ಗಾಂಜಾ.. ಗಾಂಜಾ.. ರೈತರಿಗೆ ಗಾಂಜಾ ಬೆಳೆಯಲು ಪರ್ಮಿಷನ್!

ಗಾಂಜಾ ಅಂದ್ರೆ ಅದು ನಿಷೇಧಿತ ವಸ್ತು ಹೀಗಾಗಿ ಗಾಂಜಾ ಬೆಳೆಯುವುದು & ಬಳಕೆ ಮಾಡುವುದು ಕೂಡ ನಿಷಿದ್ಧವಾಗಿತ್ತು. ಆದರೆ ಇದೀಗ ಎಲ್ಲವೂ ಬದಲಾಗಿ ಹೋಗುತ್ತಿದ್ದು, ಈ ವಿಚಾರದಲ್ಲಿ ರೈತರಿಗೆ ಗುಡ್ ನ್ಯೂಸ್ ಕೊಟ್ಟಿದೆ ಸರ್ಕಾರ. ಈ ಮೂಲಕ ರೈತರು ತಮ್ಮ ಜಮೀನಿನಲ್ಲಿ, ಗಾಂಜಾ ಬೆಳೆಯಲು ಅನುಮತಿ ಸಿಕ್ಕಿದೆ. ಹಾಗಾದ್ರೆ ಗಾಂಜಾ ಬೆಳೆಯಲು ಏನು ರೂಲ್ಸ್..? ಮುಂದೆ ಓದಿ.

ಗಾಂಜಾ ಅಂದ್ರೆ ನಶೆ ಪದಾರ್ಥ, ಜೀವನ ಹಾಳು ಮಾಡುತ್ತದೆ ಎಂಬ ಆರೋಪಗಳು ಇದ್ದು ಹೀಗಾಗಿ ಜಗತ್ತಿನ ಬಹುತೇಕ ದೇಶಗಳಲ್ಲಿ ಗಾಂಜಾ ಬ್ಯಾನ್ ಆಗಿದೆ. ಆದರೆ ಇದೇ ಗಾಂಜಾಗೆ ಔಷಧೀಯ ಗುಣಗಳು ಹೇರಳವಾಗಿ ಇದ್ದು, ಅದೆಷ್ಟೋ ಔಷಧಗಳಿಗೆ ಇದೇ ಗಾಂಜಾ ಆಧಾರ ಎನ್ನಬಹುದು. ಹೀಗಿದ್ದಾಗ ಗಾಂಜಾ ಬೆಳೆಯಲು ರೈತರಿಗೆ ಅನುಮತಿ ನೀಡಿರುವುದು ಯಾಕೆ? ಇದರಿಂದ ಸರ್ಕಾರಕ್ಕೆ ಏನು ಲಾಭ? ಆರ್ಥಿಕತೆ ಇದರಿಂದ ಸರಿ ಹೋಗುತ್ತದೆಯಾ? ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯಲು ಮುಂದೆ ಓದಿ.

Pakistan Government Taken Another Step To Legalize The Cannabis

ಬೇಡಿ ಬದುಕುತ್ತಿದೆ ಪಾಪಿ ಪಾಕಿಸ್ತಾನ!

ಅಷ್ಟಕ್ಕೂ ಹೀಗೆ ರೈತರು ಗಾಂಜಾ ಬೆಳೆಯಲು ಪರ್ಮಿಷನ್ ನೀಡಿರುವುದು ಭಾರತದಲ್ಲಿ ಅಲ್ಲ ಬದಲಾಗಿ ಪಾಕಿಸ್ತಾನ ಅನ್ನೋ ಪಾಪಿ ದೇಶದಲ್ಲಿ. ಹೌದು, ಕೈಯಲ್ಲಿ ನಯಾ ಪೈಸೆ ಇಲ್ಲದೆ ಅವರಿವರ ಬಳಿ ಬೇಡಿಕೊಂಡು ಜೀವನ ಸಾಗಿಸುತ್ತಿರುವ ಪಾಕಿಸ್ತಾನದಲ್ಲಿ ಆತಂಕ ಹೆಚ್ಚಾಗಿದೆ. ಪಾಕಿಸ್ತಾನದ ಜನರು ಅಲ್ಲಿನ ಸರ್ಕಾರಗಳ ವಿರುದ್ದ ತಿರುಗಿಬಿದ್ದಿದ್ದಾರೆ. ಹೀಗಿದ್ದಾಗಲೇ ಹಣ ಮತ್ತು ಬಡತನ ಸಮಸ್ಯೆಗೆ ಒಂದು ಪರಿಹಾರ ಕಂಡುಕೊಳ್ಳಲು ಈಗ ಪಾಕಿಸ್ತಾನ ಸರ್ಕಾರವು ಮುಂದಾಗಿದೆ. ಈ ಕಾರಣಕ್ಕೆ ರೈತರಿಗೆ ಗಾಂಜಾ ಬೆಳೆಯಲು ಅನುಮತಿ ನೀಡುತ್ತಿದೆಯಂತೆ.

ಕಂಡ ಕಂಡ ಕಡೆ ಸಾಲ!

ಪಾಕಿಸ್ತಾನ ತಲೆ ಮೇಲೆ ಲಕ್ಷಾಂತರ ಕೋಟಿ ರೂ. ಸಾಲ ಇದ್ದು, ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ ಸೇರಿದಂತೆ ಕಂಡ ಕಂಡ ಕಡೆ ಸಾಲ ಮಾಡಿದೆ ಪಾಕಿಸ್ತಾನ. ಅದರಲ್ಲೂ, ಈ ಪೈಕಿ ಚೀನಾ ಬಳಿಯೂ ಸಾವಿರಾರು ಕೋಟಿ ಸಾಲ ಮಾಡಿಕೊಂಡು ಪಾಕ್ ಒದ್ದಾಡಿದೆ. ಹೀಗಿದ್ದಾಗ, ಅನಗತ್ಯ ವೆಚ್ಚಕ್ಕೆ ಕಡಿವಾಣ ಹಾಕಲು ಪರದಾಡುತ್ತಿದೆ. ಏನೇ ಮಾಡಿದರೂ ಪರಿಸ್ಥಿತಿ ಮಾತ್ರ ಹಿಡಿತಕ್ಕೆ ಸಿಗುತ್ತಿಲ್ಲ. ಹೀಗಾಗಿ ಕೊನೇ ಪಕ್ಷ ಗಾಂಜಾ ಬೆಳೆ ಬೆಳೆದು ಒಂದಷ್ಟು ದುಡ್ಡು ಮಾಡೋಣ, ಅನ್ನೋ ಚಿಂತನೆಯಲ್ಲಿ ಇದೆ ಪಾಕಿಸ್ತಾನ ಸರ್ಕಾರ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+