ರಾಷ್ಟ್ರಪತಿ ಸ್ಥಾನಕ್ಕೆ ಏರಿದ ನಂತರ ಸಂಸತ್ತಿನ ಉಭಯ ಸದನಗಳನ್ನು ಉದ್ದೇಶಿಸಿ ಮಾಡುವ ಮೊದಲ ಭಾಷಣ ಇದಾಗಿದೆ.

ಮುಂದಿನ ಬಜೆಟ್ ನಲ್ಲಿ ರೈತರ ಪರವಾಗಿ ಇನ್ನಷ್ಟು ಕಾರ್ಯಕ್ರಮ : ಬಸವರಾಜ ಬೊಮ್ಮಾಯಿಮುಂದಿನ ಬಜೆಟ್ ನಲ್ಲಿ ರೈತರ ಪರವಾಗಿ ಇನ್ನಷ್ಟು ಕಾರ್ಯಕ್ರಮ : ಬಸವರಾಜ ಬೊಮ್ಮಾಯಿ

ಇನ್ನು, ಬಜೆಟ್ ಅಧಿವೇಶನದ ಮೊದಲ ದಿನವೇ ಉಭಯ ಸದನಗಳಲ್ಲಿ ಆರ್ಥಿಕ ಸಮೀಕ್ಷೆಯನ್ನೂ ಮಂಡಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

Parliaments Budget Session To commence on Jan 31

ಫೆಬ್ರವರಿ 1 ರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಂಸತ್ತಿನಲ್ಲಿ ಕೇಂದ್ರ ಬಜೆಟ್ ಅನ್ನು ಮಂಡಿಸುವ ಸಾಧ್ಯತೆಯಿದೆ. ಅಧಿವೇಶನದ ಮೊದಲ ಭಾಗವು ಫೆಬ್ರವರಿ 10 ರವರೆಗೆ ಮುಂದುವರಿಯುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.

ಸ್ಥಾಯಿ ಸಮಿತಿಗಳು ವಿವಿಧ ಸಚಿವಾಲಯಗಳ ಅನುದಾನದ ಬೇಡಿಕೆಗಳ ಪರಿಶೀಲನೆ ಬಳಿಕ ಬಜೆಟ್ ಅಧಿವೇಶನದ ಎರಡನೇ ಭಾಗ ಮಾರ್ಚ್ 6 ರಂದು ಪ್ರಾರಂಭವಾಗಿ ಏಪ್ರಿಲ್ 6 ರಂದು ಮುಕ್ತಾಯಗೊಳ್ಳುವ ಸಾಧ್ಯತೆಯಿದೆ ಎಂದು ತಿಳಿಸಲಾಗಿದೆ.

ಬಜೆಟ್ ಅಧಿವೇಶನದ ಮೊದಲ ಭಾಗದಲ್ಲಿ, ಉಭಯ ಸದನಗಳು ರಾಷ್ಟ್ರಪತಿಗಳ ಭಾಷಣಕ್ಕೆ ಕೃತಜ್ಞತಾ ನಿರ್ಣಯದ ಮೇಲೆ ವಿವರವಾದ ಚರ್ಚೆಯನ್ನು ನಡೆಸುತ್ತವೆ. ನಂತರ ಕೇಂದ್ರ ಬಜೆಟ್ ಮೇಲಿನ ಚರ್ಚೆಯನ್ನು ನಡೆಸುತ್ತವೆ. ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾ ನಿರ್ಣಯದ ಮೇಲಿನ ಚರ್ಚೆಗೆ ಪ್ರಧಾನಿ ನರೇಂದ್ರ ಮೋದಿ ಉತ್ತರಿಸಿದರೆ, ಕೇಂದ್ರ ಬಜೆಟ್ ಮೇಲಿನ ಚರ್ಚೆಗೆ ಹಣಕಾಸು ಸಚಿವರು ಉತ್ತರ ನೀಡಲಿದ್ದಾರೆ.

Parliaments Budget Session To commence on Jan 31

ಬಜೆಟ್ ಅಧಿವೇಶನದ ಎರಡನೇ ಭಾಗದಲ್ಲಿ, ಸರ್ಕಾರದ ಶಾಸಕಾಂಗ ಕಾರ್ಯಸೂಚಿಯನ್ನು ಹೊರತುಪಡಿಸಿ ವಿವಿಧ ಸಚಿವಾಲಯಗಳಿಗೆ ಅನುದಾನದ ಬೇಡಿಕೆಗಳ ಮೇಲಿನ ಚರ್ಚೆಯ ಮೇಲೆ ಪ್ರಮುಖ ಗಮನ ಹರಿಸಲಾಗಿದೆ. ಅಧಿವೇಶನದ ಈ ಭಾಗದಲ್ಲಿ ಕೇಂದ್ರ ಬಜೆಟ್, ಹಣದ ಮಸೂದೆಯನ್ನು ಅಂಗೀಕರಿಸಲಾಗುತ್ತದೆ.

ಸೆಂಟ್ರಲ್ ವಿಸ್ಟಾ ಅಭಿವೃದ್ಧಿಯ ಭಾಗವಾಗಿ ಹೊಸ ಸಂಸತ್ ಕಟ್ಟಡದ ಕಾಮಗಾರಿಯನ್ನು ಕೈಗೊಳ್ಳಲಾಗುತ್ತಿದೆ. ಕಟ್ಟಡ ಕಾಮಗಾರಿಯಲ್ಲಿ ತೊಡಗಿರುವವರು ಬಜೆಟ್ ಅಧಿವೇಶನದ ಎರಡನೇ ಭಾಗವನ್ನು ಹೊಸ ಸಂಸತ್ತಿನ ಕಟ್ಟಡದಲ್ಲಿ ನಡೆಸಬಹುದು ಎಂಬ ವಿಶ್ವಾಸ ಹೊಂದಿದ್ದಾರೆ.

ಕಳೆದ ಅಧಿವೇಶನದಲ್ಲಿ, ಒಂಬತ್ತು ಮಸೂದೆಗಳನ್ನು ಲೋಕಸಭೆಯಲ್ಲಿ ಮಂಡಿಸಲಾಯಿತು. ಏಳು ಮಸೂದೆಗಳನ್ನು ಸಂಸತ್ತಿನ ಕೆಳಮನೆ ಅಂಗೀಕರಿಸಿತು. ರಾಜ್ಯಸಭೆಯು ಒಂಬತ್ತು ಮಸೂದೆಗಳನ್ನು ಅಂಗೀಕರಿಸಿತು. ಅಧಿವೇಶನದಲ್ಲಿ ಸಂಸತ್ತಿನ ಉಭಯ ಸದನಗಳು ಅಂಗೀಕರಿಸಿದ ಒಟ್ಟು ಮಸೂದೆಗಳ ಸಂಖ್ಯೆ ಒಂಬತ್ತು.

English summary
Parliament's budget session likely to commence on January 31, Union Budget to be presented on February 1 government sources said. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X