ಭಾರತ ವಿರೋಧಿ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಹಿಂಸೆ, ಬೆಂಕಿ!

ಭಾರತದ ಮುಕುಟ ಮಣಿ & ಭಾರತದ ಕಿರೀಟ ಕಾಶ್ಮೀರದ ಮೇಲೆ ಕಣ್ಣಿಟ್ಟಿದ್ದ ಪಾಕಿಸ್ತಾನಕ್ಕೆ, ಇದೀಗ ಪಾಕ್ ಆಕ್ರಮಿತ ಕಾಶ್ಮೀರದ ಜನರೇ ಬುದ್ದಿ ಕಲಿಸುತ್ತಿದ್ದಾರೆ. ಪಾಕಿಸ್ತಾನ ಈಗ ತನ್ನದೇ ದೇಶದ ಪ್ರಜೆಗಳನ್ನು ಸಮಾಧಾನ ಮಾಡುವಲ್ಲಿ ನಲುಗಿ ಹೋಗಿದೆ. ಹೀಗಾಗಿ ಪ್ರತಿಭಟನೆಗಳ ಮಧ್ಯೆ ಹಿಂಸಾಚಾರ ಕೂಡ ಭುಗಿಲೆದ್ದು ಕಾಶ್ಮೀರ ಅತ್ಯಂತ ಸೂಕ್ಷ್ಮ ಪ್ರದೇಶವಾಗಿದೆ. ಹಾಗಾದ್ರೆ ಅಸಲಿಗೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಆಗಿದ್ದೇನು?

ಪಾಕಿಸ್ತಾನ ಹಣದುಬ್ಬರ ಹೆಗಿದೆ ಅಂದ್ರೆ ಅಲ್ಲಿನ ಜನ ತುತ್ತು ಅನ್ನ ತಿನ್ನಲು ದಿನ ಪೂರ್ತಿ ದುಡಿದು ಪರದಾಡಬೇಕಿದೆ. ಯಾಕಂದ್ರೆ ಇಡೀ ಪಾಕಿಸ್ತಾನದ ಆರ್ಥಿಕತೆ ಬುಡಮೇಲಾಗಿ ಹೋಗಿ, ಜನರ ಬದುಕು ಬೀದಿಗೆ ಬಿದ್ದಿದೆ. ಆಹಾರ ಪದಾರ್ಥ ಬೆಲೆ ಗಗನಕ್ಕೇರುತ್ತಿದ್ದು, ಹಸಿವಿನಿಂದ ಸಾಯುವ ಪರಿಸ್ಥಿತಿ ಎದುರಾಗಿದೆ. ಪಾಕಿಸ್ತಾನದಲ್ಲಿ ಈಗ ಗ್ರಾಹಕ ಬೆಲೆ ಸೂಚ್ಯಂಕ ಮಿತಿ ಮೀರಿದ್ದು ಗೋಧಿ ದಾಸ್ತಾನು ಮುಗಿಯುವ ಹಂತಕ್ಕೆ ಬಂದಿದೆ.

Pakistan Occupied Kashmir Became More Sensitive Area After The Protest Started Against Price Hike

ಅಮಾಯಕ ಜನರ ಮೇಲೆ ಗುಂಡು?

ಪಾಕಿಸ್ತಾನದ ಅದರಲ್ಲೂ ಪಾಕ್ ಆಕ್ರಮಿತ ಕಾಶ್ಮೀರದ ಜನರ ಮೂಲ ಆಹಾರವೇ ಗೋಧಿ. ಹೀಗಾಗಿ ಗೋಧಿ ಹಿಟ್ಟಿಗಾಗಿ ಕೊಲೆಗಳೇ ನಡೆದು, ಜನ ನಲುಗಿ ಹೋಗಿದ್ದಾರೆ. ಇಂತಹ ಪರಿಸ್ಥಿತಿ ಎದುರಾದ ಸಮಯದಲ್ಲೇ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಗೋಧಿ ಹಿಟ್ಟು ಸೇರಿದಂತೆ ಹಲವು ವಿಚಾರಗಳಿಗೆ ಹೋರಾಟ ಭುಗಿಲೆದ್ದಿದೆ. ಆದರೆ ಪ್ರತಿಭಟನೆ ನಿಯಂತ್ರಿಸಲು ಆಗದ ಪಾಕಿಸ್ತಾನ ಸರ್ಕಾರ, ಅಮಾಯಕ ಜನರ ಮೇಲೆ ಗುಂಡು ಹಾರಿಸುತ್ತಿದೆ ಎಂಬ ಆರೋಪ ಕೇಳಿಬಂದಿದೆ.

ಪಾಕಿಸ್ತಾನದ ಜುಟ್ಟಿಗೆ ಮಲ್ಲಿಗೆ ಬೇಕು!

ಹೊಟ್ಟೆಗೆ ಹಿಟ್ಟು ಇಲ್ಲ ಅಂದ್ರು ಜುಟ್ಟಿಗೆ ಮಲ್ಲಿಗೆ ಬೇಕು, ಅಷ್ಟಕ್ಕೂ ಈ ಮಾತು ಪಾಕ್‌ಗೆ ಹಾಗೂ ಅಲ್ಲಿನ ಭ್ರಷ್ಟ ರಾಜಕಾರಣಿಗಳಿಗೆ ಸರಿಯಾಗಿ ಅನ್ವಯಿಸುತ್ತದೆ. ಯಾಕಂದ್ರೆ ಪಾಕಿಸ್ತಾನದ ಜನರು ತಿನ್ನಲು ಆಹಾರ ಸಿಗುತ್ತಿಲ್ಲ ಅಂತಾ ನರಳುತ್ತಿದ್ದಾರೆ. ಪಾಕಿಸ್ತಾನದ ಪ್ರಮುಖ ನಗರಗಳಲ್ಲಿ ಈಗ 1 ಕೆಜಿ ಗೋಧಿ ಹಿಟ್ಟಿಗೆ ಹತ್ತಿರ ಹತ್ತಿರ 500 ರೂಪಾಯಿ ಬೆಲೆ ಇದೆ. ತರಕಾರಿಗಳು ಕೈಗೆ ಸಿಗುತ್ತಿಲ್ಲ, ಹೀಗಿದ್ದಾಗಲೇ ಪಾಕ್ ಆಕ್ರಮಿತ ಕಾಶ್ಮೀರದ ರಾಜಧಾನಿ ಮುಜಫ್ಫರಾಬಾದ್‌ನಲ್ಲಿ ವಿದ್ಯುತ್ ದರ ಮತ್ತು ಗೋಧಿ ಹಿಟ್ಟಿನ ಭಾರಿ ಬೆಲೆ ಏರಿಕೆಯಿಂದ ತತ್ತರಿಸಿ ಜನಗಳು ಹೋರಾಟ ಆರಂಭಿಸಿದ್ದರು.

'ಪಾಕ್ ಆಕ್ರಮಿತ ಕಾಶ್ಮೀರ' ಭಾರತಕ್ಕೆ?

ಪ್ರತಿಭಟನೆಯು ಈಗ ಹಿಂಸೆಗೆ ತಿರುಗಿದ್ದು, ಭದ್ರತಾ ಪಡೆ ಹಾಗೂ ಪ್ರತಿಭಟನಕಾರರ ನಡುವೆ ಹಿಂಸಾಚಾರ ನಡೆದು ಗುಂಡು ಹಾರಿಸಲಾಗಿದೆ. ಗಲಾಟೆಯಲ್ಲಿ ಮೂವರು ಮೃತಪಟ್ಟಿದ್ದಾರೆ. ಪಾಕ್ ಆಕ್ರಮಿತ ಕಾಶ್ಮೀರ ಮೊದಲೇ ವಿವಾದಿತ ಜಾಗವಾಗಿದ್ದು, ಇಲ್ಲಿನ ಸ್ಥಿರತೆ ಅಂದರೆ ಶಾಂತಿ ಕಾಪಾಡುವುದು ಪಾಕಿಸ್ತಾನ ಸರ್ಕಾರಕ್ಕೆ ಅತಿ ಮುಖ್ಯ. ಆದರೆ ಆಗಿರುವುದೇ ಬೇರೆ, ಏನೆಂದ್ರೆ ಪಾಕಿಸ್ತಾನ ಸರ್ಕಾರ ಈಗ ಬೆಲೆ ನಿಯಂತ್ರಣ ಮಾಡಲು ಆಗದೆ ಅಲ್ಲಿನ ಜನರು ರೊಚ್ಚಿಗೆದ್ದು ತಮ್ಮ ಸರ್ಕಾರದ ವಿರುದ್ಧವೇ ಭೀಕರ ಕಾಳಗಕ್ಕೆ ಇಳಿದಿದ್ದಾರೆ. ಹೀಗಾಗಿ ಪಾಕಿಸ್ತಾನದ ವಶಕ್ಕೆ ಹೋಗಿದ್ದ ಭಾರತದ ಭೂ ಭಾಗವಾದ 'ಪಾಕ್ ಆಕ್ರಮಿತ ಕಾಶ್ಮೀರ' ಮತ್ತೆ ಭಾರತಕ್ಕೆ ಸೇರುತ್ತಾ? ಎಂಬ ಚರ್ಚೆ ಶುರುವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+