'ಶೂರ್ಪನಕಿ ಮೂಗು ಕತ್ತರಿಸಿದ ಹಾಗೆ ದೀಪಿಕಾಳ ಮೂಗು ಕತ್ತರಿಸುತ್ತೇವೆ'
ಜೈಪುರ, ನವೆಂಬರ್ 16: ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ 'ಪದ್ಮಾವತಿ' ಹಿಂದಿ ಚಿತ್ರ ಬಿಡುಗಡೆಗೆ ಶ್ರೀ ರಜಪೂತ ಕರ್ಣಿ ಸೇನಾ ಸಂಘಟನೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಚಿತ್ರದಲ್ಲಿ ಪದ್ಮಾವತಿ ಪಾತ್ರದಲ್ಲಿ ನಟಿಸಿರುವ ದೀಪಿಕಾ ಪಡುಕೋಣೆಗೆ ಜೀವ ಬೆದರಿಕೆ ಹಾಕಿದೆ.
ಭಾರತೀಯ ಇತಿಹಾಸವನ್ನು ತಿರುಚಿ ಪದ್ಮಾವತಿ ಸಿನಿಮಾ ಮಾಡಲಾಗಿದ್ದು, ಚಿತ್ರ ಬಿಡುಗಡೆಯಾದಲ್ಲಿ ರಾಮಾಯಣದಲ್ಲಿ ಶೂರ್ಪನಕಿ ಮೂಗು ಕತ್ತರಿಸಿದ ಹಾಗೆ ದೀಪಿಕಾಳ ಮೂಗು ಕತ್ತರಿಸುಲು ಹೆದರುವುದಿಲ್ಲ ಎಂದು ರಾಜಸ್ಥಾನದ ರಜಪೂತ ಕರ್ಣಿ ಸೇನಾ ಘಟಕದ ಅಧ್ಯಕ್ಷ ಮಹಿಪಾಲ್ ಸಿಂಗ್ ಮಕ್ರಾನಾ ಎಚ್ಚರಿಕೆ ರವಾನಿಸಿದ್ದಾರೆ

ಅಷ್ಟೇ ಅಲ್ಲದೇ ಪದ್ಮಾವತಿ ಚಿತ್ರ ಬಿಡುಗಡೆಗೊಳಿಸಿದ್ದೇ ಆದಲ್ಲಿ ಲೀಲಾ ಬನ್ಸಾಲಿ ತಲೆ ಕಡೆಯುವುದಾಗಿಯೂ ಕರ್ಣಿ ಸೇನಾ ಸಂಘಟನೆ ಬೆದರಿಕೆ ಹಾಕಿದೆ.
ಭಾರತೀಯ ಇತಿಹಾಸವನ್ನು ತಿರುಚಿ ಪದ್ಮಾವತಿ ಸಿನಿಮಾ ಮಾಡಲಾಗಿದೆ, ಪದ್ಮಾವತಿ ಪಾತ್ರವನ್ನು ಕೆಟ್ಟದಾಗಿ ಬಿಂಬಿಸಲಾಗಿದೆ ಎಂದು ಆರೋಪಿಸಿ ಶ್ರೀ ರಾಷ್ಟ್ರೀಯ ರಜಪೂತ್ ಕರಣಿ ಸೇನಾ ಕರ್ನಾಟಕ ಸಂಘಟನೆ ಹಾಗೂ ಹಿಂದೂ ಸಂಘಟನೆಗಳು ಈಗಾಗಲೇ ಬೆಂಗಳೂರು ಸೇರಿದಂತೆ ಹಲವೆಡೆ ಪ್ರತಿಭಟನೆ ನಡೆಸಿದ್ದು, ಡಿಸೆಂಬರ್ 1ರಂದು ಭಾರತ ಬಂದ್‌ಗೆ ಕರೆ ನೀಡಿವೆ.












Click it and Unblock the Notifications