ಚಾಯ್ ವಾಲಾ - ಬಾರ್ ವಾಲಾ; ಟ್ವೀಟ್ ಮಾಡಿ ಕ್ಷಮೆ ಕೇಳಿದ ಪರೇಶ್ ರಾವಲ್

Subscribe to Oneindia Kannada

ನವದೆಹಲಿ, ನವೆಂಬರ್ 22: ಬಿಜೆಪಿ ಸಂಸತ್ ಸದಸ್ಯ ಪರೇಶ್ ರಾವಲ್ ಮಧ್ಯರಾತ್ರಿ ವಿವಾದಾತ್ಮಕ ಟ್ವೀಟ್ ಮಾಡಿ ನಂತರ ಡಿಲೀಟ್ ಮಾಡಿ ಕ್ಷಮೆ ಕೇಳಿದ್ದಾರೆ.

ಯುವ ಕಾಂಗ್ರೆಸ್ ನ 'ಯುವ ದೇಶ್' ಮ್ಯಾಗಜಿನ್ ಮಾಡಿದ್ದ ಕೀಳಿ ಅಭಿರುಚಿಯ ಮೀಮ್ಸ್ ಗೆ ಪ್ರತಿಕ್ರಿಯೆ ನೀಡಲು ಹೋಗಿ ಪರೇಶ್ ರಾವಲ್ ಕೂಡಾ ಕೆಟ್ಟ ಸಂದೇಶ ಸಾರುವ ಟ್ವೀಟ್ ಮಾಡಿದ್ದರು. ನಂತರ ಟ್ವೀಟ್ ಡಿಲೀಟ್ ಮಾಡಿ ಕ್ಷಮೆ ಕೇಳಿದ್ದರು.

Paresh Rawal deletes his 'Chai-Wala- Bar-Wala' tweet, issues apology

ಸದ್ಯ ಡಿಲೀಟ್ ಮಾಡಲಾಗಿರುವ ಟ್ವೀಟ್ ನಲ್ಲಿ ಪರೇಶ್ ರಾವಲ್, "ತಿರುಗಾಡುತ್ತಿರುವ ಬಾರ್ ವಾಲಾಗಿಂತ ನಮ್ಮ ಚಾಯ್ ವಾಲಾ ಯಾವತ್ತೂ ಉತ್ತಮ," ಎಂದು ಹೇಳಿದ್ದರು.

ಭಾರತೀಯ ಯುವ ಕಾಂಗ್ರೆಸ್ ಟ್ವೀಟ್ ಗೆ ಅವರು ಈ ಪ್ರತಿಕ್ರಿಯೆ ನೀಡಿದ್ದರು. ನಂತರ ಟ್ವೀಟ್ ಡಿಲೀಟ್ ಮಾಡಿದ್ದ ಪರೇಶ್ ರಾವಲ್, "ಟ್ವೀಟ್ ಕೀಳು ಅಭಿರುಚಿಯಲ್ಲಿದ್ದರಿಂದ ಅಳಿಸಿಹಾಕಲಾಗಿದೆ ಮತ್ತು ಜನರ ಭಾವನೆಗಳನ್ನು ನೋಯಿಸಿದ್ದಕ್ಕಾಗಿ ಕ್ಷಮೆ ಕೇಳುತ್ತೇನೆ," ಎಂದು ಹೇಳಿದ್ದಾರೆ.

ಯುವ ದೇಶ್ ಕೂಡಾ ತನ್ನ ಟ್ವೀಟ್ ಗೆ ಜನರಿಂದ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಅದನ್ನು ಡಿಲೀಟ್ ಮಾಡಿತ್ತು. ಜತೆಗೆ ಪರೇಶ್ ರಾವಲ್ ಕೂಡಾ ಟ್ವೀಟ್ ಡಿಲೀಟ್ ಮಾಡಿದ್ದಾರೆ.

ಪರಸ್ಪರ ಕಾಲೆಳೆದುಕೊಳ್ಳಲು ಹೋಗಿ ಎರಡೂ ಪಕ್ಷದವರು ಕೀಳು ಅಭಿರುಚಿಗೆ ಮೊರೆ ಹೋಗುತ್ತಿರುವುದು ಮಾತ್ರ ವಿಪರ್ಯಾಸವೇ ಸರಿ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
In a mid-night drama, veteran actor and Bharatiya Janata Party (BJP) MP Paresh Rawal wrote and deleted a tweet regarding the 'Yuva Desh's derogatory meme. However, he later issued an apology for 'hurting feelings'. In the tweet that is now deleted, he wrote, "Our Chai-Wala is any day better than tour Bar-Wala !"

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ