OYO: ಒಯೋ ರೂಮ್ ಬುಕ್: ಮದುವೆ ಆಗದವರಿಗೆ ಶಾಕಿಂಗ್ ರೂಲ್ಸ್!
ಒಯೋ ಶಾಕಿಂಗ್ ನ್ಯೂಸ್‌ವೊಂದನ್ನು ಕೊಟ್ಟಿದೆ. ಮದುವೆ ಆಗದೆ ಇರುವವರಿಗೆ ಇನ್ಮುಂದೆ ಒಯೋ ರೂಮ್ಸ್‌ಗೆ ಎಂಟ್ರಿ ಇಲ್ಲ ಅಂತ ಹೇಳಿದೆ. ಹೌದು ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ಬೆಂಗಳೂರು ಸೇರಿದಂತೆ ದೇಶದಾದ್ಯಂತ ಲಕ್ಷಾಂತರ ಜನ ಒಯೋ ಬುಕ್ ಮಾಡಿದ್ದರು. ಅದರಲ್ಲಿ ಮದುವೆ ಆಗದೆ ಇರುವ ಯುವಕ ಹಾಗೂ ಯುವತಿಯರೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದರು. ಮದುವೆ ಆಗದೆ ಇರುವ ಯುವಕ ಹಾಗೂ ಯುವತಿಯರು ಹೆಚ್ಚಾಗಿ ಒಯೋಗೆ ಹೋಗುತ್ತಿರುವುದು ಭಾರೀ ಚರ್ಚೆಗೆ ಕಾರಣವಾಗಿತ್ತು. ಹೊಸ ವರ್ಷದಲ್ಲಿ 7ರಿಂದ 10 ಲಕ್ಷ ಜನ ಒಯೋ ರೂಮ್ಸ್‌ಗೆ ಲಗ್ಗೆ ಹಾಕಿದ್ದರು. ಇದೀಗ ಒಯೋ ಅದಕ್ಕೆ ಕಡಿವಾಣ ಹಾಕಲು ಮುಂದಾಗುತ್ತಿದೆ. ಒಯೋ ಹೊಸ ನಿಯಮಕ್ಕೆ ಕಾರಣವೇನು ಎನ್ನುವ ವಿವರ ಇಲ್ಲಿದೆ ನೋಡಿ..
ಒಯೋ ರೂಮ್ಸ್‌ಗೆ ಹೊಸ ವರ್ಷ ಹಾಗೂ ವ್ಯಾಲೆಂಟೆನ್ಸ್ ಡೇ ದಿನದಂದು ಸಿಕ್ಕಾಪಟ್ಟೆ ಡಿಮ್ಯಾಂಡ್ ಸೃಷ್ಟಿಯಾಗುತ್ತದೆ. ಒಯೋ ರೂಮ್ಸ್‌ಗಳ ಬುಕ್ಕಿಂಗ್‌ನಲ್ಲಿ ಹೊಸ ದಾಖಲೆ ಸೃಷ್ಟಿಯಾಗಿತ್ತು. ಒಯೋ ರೂಮ್‌ಗಳಿಗೆ ಮದುವೆಯಾದವರು ಮಾತ್ರ ಬರಬೇಕು ಎನ್ನುವ ಹೊಸ ನಿಯಮವನ್ನು ರೂಪಿಸಲಾಗುತ್ತಿದೆ. ಒಯೋ ರೂಮ್‌ಗೆ ಮದುವೆ ಆಗದೆ ಇರುವವರೇ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ ಎನ್ನುವ ವಿಷಯ ಚರ್ಚೆಯಾಗುತ್ತಿರುವ ಬೆನ್ನಲ್ಲೇ ಈ ನಿಯಮ ಜಾರಿ ಆಗುತ್ತಿರುವುದು ಮದುವೆಯಾಗದೆ ಒಯೋ ರೂಮ್‌ಗೆ ಹೋಗುವವರಿಗೆ ಶಾಕ್ ಕೊಟ್ಟಿದೆ.

ಹೋಟೆಲ್‌ಗಳ ಬುಕ್ಕಿಂಗ್‌ನಲ್ಲೊ ಒಯೋ ಮುಂಚೂಣಿಯಲ್ಲಿ ಇದೆ. ಅದರಲ್ಲೂ ಇತ್ತೀಚಿನ ವರ್ಷಗಳಲ್ಲಿ ಒಯೋ ರೂಮ್‌ಗಳ ಬೇಡಿಕೆ ತುಸು ಹೆಚ್ಚಾಗಿಯೇ ಇದೆ. ನವಜೋಡಿಗಳು ಒಂದಾಗಿ ಒಯೋ ರೂಮ್ಸ್‌ಗೆ ಹೋಗೋದು ಜಾಸ್ತಿ ಆಗಿತ್ತು. ಕೆಲವರು ಮಜಾ ಮಾಡುವುದಕ್ಕಾಗಿಯೇ ಒಯೋ ರೂಮ್ ಬುಕ್ ಮಾಡುತ್ತಾರೆ ಎನ್ನುವುದು ಗುಟ್ಟಾಗಿ ಉಳಿದಿಲ್ಲ.
ಇದೀಗ ಹೊಸ ನಿಯಮ ಶಾಕ್ ಕೊಟ್ಟಿದೆ. ದೇಶದಲ್ಲಿ ಮೀರತ್‌ನಲ್ಲಿ ಮದುವೆಯಾದವರಿಗೆ ಮಾತ್ರ ಒಯೋ ರೂಮ್‌ಗೆ ಎಂಟ್ರಿ ಅಂತ ಹೇಳಲಾಗಿದೆ. ಒಯೋ ರೂಮ್ ಬುಕ್ ಮಾಡಬೇಕಾದರೆ, ಮದುವೆ ಆಗಿದೆ ಎನ್ನುವುದಕ್ಕೆ ದಾಖಲೆಗಳನ್ನು ತೋರಿಸಬೇಕು. ಅಲ್ಲದೆ ನೀವು ಆನ್‌ಲೈನ್ ಬುಕ್ಕಿಂಗ್ ಮಾಡಬೇಕಾದರೂ ಇದೇ ನಿಯಮ ಅನ್ವಯಿಸಲಿದೆ.
ಒಯೋ ಸಂಸ್ಥೆ ತನ್ನ ಎಲ್ಲಾ ಪಾಲುದಾರರಿಗೆ ಈ ಸಂಬಂಧ ನಿರ್ದೇಶನ ಕೊಟ್ಟಿದೆ. ಇದೀಗ ಉತ್ತರ ಪ್ರದೇಶದ ಮೀರತ್‌ನಲ್ಲಿ ಈ ನಿಯಮ ಜಾರಿಯಾಗಿದೆ. ಮುಂದಿನ ದಿನಗಳಲ್ಲಿ ಇದು ದೇಶದಾದ್ಯಂತ ಜಾರಿಯಾಗುವ ಸಾಧ್ಯತೆ ಇದೆ.
ಒಯೋದಿಂದ ಹೊಸ ನಿಯಮ: ಒಯೋ ಹೋಟೆಲ್‌ಗಳಿಗೆ ಒಪ್ಪಿತ ಸಂಬಂಧ ಇರುವವರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದಾರೆ ಎನ್ನುವುದು ಸುದ್ದಿಯಾಗಿತ್ತು. ಇದೀಗ ಒಯೋ ಹೊಸ ರೂಲ್ಸ್ ಜಾರಿ ಮಾಡಿದೆ. ಮದುವೆ ಆಗದೆ ಇರುವವರು ಒಯೋ ರೂಮ್‌ಗೆ ಎಂಟ್ರಿ ಕೊಡುವುದ ಕಷ್ಟವಾಗಲಿದೆ.
ಯುವಕ ಹಾಗೂ ಯವತಿ ಒಯೋ ರೂಮ್ ಬುಕ್ಕಿಂಗ್ ಮಾಡಬೇಕಾದರೆ, ಮದುವೆ ಆಗಿರುವ ದಾಖಲೆಗಳನ್ನು ಇಲ್ಲ, ವಿವರವನ್ನು ಕೊಡಬೇಕು. ಈಗಾಗಲೇ ಉತ್ತರ ಪ್ರದೇಶದ ಮೀರತ್‌ನಲ್ಲಿ ಇದು ಜಾರಿಯಾಗಿದೆ. ಇಲ್ಲಿನ ಸ್ಥಳೀಯರು ಈ ರೀತಿ ಬೇಡಿಕೆ ಇರಿಸಿದ್ದರಿಂದ ಜಾರಿ ಮಾಡಿರುವುದಾಗಿ ಹೇಳಲಾಗಿದೆ.
ಜನರ ಬೇಡಿಕೆ ಹಾಗೂ ನಿರೀಕ್ಷೆಗೆ ತಕ್ಕಂತೆ ತನ್ನ ನಿಯಮಗಳಲ್ಲಿ ಬದಲಾವಣೆ ಮಾಡಿಕೊಳ್ಳುವುದಾಗಿ ಒಯೋ ಸಂಸ್ಥೆ ಹೇಳಿರುವುದು ವರದಿಯಾಗಿದೆ. ಬೇರೆ ನಗರಗಳಿಂದಲೂ ಇದೇ ರೀತಿ ಬೇಡಿಕೆ ಬಂದಿರುವುದಾಗಿ ಒಯೋ ಹೇಳಿಕೊಂಡಿದೆ. ಹೀಗಾಗಿ ಬೆಂಗಳೂರು ಸೇರಿ ವಿವಿಧೆಡೆಯೂ ಇದೇ ನಿಯಮ ಶೀಘ್ರ ಜಾರಿಯಾಗುವ ಸಾಧ್ಯತೆ ಇದೆ.
ಬೆಂಗಳೂರಿನಲ್ಲಿ ಹೊಸ ವರ್ಷದ ಹಿಂದೆ ಹಾಗೂ ಮುಂದಿನ ದಿನಗಳಲ್ಲಿ ಸಾವಿರಾರು ಜನ ಬುಕ್ ಮಾಡಿದ್ದರು. ಒಯೋ ರೂಮ್ಸ್‌ಗಳಿಗೆ ವಿಪರೀಯ ಬೇಡಿಕೆ ಕೇಳಿ ಬಂದಿತ್ತು.
-
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ












Click it and Unblock the Notifications