OYO: ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್‌ ಕೊಟ್ಟ ಓಯೋ ಸಂಸ್ಥಾಪಕ

ಈಗಿನ ಯುವಜನರ ಹಾಟ್‌ ಟಾಪಿಕ್‌ಗಳಲ್ಲಿ ಓಯೋ (OYO) ಕೂಡ ಒಂದು. ಓಯೋ ಅಂದಾಕ್ಷಣ ಎಲ್ಲರ ಕಿವಿ ನೆಟ್ಟಗಾಗುತ್ತದೆ. ಈಗಾಗಲೇ ಈ ರೂಂ ಸೇವೆಯು ಯುವಜೋಡಿಗಳು, ಪ್ರೇಮಿಗಳ ಅಡ್ಡಾ ಎನಿಸಿಕೊಂಡಿದೆ. ಲಕ್ಷಾಂತರ ಮಂದಿ ಓಯೋ ರೂಂ ಸೇವೆಯನ್ನು ಬಳಸಿ ಮೆಚ್ಚಿಕೊಂಡಿದ್ದಾರೆ. ಹೀಗಿರುವಾಗ ಓಯೋ ಸಂಸ್ಥಾಪಕ ರಿತೇಶ್ ಅಗರ್ವಾಲ್ ಅವರು ವಿದ್ಯಾರ್ಥಿಗಳನ್ನು ಕುರಿತು ಇತ್ತೀಚೆಗೆ ಆಡಿರುವ ಮಾತುಗಳು ಗಮನ ಸೆಳೆದಿದೆ.

ಐಪಿಒಗೆ ಸೇರಲಿರುವ ಓಯೋ ಕಂಪನಿಯು ಮುಂದಿನ ವರ್ಷದ ವೇಳೆಗೆ ಹೋಟೆಲ್ ಸೇವೆ ವಿಸ್ತರಣೆಗೆ ಯೋಜಿಸಿದೆ. ಈ ಅವಧಿಯಲ್ಲಿ ತನ್ನ ಕಂಪನಿ-ಸೇವೆಯ ಆಸ್ತಿಗಳಿಂದ ಬುಕಿಂಗ್ ಆದಾಯವನ್ನು ಶೇಕಡಾ 44ರವರೆಗೆ ಏರಿಕೆಯಾಗುವ ನಿರೀಕ್ಷೆಯಿದೆ. ಭಾರತದಾದ್ಯಂತ 300ಕ್ಕೂ ಹೆಚ್ಚು ನಗರಗಳಿಗೆ ಓಯೋ ಸೇವೆ ವಿಸ್ತರಿಸಲು ಮುಂದಾಗಿದೆ.

ಇತ್ತೀಚೆಗೆ ಬೆನೆಟ್ ವಿಶ್ವವಿದ್ಯಾನಿಲಯವು ತನ್ನ ಪ್ರಮುಖ ಉದ್ಯಮಶೀಲತಾ ಉತ್ಸವವಾದ "ಬೆನ್ನೋವೇಟ್ 4.0"ನ ನಾಲ್ಕನೇ ಆವೃತ್ತಿಯನ್ನು ಆಯೋಜಿಸಿತ್ತು. ಇದರಲ್ಲಿ ಓಯೋ ಸಂಸ್ಥಾಪಕ ರಿತೇಶ್ ಅಗರ್ವಾಲ್ ಕೂಡ ಭಾಗವಹಿಸಿದ್ದರು. ಈ ವೇಳೆ ಅವರು ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್‌ವೊಂದನ್ನು ನೀಡಿದ್ದಾರೆ.

OYO Founder Ritesh Agarwal Gives Good News Inspiring Message to Students

ರಿತೇಶ್ ಅಗರ್ವಾಲ್ ಕೂಡ ಈ ಶೃಂಗಸಭೆಯ ಭಾಗವಾಗಿದ್ದರು. ಅಲ್ಲಿ ಅವರು ವಿದ್ಯಾರ್ಥಿಗಳು ಈಗ ನಿಜ ಜೀವನದ ಬದಲಾವಣೆಗಳನ್ನು ಹೇಗೆ ಎದುರಿಸುತ್ತಾರೆ? ಮತ್ತು ಹಾಗೆ ಮಾಡುವಲ್ಲಿ ಹೇಗೆ ವಿಶ್ವಾಸ ಹೊಂದಿರಬೇಕು ಎಂಬುದರ ಕುರಿತು ಅಚ್ಚರಿಯ ಮಾತುಗಳನ್ನಾಡಿದ್ದಾರೆ. ಮುಖ್ಯವಾಗಿ ಇತರರೊಂದಿಗೆ ನಿಮ್ಮನ್ನು ಹೋಲಿಸಿಕೊಳ್ಳಬೇಡಿ ಎಂದು ವಿದ್ಯಾರ್ಥಿಗಳಿಗೆ ಮಹತ್ವದ ಸಲಹೆ ನೀಡಿದ್ದಾರೆ.

ಹಿಂದಿನ ಕಾಲದಲ್ಲಿ ಈ ಹೋಲಿಕೆಗಳು ಹೆಚ್ಚಾಗಿ ಇತರರು ತಮ್ಮ ಜೀವನದ ಬಗ್ಗೆ ನಿಮಗೆ ಏನು ಹೇಳಿದರು ಎಂಬುದರ ಮೇಲೆ ಆಧಾರಿತವಾಗಿದ್ದವು. ಆದರೆ ಇಂದು ಅದೆಲ್ಲ ನಿಮ್ಮ ಮುಂದೆಯೇ ಇದೆ. ಇನ್‌ಸ್ಟಾಗ್ರಾಂ, ಫೇಸ್‌ಬುಕ್‌, ಲಿಂಕ್‌ಡಿನ್‌ಗಳಲ್ಲಿ ನಿಮ್ಮ ಎಲ್ಲ ಸ್ನೇಹಿತರು ವೃತ್ತಿಪರವಾಗಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರು ಜಗತ್ತನ್ನು ಅನ್ವೇಷಿಸುತ್ತಿದ್ದಾರೆ ಮತ್ತು ರೋಮಾಂಚಕಾರಿ ಜೀವನವನ್ನು ನಡೆಸುತ್ತಿದ್ದಾರೆ ಎಂದಿದ್ದಾರೆ. ಇದರ ನಡುವೆ ನೀವು ಮುಂದುವರಿಯುತ್ತಿಲ್ಲ ಎಂದು ನಿಮಗೆ ಅನಿಸಬಹುದು. ಆದರೆ ಸಾಮಾಜಿಕ ಮಾಧ್ಯಮವು ಅವರ ಸರಾಸರಿ ಜೀವನವನ್ನು ಅಲ್ಲ, ಅವರ ಅತ್ಯುತ್ತಮ ಕ್ಷಣಗಳನ್ನು ಮಾತ್ರ ಪ್ರದರ್ಶಿಸುತ್ತದೆ ಎಂಬುದನ್ನು ಜನರು ಹೆಚ್ಚಾಗಿ ಮರೆತುಬಿಡುತ್ತಾರೆ ಎಂದು ಹೇಳಿದ್ದಾರೆ.

ಹೀಗಾಗಿ ಆತ್ಮವಿಶ್ವಾಸದಿಂದ ಇರುವುದು ಈಗ ಅತ್ಯಗತ್ಯ. ಇದರಿಂದ ನೀವು ಎಲ್ಲ ಒತ್ತಡಗಳು ಮತ್ತು ಹೋಲಿಕೆಗಳನ್ನು ನಿಭಾಯಿಸಬಹುದು. ನನ್ನ ಪ್ರಕಾರ ಅತ್ಯಂತ ಮಹತ್ವಾಕಾಂಕ್ಷೆಯುಳ್ಳ ಹಾಗೂ ತಮ್ಮಲ್ಲಿ ವಿಶ್ವಾಸ ಹೊಂದಿರುವ, ಜಗತ್ತು ಏನು ಯೋಚಿಸುತ್ತದೆ ಎಂಬುದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದ ಯುವಕರು ನಿಜವಾಗಿಯೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತಾರೆ ಎಂದು ರಿತೇಶ್‌ ಅಭಿಪ್ರಾಯಪಟ್ಟಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+