'ಪದ್ಮಾವತಿ ಸಿನಿಮಾಗೆ ದುಬೈ ದುಡ್ಡು, ಹಿಂದೂಗಳ ವಿರುದ್ಧ ಷಡ್ಯಂತ್ರ'

Posted By:
Subscribe to Oneindia Kannada

ಹಿಂದೂಗಳ ಅಪಮಾನಕ್ಕಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿರುವ ಪಿತೂರಿ ಇದು. ಆ ಕಾರಣದಿಂದಲೇ ಹಿಂದಿ ಚಿತ್ರ 'ಪದ್ಮಾವತಿ'ಗೆ ದುಬೈನಿಂದ ಹಣಕಾಸಿನ ನೆರವು ಹರಿದುಬಂದಿದೆ ಎಂದು ಬಿಜೆಪಿಯಿಂದ ಆಯ್ಕೆಯಾಗಿರುವ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಆರೋಪ ಮಾಡಿದ್ದಾರೆ.

ಪದ್ಮಾವತಿ ಬಿಡುಗಡೆ ತಡೆ ಕೋರಿ ಸಲ್ಲಿಸಿದ್ದ ಅರ್ಜಿ ತಿರಸ್ಕರಿಸಿದ ಸುಪ್ರಿಂ

"ದುಬೈನಲ್ಲಿರುವ ಜನರಿಗೆ ಸಿನಿಮಾದಲ್ಲಿ ಮುಸ್ಲಿಂ ರಾಜನನ್ನು ನಾಯಕನಂತೆ ಬಿಂಬಿಸುವುದು ಬೇಕು. ಆ ಮುಸ್ಲಿಂ ರಾಜನ ಜತೆಗೆ ಹಿಂದೂ ಮಹಿಳೆ ಸಂಬಂಧ ಬೆಳೆಸಲು ಬಯಸಿದ್ದಳು ಎಂಬಂತೆ ಚಿತ್ರಿಸಬೇಕು. ಪದ್ಮಿನಿಯನ್ನು ಕೆಟ್ಟದಾಗಿ ಚಿತ್ರಿಸಲು ಅದೇ ಕಾರಣ. ಅಕ್ಬರ್ ಹಾಗೂ ಜೋಧಾ ಬಾಯಿ ವಿಚಾರದಲ್ಲೂ ಅದನ್ನೇ ಪ್ರಯತ್ನಿಸಿದರು. ಕಳೆದ ಹತ್ತು ವರ್ಷದಲ್ಲಿ ಯುಪಿಎ ಸರಕಾರದಲ್ಲಿ ಬಂದಿದ್ದೆಲ್ಲ ಅಂಥ ಸಿನಿಮಾಗಳೇ" ಎಂದು ಸ್ವಾಮಿ ಆರೋಪಿಸಿದ್ದಾರೆ.

Padmavati was funded from Dubai, its a conspiracy to defame Hindu women: Swamy

"ಇದು ಮೊದಲು ನಿಲ್ಲಬೇಕು. ಸಂಜಯ್ ಬನ್ಸಾಲಿಯ ಆರ್ಥಿಕ ವ್ಯವಹಾರಗಳ ಬಗ್ಗೆ ಜಾರಿ ನಿರ್ದೇಶನಾಲಯದಿಂದ ತನಿಖೆ ಆಗಬೇಕು" ಎಂದು ಅವರು ಒತ್ತಾಯಿಸಿದ್ದಾರೆ.

ಪದ್ಮಾವತಿ ಸಿನಿಮಾದ ಬಿಡುಗಡೆಗೆ ತಡೆಯಾಜ್ಞೆ ನೀಡಬೇಕು ಎಂದು ಕೋರಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ಸೆನ್ಸಾರ್ ಬೋರ್ಡ್ ಈ ಬಗ್ಗೆ ತೀರ್ಮಾನ ಮಾಡಲಿ ಎಂದು ಕೋರ್ಟ್ ಹೇಳಿದೆ. ಐತಿಹಾಸಿಕ ಸತ್ಯಗಳನ್ನು ತಿರುಚುವ ಮೂಲಕ ರಜಪೂತ ಸಮುದಾಯದ ಭಾವನೆಗಳಿಗೆ ಧಕ್ಕೆ ಮಾಡಲಾಗುತ್ತಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
BJP leader Subramanian Swamy has added a totally new dimension to the controversy over the movie Padmavati by saying that it was funded from Dubai and is a part of an international conspiracy to defame Hindus.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ