ಮೋದಿ ತಲೆಗೆ ನೂರು ಕೋಟಿ ಕೊಡ್ತಾನಂತೆ ಪಾಕ್ ಸಂಸದ
ಇಸ್ಲಾಮಾಬಾದ್ , ಜೂ. 02: ಬುದ್ಧಿಗೇಡಿ ಪಾಕಿಸ್ತಾನದವರು ಏನೇನು ಮಾತನಾಡುತ್ತಾರೆ ಎಂದು ಅವರಿಗೆ ಗೊತ್ತಿರುವುದಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೆಡೆಮುರಿ ಕಟ್ಟಿ ಹಿಡಿದು ತರುವ ವ್ಯಕ್ತಿಗೆ 100 ಕೋಟಿ ರು, ಬಹುಮಾನ ನೀಡುತ್ತೇನೆ ಎಂದು ಪಾಕ್ ಸಂಸದನೊಬ್ಬ ಕೂಗಾಡಿದ್ದಾನೆ.
ಪಾಕ್ ಆಕ್ರಮಿತ ಕಾಶ್ಮೀರದ ರಾವಲ್‌ಕೋಟ್‌ನಲ್ಲಿ ಬೆಂಬಲಿಗರ ಸಭೆಯಲ್ಲಿ ಮಾತನಾಡಿದ ಪಾಕ್ ಸಂಸತ್‌ನ ಸದಸ್ಯ ಸಿರಾಜುಲ್ ಹಕ್ ಎಂಬಾತ ಭಾರತ ಮತ್ತು ಮೋದಿ ಬಗ್ಗೆ ಹುಚ್ಚಾಪಟ್ಟೆ ಮಾತನಾಡಿದ್ದಾನೆ. ಉಗ್ರರನ್ನು ಹಿಡಿಯುವ ಕೆಲಸ ನಿಮ್ಮಿಂದ ಸಾಧ್ಯವಿಲ್ಲ. ಉಗ್ರರ ತಲೆಗೆ ಬಹುಮಾನ ಘೋಷಿಸಿದರೆ ನಾವು ಭಾರತದ ಪ್ರಧಾನಿ ತಲೆಗೆ ಬಹುಮಾನ ಘೊಷಣೆ ಮಾಡುತ್ತಿದ್ದೇವೆ ಎಂದು ಹಲುಬಿದ್ದಾನೆ.[ಮೆಹದಿ ವಿರುದ್ಧ 36,986 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ]

ಕಾಶ್ಮೀರ ಮತ್ತು ಗುಜರಾತ್‌ನ ಗಲಭೆ ಮತ್ತು ಸಾವು ನೋವುಗೆ ಮೋದಿ ಮೋದಿ ಕಾರಣ ಎಂದು ಜಮಾತೆ ಇಸ್ಲಾಮಿ(ಜೆಐ) ಮುಖ್ಯಸ್ಥನೂ ಆದ ಸಿರಾಜುಲ್ ಆರೋಪ. ಈತನ ಪ್ರಚೋದಕ ಭಾಷಣದ ವಿಡಿಯೋಕ್ಕೆ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ಕಾಶ್ಮೀರದ ಬಗ್ಗೆ ಮಾತನಾಡುತ್ತ ಭಾರತ ಮತ್ತು ಪಾಕಿಸ್ತಾನ ಎಂದಿಗೂ ಒಳ್ಳೆಯ ಗೆಳೆಯರಾಗಲು ಸಾಧ್ಯವಿಲ್ಲ. ಕಾಶ್ಮೀರ ವಿಷಯದಲ್ಲಿ ನಾವು ಹೇಳಿದಂತೆ ಕೇಳುವುದೇ ಒತ್ತಮ ಎಂದು ಪುಂಖಾನುಪಯಂಖವಾಗಿ ಒದರಿಕೊಂಡಿದ್ದಾನೆ.[ಮೋದಿ ಸರ್ಕಾರ ಉಗ್ರವಾದ ಮೆಟ್ಟಿ ನಿಂತಿದ್ದು ಹೇಗೆ?]
ಕಾಶ್ಮೀರ ವಿಮೋಚನೆಗೆ ದೊಡ್ಡ ತ್ಯಾಗ ಬಲಿದಾನ ಮಾಡಿದವರ ಬಗ್ಗೆ ಪಾಕಿಸ್ತಾನ ನಾಯಕರು ನಿರ್ಲಕ್ಷ್ಯ ತೋರಿದ್ದಾರೆ. ಪಾಕ್ ಭಾರತ ಮೈತ್ರಿಯನ್ನು ಇಷ್ಟಪಡುವವರು ದೇಶ ಬಿಟ್ಟು ಮುಂಬೈಗೆ ಹೊರಟು ಹೋಗಬಹುದು ಎಂದು ಹಕ್ ಪುಕ್ಕಟೆ ಸಲಹೆ ನೀಡಿದ್ದಾನೆ.












Click it and Unblock the Notifications