ಪಾಕ್ ವೆಬ್ ಸೈಟ್ ಹ್ಯಾಕ್: ಭಾರತದ ಧ್ವಜ, ರಾಷ್ಟ್ರಗೀತೆ ಡಿಸ್ ಪ್ಲೇ !

Posted By:
Subscribe to Oneindia Kannada

ಇಸ್ಲಾಮಾಬಾದ್, ಆಗಸ್ಟ್ 3: ಪಾಕಿಸ್ತಾನದ ಸರ್ಕಾರಿ ವೆಬ್ ಸೈಟ್ ಒಂದನ್ನು ಹ್ಯಾಕ್ ಮಾಡಿರುವ ಕೆಲ ವ್ಯಕ್ತಿಗಳು ಅದರ ಹೋಂ ಪೇಜ್ ನಲ್ಲಿ (ಮುಖಪುಟ) ಭಾರತದ ಬಾವುಟ ಹಾರಿಸಿದ್ದಾರೆ. ಅಲ್ಲದೆ, ವೆಬ್ ಸೈಟ್ ಗೆ ಭೇಟಿ ಕೊಡುವವರಿಗೆ ಭಾರತದ ರಾಷ್ಟ್ರಗೀತೆ ಜನಗಣ ಮೊಳಗುವಂತೆ ಮಾಡಿದ್ದಾರೆ. ಇದರ ಜತೆಯಲ್ಲೇ, ಇದೇ ತಿಂಗಳ 15ರಂದು ನಡೆಯಲಿರುವ ಸ್ವಾತಂತ್ರ್ಯ ದಿನಾಚರಣೆಯ ಶುಭ ಸಂದೇಶವನ್ನೂ ನೀಡಲಾಗಿದೆ.

ಜಲ ಸಮರ: ಪಾಕಿಸಾನ ವಿರುದ್ಧ ಭಾರತಕ್ಕೆ ಜಯ

ಎಂದಿನಂತೆ ವೆಬ್ ಸೈಟ್ ಕಾರ್ಯನಿರ್ವಹಿಸುತ್ತಿತ್ತು. ಆದರೆ, ಮಧ್ಯಾಹ್ನ 2: 45ರ ಹೊತ್ತಿಗೆ, ಇದ್ದಕ್ಕಿದ್ದಂತೆ, ಆ ವೆಬ್ ಸೈಟ್ ನ ಮುಖಪುಟದಲ್ಲಿ ರಾಷ್ಟ್ರಗೀತೆ, ರಾಷ್ಟ್ರ ಧ್ವಜ ಕಾಣಲಾರಂಭಿಸಿತು ಎಂದು ಮೂಲಗಳು ತಿಳಿಸಿವೆ.

ಮಹಿಳೆಗೆ ಅಶ್ಲೀಲ ಸಂದೇಶ ಕಳಿಸಿದ ಮಾಜಿ ಕ್ರಿಕೆಟರ್

ಇಲ್ಲಿಗೆ ಸರಿಯಾಗಿ ನಾಲ್ಕು ತಿಂಗಳುಗಳ ಹಿಂದೆ, ದೆಹಲಿಯ ಇಂಡಿಯನ್ಸ್ ಇನ್ಸಿಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ), ವಾರಣಾಸಿಯ ಐಐಟಿ, ಅಲೀಗಢ ಮುಸ್ಲಿಂ ವಿಶ್ವವಿದ್ಯಾಲಯ ಹಾಗೂ ದೆಹಲಿ ವಿಶ್ವವಿದ್ಯಾಲಯಗಳ ವೆಬ್ ಸೈಟ್ ಗಳನ್ನು ಹ್ಯಾಕ್ ಮಾಡಿ, ಅದರಲ್ಲಿ ಪಾಕಿಸ್ತಾನ ಬಾವುಟವನ್ನು ತೋರ್ಪಡಿಸಲಾಗಿತ್ತು. ತಕ್ಷಣವೇ ಎಚ್ಚೆತ್ತುಕೊಂಡಿದ್ದ ಆ ವಿದ್ಯಾಸಂಸ್ಥೆಗಳ ಆಡಳಿತ ಮಂಡಳಿಗಳು, ತಮ್ಮ ವೆಬ್ ಸೈಟ್ ಅನ್ನು ಬೇಗನೇ ಸರಿ ಮಾಡಿಸಿದ್ದರು.

ಹೆಗ್ಗಳಿಕೆ ತಿಳಿಸುವ ಪ್ರಯತ್ನ

ಹೆಗ್ಗಳಿಕೆ ತಿಳಿಸುವ ಪ್ರಯತ್ನ

ಇದು ಸುಮಾರು ತಿಂಗಳುಗಳಿಂದ, ಎರಡೂ ದೇಶಗಳ ನಡುವೆ ಕೆಲ ತಿಂಗಳುಗಳಿಂದ ನಡೆಯುತ್ತಿರುವ ಹ್ಯಾಕ್ ಸಮರ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹಾಗೆ ಹ್ಯಾಕ್ ಮಾಡಿದಾಗಲೆಲ್ಲಾ, ತಮ್ಮ ಅಭಿಮಾನದ ದೇಶದ ರಾಷ್ಟ್ರಧ್ವಜ, ರಾಷ್ಟ್ರಗೀತೆ, ತಮ್ಮ ರಾಷ್ಟ್ರದ ಹೆಗ್ಗಳಿಕೆ, ಸಾಧನೆಗಳು, ಮಿಲಿಟರಿ ಶಕ್ತಿಗಳ ಬಗ್ಗೆ ಮಾಹಿತಿ ಹಾಕುವುದು ವಾಡಿಕೆ.

ಕಿಡಿಗೇಡಿಗಳ ಕೃತ್ಯ

ಕಿಡಿಗೇಡಿಗಳ ಕೃತ್ಯ

ಇದಲ್ಲದೆ, ವೆಬ್ ಸೈಟ್ ನಲ್ಲಿದ್ದ ಯಾವುದೇ ಮಾಹಿತಿಯನ್ನು ಕದಿಯುವಂಥ ಕೆಲಸಗಳನ್ನು ಈವರೆಗೆ ಹ್ಯಾಕರ್ ಗಳು ಮಾಡಿಲ್ಲ. ಅದೊಂದೇ ಸಮಾಧಾನ. ಹಾಗಾಗಿ, ಇದು ದೇಶಭಕ್ತಿಯ ಗೀಳು ಹಚ್ಚಿಕೊಂಡಿರುವ ಕಿಡಿಗೇಡಿಗಳ ಕೃತ್ಯವೆನ್ನಲಡ್ಡಿಯಿಲ್ಲ ಎನ್ನುತ್ತಾರೆ ಕೆಲ ಅಧಿಕಾರಿಗಳು.

ರೈಲ್ವೇ ಇಲಾಖೆಯ ವೆಬ್ ಸೈಟ್ ಗೇ ಕನ್ನ

ರೈಲ್ವೇ ಇಲಾಖೆಯ ವೆಬ್ ಸೈಟ್ ಗೇ ಕನ್ನ

ಮೇಲೆ ತಿಳಿಸಿದಂತೆ, ದೇಶದ ನಾಲ್ಕು ಪ್ರಮುಖ ವಿದ್ಯಾಸಂಸ್ಥೆಗಳ ವೆಬ್ ಸೈಟ್ ಗಳನ್ನು ಹ್ಯಾಕ್ ಮಾಡುವುದಕ್ಕೂ ಮುನ್ನ ಇಂಥದ್ದೊಂದು ಪುಟ್ಟ ಹ್ಯಾಕ್ ವಾರ್ ನಡೆದಿತ್ತು. ಪಾಕಿಸ್ತಾನದ ಹ್ಯಾಕರ್ ಗಳು ಭಾರತದ ಸರ್ಕಾರಿ ವೆಬ್ ಸೈಟ್ ಒಂದನ್ನು ಹ್ಯಾಕ್ ಮಾಡಿದ್ದರು. ಇದಕ್ಕೆ ಪ್ರತಿಯಾಗಿ, ಭಾರತೀಯ ಹ್ಯಾಕರ್ ಗಳು ಪಾಕಿಸ್ತಾನದ ರೈಲ್ವೇ ಇಲಾಖೆಯ ವೆಬ್ ಸೈಟ್ ಅನ್ನೇ ಹ್ಯಾಕ್ ಮಾಡಿದ್ದರು.

ಭಾರತದ ಹಿರಿಮೆ ಸಾರಿದ್ದ ಹ್ಯಾಕರ್ ಗಳು!

ಭಾರತದ ಹಿರಿಮೆ ಸಾರಿದ್ದ ಹ್ಯಾಕರ್ ಗಳು!

ಇವಿಷ್ಟೇ ಅಲ್ಲ, ಪಾಕಿಸ್ತಾನದ ಜೈಲಿನಲ್ಲಿ ಬಂಧಿಯಾಗಿರುವ ಭಾರತದ ನೌಕಾಪಡೆಯ ಮಾಜಿ ಅಧಿಕಾರಿ ಕುಲಭೂಷಣ್ ಜಾಧವ್ ಅವರನ್ನು ಅಲ್ಲಿನ ಮಿಲಿಟರಿ ಕೋರ್ಟ್ ಗಲ್ಲು ಶಿಕ್ಷೆ ನೀಡಿದ ಬೆನ್ನಲ್ಲೇ ಈ ರೀತಿ ಹ್ಯಾಕ್ ಮಾಡಿ, ಭಾರತದ ಹಿರಿಮೆ ಸಾರುವ ಸಂದೇಶಗಳನ್ನು ಅಲ್ಲಿ ಹಾಕಲಾಗಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Unidentified hackers have posted Indian national anthem and Independence Day greetings on a Pakistani government website on August 2nd, 2017.
Please Wait while comments are loading...