India Pakistan War: ಭಾರತದ ದಾಳಿಗೆ ಬೆಚ್ಚಿದ ಪಾಕಿಸ್ಥಾನ ಪ್ರಧಾನಿ ಗೌಪ್ಯ ಸ್ಥಳಕ್ಕೆ ಶಿಫ್ಟ್! ತೀವ್ರ ಮುಖಭಂಗ
India Pakistan Tensions: ಭಾರತದ ವಿವಿಧ ಗಡಿ ಪ್ರದೇಶಗಳಲ್ಲಿ ದಾಳಿ ಮಾಡಿದ ಪಾಕಿಸ್ತಾನಿ ಕ್ಷಿಪಣಿಗಳನ್ನು ಬ್ಲಾಕ್ ಮಾಡಿದ ಭಾರತೀಯ ಸೇನೆ ತಕ್ಕ ಉತ್ತರ ನೀಡಿದೆ. ನಿರಂತರವಾಗಿ ಗಂಟೆಗಳ ಕಾಲ ಪಾಕ್ ಪೇಶಾವರ ನಗರ, ಮಿಲಿಟರಿ ಪ್ರದೇಶ, ಅಷ್ಟೇ ಯಾಕೆ ಪಾಕಿಸ್ತಾನ ಪ್ರಧಾನಿ ಶಹಬಾಜ್ ಷರೀಷ್ ನಿವಾಸದ ಸಮೀಪವೇ ಮಿಸೈಲ್ ದಾಳಿ ನಡೆಸಿದೆ. ಪರಿಣಾಮ 24 ಗಂಟೆಯಲ್ಲಿ ತಿರುಗೇಟು ಕೊಡುವುದಾಗಿ ಗುಡುಗಿದ್ದ ಶಹಬಾಜ್ ಷರೀಷ್ ಸುರಕ್ಷಿತ ಸ್ಥಳಕ್ಕೆ ಶಿಫ್ಟ್ ಆಗಿದ್ದಾನೆ. ಯುದ್ಧದ ಸಂದರ್ಭದಲ್ಲಿ ಸೈನ್, ಜನರನ್ನು ನಡು ನೀರಲ್ಲಿ ಕೈ ಬಿಟ್ಟು ಜೀವ ಉಳಿಸಿಕೊಳ್ಳಲು ತೆರಳಿದ್ದಾನೆ. ಈ ನಡೆಗೆ ಜಾಗತಿಕವಾಗಿ ಟೀಕೆ ವ್ಯಕ್ತವಾಗಿದೆ.
ಗುರುವಾರ ಸಂಜೆಯಿಂದಲೇ ಕ್ಷಿಪಣಿ ದಾಳಿ ಮಾಡಿದ್ದ ಪಾಕಿಸ್ತಾನದ ದಾಳಿಯನ್ನು ವಿಫಲಗೊಳಿಸಿದ ಭಾರತವು ಪ್ರತಿ ದಾಳಿ ಮಾಡಿ ಸಾಕಷ್ಟು ನಷ್ಟು ಉಂಟು ಮಾಡಿದೆ. ಸಿಂದೂರ ಆಪರೇಷನ್ 2ರಲ್ಲೂ ಸಹ ಭಾರತವು ಯಶಸ್ವಿಯಾಗಿದೆ. ಪಾಕಿಸ್ತಾನಕ್ಕೆ ಮುಟ್ಟಿನೋಡಿಕೊಳ್ಳುವಂತೆ ಮಾಡಿದೆ. ಇದಲ್ಲದೇ ಪಾಕಿಸ್ತಾನದ F 16 ಫೈಟರ್ ಜೆಟ್ ಅನ್ನು ಭಾರತೀಯ ವಾಯು ಪಡೆ ಉಡೀಸ್ ಮಾಡಿದೆ. ಪಾಕ್ ಮಿಲಿಟರಿ ಸಾಧನೆಗಳನ್ನು ಧ್ವಂಸಗೊಳಿಸುತ್ತಿದ್ದಂತೆ ಎಚ್ಚೆತ್ತ ಪಾಕ್ ಪ್ರಧಾನಿ ಷರಿಪ್ ಅಡಿಗಿ ಕೂತಿದ್ದಾನೆ.

ಪಾಕ್ ಪ್ರಧಾನಿ, ಸೇನಾ ಮುಖ್ಯಸ್ಥರಿಗೆ ನಡುಕ
ಪಾಕ್ ಸೇನಾ ಪ್ರದೇಶ, ರಾವಲ್‌ಪಿಂಡಿ ಭಾಗದಲ್ಲಿ ಭಾರತ ಕ್ಷಿಪಣಿ ದಾಳಿ ಮಾಡಿದೆ. ಭಾರತದ S 400 ರಕ್ಷಣಾ ವ್ಯವಸ್ಥೆಯಿಮದ ಪಾಕ್ ಕ್ಷಿಪಣಿಗಳನ್ನು, ಡ್ರೋನ್‌ಗಳನ್ನು ಧ್ವಂಸಗೊಳಿಸಲಾಗಿದೆ. ಇಸ್ಲಾಮಾಬಾದ್‌ನ ಹೈ-ಸೆಕ್ಯುರಿಟಿ ವಲಯಗಳ ಬಳಿ ಸ್ಫೋಟಗಳು ಸಂಭವಿಸಿವೆ. ಇದೆಲ್ಲ ಅರಿತು ಪಾಕ್ ಪ್ರಧಾನಿಯನ್ನು ಗೌಪ್ಯ ಸ್ಥಳಕ್ಕೆ ಅಧಿಕಾರಿಗಳು ಸ್ಥಳಾಂತರಿಸಿದ್ದಾರೆ. ಪ್ರಧಾನಿ ಷರೀಫ್ ಮತ್ತು ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ಸೇರಿದಂತೆ ಪ್ರಮುಖ ಸರ್ಕಾರಿ ವ್ಯಕ್ತಿಗಳ ಸುತ್ತ ಭದ್ರತಾ ಕ್ರಮಗಳನ್ನು ಗಮನಾರ್ಹವಾಗಿ ತೀವ್ರಗೊಳಿಸಲಾಗಿದೆ. ಈ ಮೂಲಕ ಸದಾ ಶಾಂತಿ ಕಾಯ್ದುಕೊಳ್ಳುವ ಭಾರತಕ್ಕೆ ತೊಂದರೆ ನೀಡಿದರೆ ಎಂತಹ ತಿರುಗೇಟು ನೀಡಲು ಸಿದ್ಧ ಎಂಬುದು ವಿಶ್ವಕ್ಕೆ ಜಗಜ್ಜಾಹೀರಾಗಿದೆ.
ದೆಹಲಿ ಇಂಡಿಯಾ ಗೇಟ್ ಖಾಲಿ..
ಭಾರತದ ದಾಳಿಯಿಂದಾಗಿ ಪಾಕಿಸ್ತಾನ ಗಡಿ ಭಾಗಗಳು, ಜಮ್ಮು ಮತ್ತು ಕಾಶ್ಮೀರ ಉಗ್ರರ ನೆಲೆಗಳು, ಪಾಕ್ ಪ್ರಧಾನಿ ನಿವಾಸ ಸುತ್ತಮುತ್ತ ಸ್ಥಳಗಳಲ್ಲಿ ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ. ಪಾಕ್‌ನ ಎಲ್ಲ ಮಿಸೈಲ್‌ಗಳನ್ನು ನೆಲಕ್ಕುರುಳಿಸಿದ ಭಾರತ ಭಾರತದ ದಾಳಿ ಜೊತೆಗೆ ಜೊತೆಗೆ ದೆಹಲಿ ಇಂಡಿಯಾ ಗೇಟ್‌ನಿಂದ ಜನರನ್ನು ಖಾಲಿ ಮಾಡಿಸಿದೆ. ಜನರ ಸುರಕ್ಷತೆಗಾಗಿ ಎಲ್ಲಿಯೂ ನಿಲ್ಲದಂತೆ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಸೂಚಿಸಿದೆ. ದೆಹಲಿ ಸೇರಿದಂತೆ ಭಾರತ ಗಡಿಗಳಲ್ಲಿ, ಗಡಿ ರಾಜ್ಯಗಳಲ್ಲಿ ಕೇಂದ್ರ ಸರ್ಕಾರ ಹೈ ಅಲರ್ಟ್ ಘೋಷಿಸಿದೆ..












Click it and Unblock the Notifications