ನವದೆಹಲಿ, ಜನವರಿ 25: ಪ್ರಸಕ್ತ ಸಾಲಿನ ಪದ್ಮಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ಗುರುವಾರ ಸಂಜೆ ಪ್ರಕಟಿಸಲಾಗಿದೆ. ಕರ್ನಾಟಕದ ಪಾವಗಡ ಮೂಲದ ಸೂಲಗಿತ್ತಿ ನರಸಮ್ಮ ಅವರಿಗೆ ಗೌರವ ಸಿಕ್ಕಿದೆ. ಸಂಗೀತ ಮಾಂತ್ರಿಕ ಇಳಯರಾಜ ಅವರಿಗೆ ಪದ್ಮ ವಿಭೂಷಣ ಪ್ರಶಸ್ತಿ ಗೌರವ ಲಭಿಸಿದೆ.
ಕರ್ನಾಟಕದಿಂದ ಪ್ರಶಸ್ತಿ ಪುರಸ್ಕೃತರು: ದೊಡ್ಡರಂಗೇಗೌಡ, ಸೀತಮ್ಮ, ನರಸಮ್ಮ, ಆರ್ ಸತ್ಯನಾರಾಯಣ, ಇಬ್ರಾಹಿಂ ಎಸ್, ಸಿದ್ದೇಶ್ವರ ಸ್ವಾಮೀಜಿ, ರುದ್ರಪಟ್ಟಣಂ ನಾರಾಯಣಸ್ವಾಮಿ ತಾರಾನಾಥನ್ ಹಾಗೂ ತ್ಯಾಗರಾಜನ್, ಪಂಕಜ್ ಅಡ್ವಾಣಿ.
97 ವರ್ಷ ವಯಸ್ಸಿನ ಕೃಷ್ಣಾಪುರದ ನಿವಾಸಿ ನರಸಮ್ಮ ಅವರು ಸೂಲಗಿತ್ತಿಯಾಗಿ ಕಳೆದ 70 ವರ್ಷಗಳಿಂದ ಉಚಿತವಾಗಿ ಹೆರಿಗೆ ಮಾಡಿಸಿದ್ದಾರೆ.
ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಸುಮಧುರ ಸಂಗೀತ ಸಂಯೋಜನೆ ಮಾಡಿರುವ ಇಳಯರಾಜ ಅವರಿಗೆ ಪದ್ಮ ವಿಭೂಷಣ ಪ್ರಶಸ್ತಿ ಗೌರವ ಲಭಿಸಲಿದೆ. ಗಣರಾಜ್ಯೋತ್ಸವ ದಿನದಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಕಲೆ, ಸಾಹಿತ್ಯ, ಶಿಕ್ಷಣ, ಕ್ರೀಡೆ, ವೈದ್ಯಕೀಯ, ಸಾಮಾಜಿಕ ಕಾರ್ಯ, ವಿಜ್ಞಾನ, ಇಂಜಿನಿಯರಿಂಗ್, ಸಾರ್ವಜನಿಕ ವಲಯದಲ್ಲಿ ಸೇವೆ, ಉದ್ಯಮ ಕ್ಷೇತ್ರದ ಸಾಧಕರಲ್ಲದೆ, ಎಲೆಮರೆಯ ಸಾಧಕರು'(unsung heroes) ಎಂಬ ವಿಭಾಗದಿಂದ ಪದ್ಮ ಪ್ರಶಸ್ತಿ ವಿಜೇತರನ್ನು ಆಯ್ಕೆ ಮಾಡಲಾಗುತ್ತದೆ.
ಸೂಲಗಿತ್ತಿ ನರಸಮ್ಮ
ಈ ಮೂಲಕ ಜನಪ್ರಿಯತೆಯಿಂದ ದೂರವುಳಿದಿರುವ ಸಾಧಕರನ್ನು ಗುರುತಿಸಿ, ಸನ್ಮಾನಿಸಲಾಗುತ್ತದೆ. ಈ ಬಾರಿ ಸುಮಾರು 15,700 ಮಂದಿ ಪ್ರತಿಷ್ಠಿತ ಪ್ರಶಸ್ತಿಗಾಗಿ ಅರ್ಜಿ ಹಾಕಿದ್ದರು.
Prestigious Padma awards for the year 2018 have been announced. The Centre on Thursday announced the list of this year's Padma awardees. Karnataka's midwife Narasamma(97) is one among the awardees. President Ramanath Kovind will award the Padma awards this Republic Day to a host of distinguished personalities