ಹಫೀಜ್ ವಿರುದ್ಧ ಮತ್ತಷ್ಟು ಸಾಕ್ಷ್ಯಾಧಾರ ಬೇಕೆಂದ ಪಾಕ್

Posted By:
Subscribe to Oneindia Kannada

ನವದೆಹಲಿ, ಫೆಬ್ರವರಿ 2: ಮುಂಬೈ ದಾಳಿಯ ರೂವಾರಿ ಹಫೀಸ್ ಸಯ್ಯೀದ್ ಅವರನ್ನು ಗೃಹ ಬಂಧನದಲ್ಲಿರಿಸಿರುವ ಪಾಕಿಸ್ತಾನ, ಇದೀಗ, ಮುಂಬೈ ದಾಳಿಯ ವಿಚಾರವಾಗಿ ಭಾರತವು ಹಫೀಸ್ ವಿರುದ್ಧ ಮಾಡಿರುವ ಆರೋಪಗಳಿಗೆ ಪೂರಕವಾಗಿ ಮತ್ತಷ್ಟು ಪ್ರಬಲವಾದ ಸಾಕ್ಷ್ಯಾಧಾರ ನೀಡಬೇಕೆಂದು ಆಗ್ರಹಿಸಿದೆ.

ಈ ಬಗ್ಗೆ ಪಾಕಿಸ್ತಾನದ ಆಂತರಿಕ ವ್ಯವಹಾರಗಳ ಸಚಿವಾಲಯ ಅಧಿಕೃತ ಹೇಳಿಕೆ ನೀಡಿದ್ದು, ಭಾರತವು ಹಫೀಜ್ ವಿರುದ್ಧ ತಾನು ಹಿಂದೆ ಮಾಡಿರುವ ಆರೋಪಗಳನ್ನು ನಿಜ ಎಂದು ಸಾಬೀತುಪಡಿಸಬೇಕಿದ್ದಲ್ಲಿ ಮತ್ತಷ್ಟು ಸಾಕ್ಷ್ಯಾಧಾರಗಳನ್ನು ನೀಡಬೇಕು ಎಂದು ಆಗ್ರಹಿಸಿದೆ.

Pakistan demands 'concrete evidence' from India against Hafiz Saeed

ಎರಡು ದಿನಗಳ ಹಿಂದಷ್ಟೇ ಹಫೀಸ್ ನನ್ನು ಗೃಹಬಂಧನದಲ್ಲಿ ಇರಿಸಿರುವ ಪಾಕಿಸ್ತಾನ, ಬುಧವಾರದಿಂದ ಆತ ದೇಶ ಬಿಟ್ಟು ಹೋಗದಂತೆ ತಾಕೀತು ಮಾಡಿದೆ.

ಏತನ್ಮಧ್ಯೆ, ಪಾಕಿಸ್ತಾನ ಸರ್ಕಾರವು ಹಫೀಜ್ ಸಯ್ಯೀದ್ ನನ್ನು ಗೃಹ ಬಂಧನದಲ್ಲಿ ಇರಿಸಿರುವ ವಿಚಾರ ತಮ್ಮ ಗಮನಕ್ಕೆ ಬಂದಿದೆಯೆಂದು ಅಮೆರಿಕ ಸರ್ಕಾರವೂ ಸ್ಪಷ್ಟಪಡಿಸಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The government of Pakistan has asked India to give to come up with "concrete evidence" against Jamaat-ud-Dawaah (JuD) chief Hafiz Saeed two day after putting him and some of his close aides under house arrest.
Please Wait while comments are loading...