ದಶಕದ ಕಾಲ ಅಮೃತಸರ ಜೈಲಿನಲ್ಲಿದ್ದ ಪಾಕ್ ಸಹೋದರಿಯರ ಬಿಡುಗಡೆ

Posted By:
Subscribe to Oneindia Kannada

ಅಮೃತಸರ, ನವೆಂಬರ್ 2: ಸ್ಮಗ್ಲಿಂಗ್ ಅಪರಾಧಕ್ಕಾಗಿ ಕಳೆದ ಒಂದು ದಶಕದಿಂದ ಪಂಜಾಬಿನ ಅಮೃತಸರ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದ ಪಾಕಿಸ್ತಾನದ ಸಹೋದರಿಯರಿಗೆ ಕೊನೆಗೂ ಬಿಡುಗಡೆಯ ಅವಕಾಶ ಒದಗಿಬಂದಿದೆ.

ಪಾಕ್ ಪ್ರಜೆಗಳಿಗೆ ಮೆಡಿಕಲ್ ವೀಸಾ ದೀಪಾವಳಿ ಉಡುಗೊರೆ: ಸುಷ್ಮಾ ಸ್ವರಾಜ್

ಫಾತಿಮಾ ಎಂಬ ಮಹಿಳೆ ಮತ್ತು ಆಕೆಯ ಮಗಳು ಹಿನಾ, ಜೊತೆಗೆ ಸಹೋದರಿ ಮುಮ್ತಾಜ್ ಹತ್ತು ವರ್ಷಗಳಿಂದ ಜೈಲಿನಲ್ಲಿದ್ದರು. ಫಾತಿಮಾ ಜೈಲಿನಲ್ಲಿಯೇ ಹಿನಾಳನ್ನು ಹೆತ್ತಿದ್ದರಿಂದ ಯಾವ ತಪ್ಪು ಮಾಡದಿದ್ದರೂ ಹಿನಾ ತಾಯಿಯೊಂದಿಗೆ ಜೈಲಿನಲ್ಲೇ ವಾಸಿಸುತ್ತಿದ್ದಳು.

Pakistani sisters released from Amritsar jail after a decade

ಯಾವ ತಪ್ಪೂ ಮಾಡದ ತಮ್ಮ ಮಗಳು, ತನ್ನಿಂದಾಗಿ ಶಿಕ್ಷೆ ಅನುಭವಿಸಬಾರದು ಎಂದು ಫಾತಿಮಾ ಖುದ್ದು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದರು. ಸತತ ಕಾನೂನು ಹೋರಾಟದ ನಂತರ ಕೊನೆಗೂ ತಾಯಿ-ಮಗಳು ಮತ್ತು ಸಹೋದರಿಗೆ ಬಿಡುಗಡೆಯ ಭಾಗ್ಯ ದೊರೆತಿದೆ.

"ನಾನು ಬಿಡುಗಡೆಯಾಗಲು ಮುಖ್ಯ ಕಾರಣರಾದ ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಇಡೀ ಭಾರತದ ಜನತೆಗೆ ನಾನು ಋಣಿಯಾಗಿದ್ದೇನೆ. ನನಗೆ ಇದೇ ನಿಜವಾದ ದೀಪಾವಳಿ" ಎಂದು ತುಂಬಿದ್ದ ಕಣ್ಣರಳಿಸಿ ಫಾತಿಮಾ ತಮ್ಮ ಸಂಭ್ರಮ ಹಂಚಿಕೊಂಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Pakistani national Fatima, who had been lodged in the Amritsar Central Jail with her daughter Hinna and sister Mumtaaz on smuggling charges for over 10 years, has finally walked free.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ