Get Updates
Get notified of breaking news, exclusive insights, and must-see stories!

ಭಾರತದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸುವ ISI ಷಡ್ಯಂತ್ರ ಬಹಿರಂಗ

ಜಮ್ಮು ಕಾಶ್ಮೀರ, ಪಂಜಾಬ್ ನಲ್ಲಿ ವಿಧ್ವಂಸಕ ಕೃತ್ಯ ನಡೆಸಲು ಪಾಕಿಸ್ತಾನದ ಐಎಸ್ಐ ಸಂಚು. ಸ್ಫೋಟಕ ಮಾಹಿತಿ ನೀಡಿದ ಭಾರತೀಯ ಗುಪ್ತಚರ ವಿಭಾಗ. ವಿಧ್ವಂಸಕ ಕೃತ್ಯ ನಡೆಸಲು ಭಾರತಕ್ಕೆ ನಾಲ್ವರು ಉಗ್ರರ ರವಾನೆ. ಇನ್ನು 15 ದಿನಗಳಲ್ಲಿ ಸ್ಫೋಟ ಮತ್ತಿತರ

ನವದೆಹಲಿ, ಜೂನ್ 10: ಜಮ್ಮು ಕಾಶ್ಮೀರ ಹಾಗೂ ಪಂಜಾಬ್ ನಲ್ಲಿ ಈ ಮುಂದಿನ 15 ದಿನಗಳಲ್ಲಿ ಭಾರೀ ಪ್ರಮಾಣದ ವಿದ್ವಂಸಕ ಕೃತ್ಯಗಳನ್ನು ನಡೆಸುವ ಪಾಕಿಸ್ತಾನದ ಐಎಸ್ಐ ಸಂಚು ನಡೆಸಿದೆ ಎಂಬ ಭಯಾನಕ ಮಾಹಿತಿಯನ್ನು ಭಾರತದ ಗುಪ್ತಚರ ಇಲಾಖೆ, ಭಾರತ ಸರ್ಕಾರಕ್ಕೆ ಮಾಹಿತಿ ನೀಡಿದೆ ಎಂದು ಕೆಲ ವರದಿಗಳು ಹೇಳಿವೆ.

ವರದಿಗಳ ಪ್ರಕಾರ, ಈ ಕುಕೃತ್ಯಗಳನ್ನು ಸರಾಗವಾಗಿ ನಡೆಸಲು ನಾಲ್ವರು ಉಗ್ರರಿಗೆ ಸೂಕ್ತವಾದ ತರಬೇತಿ ನೀಡಿರುವ ಐಎಸ್ಐ, ಈಗಾಗಲೇ ಅವರನ್ನು ಭಾರತಕ್ಕೆ ಕಳುಹಿಸಿಕೊಟ್ಟಿದೆ. ಅವರು ಭಾರತದ ಪಂಜಾಬ್ ಪ್ರಾಂತ್ಯದ ಗಡಿ ಭಾಗದ ಕಡೆಯಿಂದ ಭಾರತದೊಳಕ್ಕೆ ನುಸುಳಿದ್ದಾರೆಂದು ವಿಚಾರವನ್ನೂ ಗುಪ್ತಚರ ಇಲಾಖೆ ಭಾರತ ಸರ್ಕಾರಕ್ಕೆ ತಿಳಿಸಿದೆ.

Pakistan’s ISI

ಜಮ್ಮುವಿನ ಕತುವಾ, ಪಂಜಾಬ್ ನಲ್ಲಿ ಗುರುದಾಸ್ ಪುರ ಹಾಗೂ ಪಠಾಣ್ ಕೋಟ್ ಗಳೇ ಈ ಉಗ್ರರ ಟಾರ್ಗೆಟ್ ಆಗಿದೆಯೆಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದೆ.

ಈಗಾಗಲೇ ಭಾರತಕ್ಕೆ ಬಂದಿರುವ ಉಗ್ರರಿಗೆ ಬೇಕಾದ ಅಗತ್ಯ ಶಸ್ತ್ರಾಸ್ತ್ರಗಳು, ಬಾಂಬ್ ತಯಾರಿಕೆಯ ಕಚ್ಚಾ ವಸ್ತುಗಳು ಪೂರೈಕೆಯಾಗಿಲ್ಲ. ಅವರಿನ್ನೂ ಅದರ ನಿರೀಕ್ಷೆಯಲ್ಲಿದ್ದಾರೆ. ಇದಕ್ಕಾಗಿ ಔಷಧಿಗಳನ್ನು ತಲುಪಿಸುವ ಕೊರಿಯರ್ ಸಂಸ್ಥೆಯೊಂದರ ಜತೆಗೆ ಒಪ್ಪಂದ ಮಾಡಿಕೊಂಡಿದ್ದು, ಆ ಸಂಸ್ಥೆಯೊಂದರ ಸಹಾಯದಿಂದ ಐಎಸ್ಐ, ಈ ಉಗ್ರರಿಗೆ ಬೇಕಾದ ಕಚ್ಚಾ ವಸ್ತುಗಳನ್ನು, ಬಂದೂಕು ಹಾಗೂ ಇತರ ಶಸ್ತ್ರಾಸ್ತ್ರಗಳನ್ನು ಕಳುಹಿಸಲಿದೆ ಎಂದು ಗುಪ್ತಚರ ಇಲಾಖೆ ಹೇಳಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+