ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇನ್ಮುಂದೆ ರೈಲಲ್ಲೂ ಸಿಗುತ್ತೆ ಪ್ಯಾಕ್ಡ್ ಮಿನಿ ಮೀಲ್ಸ್!

By Nayana
|
Google Oneindia Kannada News

ನವದೆಹಲಿ, ಮೇ.3: ರೈಲು ಪ್ರಯಾಣಿಕರಿಗೆ ವಿಮಾನದಲ್ಲಿ ಪ್ರಯಾಣಿಕರಿಗೆ ನೀಡುವ ಪ್ಯಾಕ್ಡ್ ಮಿನಿ ಮೀಲ್ಸ್ ಮಾದರಿಯಲ್ಲೇ ರೈಲು ಪ್ರಯಾಣಿಕರಿಗೂ ಕುಳಿತಲ್ಲೇ ಗುಣಮಟ್ಟದ ಆಹಾರ ವಿತರಿಸುವ ಯೋಜನೆಯನ್ನು ಭಾರತೀಯ ರೈಲ್ವೆ ಆಹಾರ ಪೂರೈಕೆ ಮತ್ತು ಪ್ರವಾಸೋದ್ಯಮ ನಿಗಮ ರೂಪಿಸಿದೆ.

ಐಆರ್‌ಸಿಟಿಸಿ ಆಹಾರ ಸೇವೆ ಇರುವ ರೈಲಿನಲ್ಲಿ ಈ ಮಿನಿ ಮೀಲ್ಸ್ ಪೂರೈಕೆ ಇನ್ನು ಎರಡು ಮೂರು ತಿಂಗಳಲ್ಲಿ ಆರಂಭವಾಗಲಿದೆ. 5-6 ತಾಸು ಪ್ರಯಾಣದ ಅಔದಿಯ ರೈಲುಗಳಲ್ಲಿ ಮೊದಲಿಗೆ ಈ ಸೇವೆ ಜಾರಿಗೆ ಬರಲಿದೆ. ಟಿಎಫ್‌ಎಸ್, ಹಲ್ದಿರಾಮ್, ಐಟಿಸಿ, ಎಂಟಿಆರ್ ಇನ್ನಿತರೆ ಕಂಪನಿಗಳ ಜತೆ ರೈಲ್ವೆ ಮಂಡಳಿ ಸಭೆ ನಡೆಸಿ ಚರ್ಚಿಸಿದೆ.

 ಚಲಿಸುವ ರೈಲಿಂದ ಟಿಕೆಟ್ ಕಲೆಕ್ಟರ್‌ನ್ನು ತಳ್ಳಿದ ಪ್ರಯಾಣಿಕರು ಚಲಿಸುವ ರೈಲಿಂದ ಟಿಕೆಟ್ ಕಲೆಕ್ಟರ್‌ನ್ನು ತಳ್ಳಿದ ಪ್ರಯಾಣಿಕರು

ಸಸ್ಯಾಹಾರದ ಮಿನಿ ಮೀಲ್ಸ್‌ಗೆ 70-80 ರೂ, ಮಾಂಸಾಹಾರಕ್ಕೆ 140-150 ರೂ ನಿಗದಿ ಮಾಡುವ ಸಾಧ್ಯತೆ ಇದೆ. ಪ್ರಸ್ತುತ ಶತಾಬ್ದಿ ಪ್ರಯಾಣಿಕರು ಟಿಕೆಟ್ ಕಾಯ್ದಿರಿಸುವ ಸಂದರ್ಭದಲ್ಲೇ ಸಸ್ಯಾಹಾರ, ಮಾಂಸಾಹಾರ ಆಯ್ಕೆ ಇರುತ್ತದೆ.

Packed mini meals in Trains too

ವ್ಯಾಲೆಟ್ ಮೂಲಕ ಟಿಕೆಟ್ ಬುಕಿಂಗ್: ಐಆರ್‌ಸಿಟಿಸಿ ವ್ಯಾಲೆಟ್ ಮೂಲಕವೂ ಟಿಕೆಟ್ ಬುಕಿಂಗ್ ಗೆ ಕೇಂದ್ರ ರೈಲ್ವೆ ಇಲಾಖೆ ಅವಕಾಶ ನೀಡಿದೆ. ತತ್ಕಾಲ್ ಸೇರಿ ಇತರ ಟಿಕೆಟ್ ಬುಕಿಂಗ್ ಸಂದರ್ಭದಲ್ಲಿ ಸರ್ವರ್ ಸಮಸ್ಯೆಗಳಿಂದ ಹಣ ವರ್ಗಾವರಣೆ ತೊಂದರೆಯಾಗುತ್ತಿತ್ತು. ಇದರಿಂದ ಟಿಕೆಟ್ ಸಿಗುತ್ತಿರಲಿಲ್ಲ. ಹೀಗಾಗಿ ವ್ಯಾಲೆಟ್‌ಗೆ ಮುಂಗಡವಾಗಿ ಹಣ ಹಾಕಿಕೊಂಡು ಟಿಕೆಟ್ ಬುಕ್ ಮಾಡಬಹುದಾಗಿದೆ.

ಮೆನು ಸೌಲಭ್ಯ ಕಾರ್ಡ್ ಮೂಲಕ ಪಾವತಿ: ಹೋಟೆಲ್‌ನಂತೆ ರೈಲು ಪ್ರಯಾಣಿಕರಿಗೆ ಮೆನು ನೀಡಿ ಆಹಾರ ಆಯ್ಕೆಗೆ ಅವಕಾಶ ನೀಡುವ ಮತ್ತು ಬಿಲ್ ಅನ್ನು ಕ್ರೆಡಿಟ್, ಡೆಬಿಟ್ ಕಾರ್ಡ್ ಗಳ ಮೂಲಕ ಪಾವತಿಸುವ ಸೇವೆಯಲ್ಲಿ ರೈಲ್ವೆ ಇಲಾಖೆ 25 ರೈಲುಗಳಲ್ಲಿ ಪರಿಚಯಿಸಿದೆ. ಬೆಂಗಳೂರು-ನವದೆಹಲಿ ಮಧ್ಯೆ ಸಂಚರಿಸುವ ಕರ್ನಾಟಕ ಎಕ್ಸ್‌ಪ್ರೆಸ್‌ನಲ್ಲೂ ಈ ಸೌಲಭ್ಯವಿದೆ. ಹಂತ ಹಂತವಾಗಿ ಎಲ್ಲ ವಲಯದಲ್ಲೂ ಈ ಸವೆ ಅನುಷ್ಠಾನಗೊಳ್ಳಲಿದೆ.

English summary
Indian Railways catering and Tourism corporation has decided to supply veg and non veg packed mini meals for passengers in the line of Airlines.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X