ಪದ್ಮಾವತಿ ಪ್ರತಿಭಟನೆ: ಜೈಪುರ ಕೋಟೆಯಲ್ಲಿ ನಿಗೂಢವಾಗಿ ಪತ್ತೆಯಾದ ಶವ!

Posted By:
Subscribe to Oneindia Kannada

ಜೈಪುರ, ನವೆಂಬರ್ 24: ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿಯವರ ಪದ್ಮಾವತಿ ಚಿತ್ರ ಬಿಡುಗಡೆಯನ್ನು ವಿರೋಧಿಸಿ ದೇಶದೆಲ್ಲೆಡೆ ವಿರೋಧ ವ್ಯಕ್ತವಾಗಿದೆ. ಇಂದು(ನ.24) ಜೈಪುರದ ನಹಾರ್ಘರ್ ಕೋಟೆಯಲ್ಲಿ ವ್ಯಕ್ತಿಯೊಬ್ಬನ ದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಅಲ್ಲೇ ಪಕ್ಕದಲ್ಲಿದ್ದ ಕಲ್ಲಿನ ಮೇಲೆ ಬೆದರಿಕೆ ಸಂದೇಶವನ್ನೂ ಬರೆಯಲಾಗಿದೆ.

'ಶೂರ್ಪನಕಿ ಮೂಗು ಕತ್ತರಿಸಿದ ಹಾಗೆ ದೀಪಿಕಾಳ ಮೂಗು ಕತ್ತರಿಸುತ್ತೇವೆ'

ನೆಲದಿಂದ 200 ಮೀ ಎತ್ತರದಲ್ಲಿ ದೇಹ ನೇತಾಡುತ್ತಿದ್ದು, ಮೊದಲಿಗೆ ಇದನ್ನು ಆತ್ಮಹತ್ಯೆ ಪ್ರಕರಣ ಎಂದು ಭಾವಿಸಲಾಗಿತ್ತು. ಆದರೆ ಪಕ್ಕದ ಕಲ್ಲಿನಲ್ಲಿ ಬರೆದ ಸಂದೇಶವನ್ನು ನೋಡಿ ಇದು ಆತ್ಮಹತ್ಯೆಯೇ, ಕೊಲೆಯೇ ಎಂಬ ಅನುಮಾನ ಎದ್ದಿದೆ.

Padmavati issue: A body found hanging in Jaipur's Nahagarh fort with a threat note

ಪದ್ಮಾವತಿ ವಿರುದ್ಧದ ಪ್ರತಿಭಟನೆಯಲ್ಲಿ ನಾವು ಕೇವಲ ಪ್ರತಿಮೆಗಳನ್ನು ಸುಡುವುದಿಲ್ಲ ಎಂಬರ್ಥದಲ್ಲಿ ಹಿಂದಿಯಲ್ಲಿ ಸಂದೇಶವನ್ನು ಕೆತ್ತಲಾಗಿದೆ. ಮೃತ ವ್ಯಕ್ತಿಯ ಗುರುತುಪತ್ತೆಯಾಗಿಲ್ಲವಾದರೂ, ಸುಮಾರು 40 ವರ್ಷದ ವ್ಯಕ್ತಿ ಎಂದು ಅಂದಾಜಿಸಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Amid controversy over Sanjay Leela Bhansali's film Padmavati, a body found hanging at Nahargarh Fort in Jaipur, threat note on rocks to Padmavati also seen.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ