ಭಾರತ- ಚೀನಾ ವಿರಸದ ವೇಳೆಯಲ್ಲಿ 'ಶಕುನಿ' ವೇಷ ಹಾಕಿದ ಪಾಕ್

Posted By:
Subscribe to Oneindia Kannada

ನವದೆಹಲಿ, ಜುಲೈ 18: ಸಿಕ್ಕಿಂ ಗಡಿ ಪ್ರದೇಶದಲ್ಲಿ ಭಾರತ ಹಾಗೂ ಚೀನಾದ ಸೇನೆಗಳು ಪರಸ್ಪರ ಮುಖಾಮುಖಿಯಾಗಿ ನಿಂತಿರುವ ಈ ಹೊತ್ತಿನಲ್ಲಿ ಪಾಕಿಸ್ತಾನದ ಮಾಧ್ಯಮಗಳು ಉರಿಯುವ ಬೆಂಕಿಗೆ ತುಪ್ಪ ಸುರಿಯುವಂತೆ ಮಾಡುತ್ತಿವೆ.

ಭಾರತದ ಸಿಕ್ಕಿಂ ರಾಜ್ಯದ ಗಡಿ ಭಾಗದಲ್ಲಿರುವ ಡೊಕ್ಲಾಮ್ ಎಂಬ ಪ್ರಾಂತ್ಯವು ದಶಕಗಳಿಂದ ವಿವಾದಾತ್ಮಕ ಪ್ರದೇಶವಾಗಿದ್ದು, ಇದರ ಮೇಲೆ ಹಕ್ಕು ಸ್ಥಾಪಿಸಲು ಚೀನಾ ಪದೇ ಪದೇ ಪ್ರಯತ್ನ ಪಡುತ್ತಿದೆ.

ಇದನ್ನು ಭಾರತ ಪ್ರತಿರೋಧಿಸಿದ್ದಕ್ಕೆ ಅಲ್ಲಿ ಚೀನಾ ಸರ್ಕಾರ, ಇತ್ತೀಚೆಗೆ ಹೆಚ್ಚಿನ ಸಂಖ್ಯೆಯಲ್ಲಿ ಸೈನಿಕರನ್ನು ಜಮಾವಣೆಗೊಳಿಸಿತ್ತು. ಇದಕ್ಕೆ ಪ್ರತಿಯಾಗಿ, ಭಾರತವೂ ಅಲ್ಲಿ ತನ್ನ ಹೆಚ್ಚುವರಿ ಸೇನಾ ಪಡೆಯನ್ನು ನಿಯೋಜಿಸುವ ಮೂಲಕ ತನ್ನ ತಾಕತ್ತು ಪ್ರದರ್ಶಿಸಿತ್ತು. ಈ ಬೆಳವಣಿಗೆಗಳು ಉಭಯ ದೇಶಗಳ ನಡುವೆ ಯುದ್ಧದ ಕಾರ್ಮೋಡವನ್ನು ಹುಟ್ಟುಹಾಕಿವೆ.

ಈ ವೇಳೆಯಲ್ಲಿ ಸಮಯ ಸಾಧಕತನ ಅಳವಡಿಸಿಕೊಂಡಿರುವ ಪಾಕಿಸ್ತಾನದ ಮಾಧ್ಯಮಗಳು, ಭಾರತ- ಚೀನಾ ನಡುವಿನ ಪ್ರಕ್ಷುಬ್ಧ ಪರಿಸ್ಥಿತಿಯನ್ನು ಮತ್ತಷ್ಟು ಉಲ್ಬಣಗೊಳಿಸುವಂಥ ಆಧಾರರಹಿತ ಸುದ್ದಿಗಳನ್ನು ಬಿತ್ತರಿಸುತ್ತಿವೆ ಎಂದು ಕೇಂದ್ರ ವಿದೇಶಾಂಗ ಸಚಿವಾಲಯ ದೂರಿದೆ. ಅತ್ತ, ಚೀನಾ ಕೂಡ ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವುದು ಇಲ್ಲಿ ಗಮನಾರ್ಹ.

ಆದರೆ, ಇದರ ನಡುವೆಯೂ ಎರಡೂ ದೇಶಗಳಲ್ಲಿ ಪರಸ್ಪರ ಎತ್ತಿಕಟ್ಟುವ ಕೆಲಸವನ್ನು ಪಾಕಿಸ್ತಾನ ಮಾಧ್ಯಮಗಳು ಮಾಡುತ್ತಿವೆ. ಅವುಗಳ ಝಲಕ್ ಇಲ್ಲಿದೆ.

ಸುದ್ದಿಯಲ್ಲಿ ಸುಳ್ಳಿನ ಕಂತೆ

ಸುದ್ದಿಯಲ್ಲಿ ಸುಳ್ಳಿನ ಕಂತೆ

ಪಾಕಿಸ್ತಾನದ ದುನಿಯಾ ಟಿವಿಯು ಇತ್ತೀಚೆಗೆ ವರದಿಯೊಂದನ್ನು ನೀಡಿ, ಡೊಕ್ಲಾಮ್ ಪ್ರದೇಶದಲ್ಲಿ ಭಾರತ ಹಾಗೂ ಚೀನಾ ದೇಶಗಳ ಸೇನೆಗಳ ನಡುವೆ ಗುಂಡಿನ ಚಕಮಕಿಯಾಗಿದ್ದು ಇದರಲ್ಲಿ ಭಾರತದ ಸುಮಾರು 150ಕ್ಕೂ ಹೆಚ್ಚು ಸೈನಿಕರು ಮೃತಪಟ್ಟಿದ್ದಾರೆಂದು ಹೇಳಿದೆ.

ಭಾರತದಿಂದಲೂ ತಿರಸ್ಕಾರ

ಭಾರತದಿಂದಲೂ ತಿರಸ್ಕಾರ

ಈ ಸುದ್ದಿ ಪ್ರಕಟವಾದ ಬೆನ್ನಿಗೇ ಸ್ಪಷ್ಟನೆ ನೀಡಿದ ಚೀನಾ ಸರ್ಕಾರ, ಡೊಕ್ಲಾಮ್ ನಲ್ಲಿ ಯಾವುದೇ ಗುಂಡಿನ ಚಕಮಕಿ ನಡೆದಿಲ್ಲ ಎಂದು ಹೇಳಿದೆ. ಭಾರತ ಸರ್ಕಾರವೂ ಅದನ್ನು ತಿರಸ್ಕರಿಸಿದೆ.

ಆಧಾರ ರಹಿತ ಸುದ್ದಿ

ಆಧಾರ ರಹಿತ ಸುದ್ದಿ

ಇನ್ನು, ಪಾಕಿಸ್ತಾನದ ಮತ್ತೊಂದು ಪ್ರತಿಷ್ಠಿತ ಸುದ್ದಿ ವಾಹಿನಿಯಾದ ಡಾನ್ ಟಿವಿ ಕೂಡ ಇಂಥದ್ದೇ ಸುದ್ದಿಯನ್ನು ಇತ್ತೀಚೆಗೆ ಬಿತ್ತರಿಸಿದೆ. ಭಾರತ-ಚೀನಾ ಸೇನೆಯ ನಡುವೆ ಗುಂಡಿನ ಚಕಮಕಿ. ಕೆಲವಾರು ಭಾರತೀಯ ಸೈನಿಕರ ಸಾವು ಎಂಬ ಸಾರಾಂಶದ ಸುದ್ದಿಯನ್ನು ಅದು ಪ್ರಕಟಿಸಿದೆ.

Champions Trophy 2017 :5 Mistake Virat Kohli Did In Final Against Pakistan | Oneindia Kannada
ಚೀನಾ ಸರ್ಕಾರದಿಂದಲೂ ಆಕ್ಷೇಪ

ಚೀನಾ ಸರ್ಕಾರದಿಂದಲೂ ಆಕ್ಷೇಪ

ಈ ಬಗ್ಗೆ ಭಾರತದ ವಿದೇಶಾಂಗ ಇಲಾಖೆ ಕೆಂಡಾ ಮಂಡಲವಾಗಿದ್ದು, ಉಭಯ ದೇಶಗಳ ನಡುವಿನ ಬೆಂಕಿಗೆ ತುಪ್ಪ ಸುರಿಯುವ ಪ್ರಯತ್ನ ಇದಾಗಿದೆ ಎಂದು ಖಾರವಾಗಿ ಪ್ರತಿಕ್ರಿಯಿಸಿದೆ. ಈ ಬಗ್ಗೆ ಚೀನಾ ಕೂಡ ಬೇಸರ ವ್ಯಕ್ತಪಡಿಸಿದ್ದು, ತನ್ನ ಸರ್ವಕಾಲಿಕ ಮಿತ್ರ ಎನಿಸಿರುವ ಪಾಕಿಸ್ತಾನದ ನಡೆ ವಿರುದ್ಧ ಬಹಿರಂಗವಾಗಿಯೇ ಆಕ್ಷೇಪ ವ್ಯಕ್ತಪಡಿಸಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Flashing fake news on news channels and spreading false propaganda has become a norm in Pakistan. When the Dunya News TV flashed the news that 158 Indian soldiers had been killed by China at Doklam, it was very clear that the news was fake.
Please Wait while comments are loading...