20770 ಎಂ.ಟಿ.ಗೂ ಅಧಿಕ ಆಮ್ಲಜನಕ ಪೂರೈಸಿದ 135 ಎಕ್ಸ್ ಪ್ರೆಸ್

ಭಾರತೀಯ ರೈಲ್ವೆಯು ದೇಶಾದ್ಯಂತ ವಿವಿಧ ರಾಜ್ಯಗಳಿಗೆ ದ್ರವೀಕೃತ ವೈದ್ಯಕೀಯ ಆಮ್ಲಜನಕ (ಎಲ್.ಎಂ.ಒ.) ಪೂರೈಕೆ ಮಾಡಿ ತನ್ನ ಪರಿಹಾರ ತರುವ ಯಾನವನ್ನು ಮುಂದುವರಿಸಿದೆ. ಇದುವರೆಗೆ ಭಾರತೀಯ ರೈಲ್ವೇಯು 1237ಕ್ಕೂ ಅಧಿಕ ಟ್ಯಾಂಕರ್‌ಗಳಲ್ಲಿ 20770 ಎಂ.ಟಿ.ಗೂ ಅಧಿಕ ದ್ರವೀಕೃತ ವೈದ್ಯಕೀಯ ಆಮ್ಲಜನಕವನ್ನು ದೇಶಾದ್ಯಂತ ವಿವಿಧ ರಾಜ್ಯಗಳಿಗೆ ಪೂರೈಕೆ ಮಾಡಿದೆ.

ಇದುವರೆಗೆ 305 ಆಮ್ಲಜನಕ ಎಕ್ಸ್ ಪ್ರೆಸ್ ತಮ್ಮ ಪ್ರಯಾಣ ಪೂರ್ಣಗೊಳಿಸಿವೆ ಮತ್ತು ವಿವಿಧ ರಾಜ್ಯಗಳಿಗೆ ಪರಿಹಾರ ತಂದಿವೆ. ಈ ಹೇಳಿಕೆ ಬಿಡುಗಡೆಯಾಗುವವರೆಗೆ 6 ಆಮ್ಲಜನಕ ಎಕ್ಸ್ ಪ್ರೆಸ್‌ಗಳು 420 ಎಂ.ಟಿ.ಗೂ ಅಧಿಕ ಪ್ರಮಾಣದ ದ್ರವೀಕೃತ ಆಮ್ಲಜನಕವನ್ನು 26 ಟ್ಯಾಂಕರುಗಳಲ್ಲಿ ತುಂಬಿಕೊಂಡು ಪ್ರಯಾಣದಲ್ಲಿವೆ.

ಅಸ್ಸಾಂ ತನ್ನ ಮೂರನೇ ಆಮ್ಲಜನಕ ಎಕ್ಸ್ ಪ್ರೆಸ್ ರೈಲನ್ನು ಇಂದು ಬರಮಾಡಿಕೊಂಡಿದೆ. 4 ಟ್ಯಾಂಕರುಗಳಲ್ಲಿ 80 ಎಂ.ಟಿ.ಯಷ್ಟು ದ್ರವೀಕೃತ ಆಮ್ಲಜನಕ (ಎಲ್.ಎಂ.ಒ.) ತುಂಬಿಕೊಂಡು ಆಮ್ಲಜನಕ ಎಕ್ಸ್ ಪ್ರೆಸ್ ಅಸ್ಸಾಂ ತಲುಪಿದೆ.

ದಕ್ಷಿಣದ ರಾಜ್ಯಗಳಲ್ಲಿ ಆಂಧ್ರ ಪ್ರದೇಶ, ತಮಿಳು ನಾಡು, ಕರ್ನಾಟಕ ಮತ್ತು ತೆಲಂಗಾಣಗಳಿಗೆ ಎಲ್.ಎಂ.ಒ. ಪೂರೈಕೆ ತಲಾ 1600 ಎಂ.ಟಿ. ದಾಟಿದೆ.

ಏಪ್ರಿಲ್ 24ರಂದು ಮಹಾರಾಷ್ಟ್ರದಿಂದ ಆರಂಭ

ಏಪ್ರಿಲ್ 24ರಂದು ಮಹಾರಾಷ್ಟ್ರದಿಂದ ಆರಂಭ

ಆಮ್ಲಜನಕ ಎಕ್ಸ್ ಪ್ರೆಸ್ ಗಳು ತಮ್ಮ ಪೂರೈಕೆಗಳನ್ನು 35 ದಿನಗಳ ಹಿಂದೆ, ಏಪ್ರಿಲ್ 24ರಂದು ಮಹಾರಾಷ್ಟ್ರಕ್ಕೆ 126 ಎಂ.ಟಿ.ಯಷ್ಟು ಎಲ್.ಎಂ.ಒ. ಸರಬರಾಜು ಮಾಡುವ ಮೂಲಕ ಆರಂಭಿಸಿದ್ದವು ಎನ್ನುವುದು ಇಲ್ಲಿ ಉಲ್ಲೇಖಾರ್ಹ.

ಕೋರಿಕೆ ಸಲ್ಲಿಸಿದ ರಾಜ್ಯಗಳಿಗೆ ಸಾದ್ಯ ಇರುವಷ್ಟು ಕಡಿಮೆ ಅವಧಿಯಲ್ಲಿ ಮತ್ತು ಸಾಧ್ಯ ಇರುವಷ್ಟು ಹೆಚ್ಚಿನ ಪ್ರಮಾಣದಲ್ಲಿ ಎಲ್.ಎಂ.ಒ.ವನ್ನು ಪೂರೈಕೆ ಮಾಡುವುದು ಭಾರತೀಯ ರೈಲ್ವೆಯ ಇರಾದೆಯಾಗಿದೆ.

ಆಮ್ಲಜನಕ ಎಕ್ಸ್ ಪ್ರೆಸ್ ಮೂಲಕ ಉತ್ತರಾಖಂಡ, ಕರ್ನಾಟಕ, ಮಹಾರಾಷ್ಟ್ರ, ಮಧ್ಯ ಪ್ರದೇಶ, ಆಂಧ್ರ ಪ್ರದೇಶ, ರಾಜಸ್ಥಾನ, ತಮಿಳುನಾಡು, ಹರ್ಯಾಣಾ, ತೆಲಂಗಾಣ, ಪಂಜಾಬ್, ಕೇರಳ, ದಿಲ್ಲಿ, ಉತ್ತರ ಪ್ರದೇಶ ಜಾರ್ಖಂಡ ಮತ್ತು ಅಸ್ಸಾಂ ಸಹಿತ 15 ರಾಜ್ಯಗಳಿಗೆ ಆಮ್ಲಜನಕ ಪರಿಹಾರ ತಲುಪಿದೆ.

ಯಾವ ಯಾವ ರಾಜ್ಯಕ್ಕೆ ಎಷ್ಟು ಪೂರೈಕೆ

ಯಾವ ಯಾವ ರಾಜ್ಯಕ್ಕೆ ಎಷ್ಟು ಪೂರೈಕೆ

ಈ ಪ್ರಕಟಣೆ ಹೊರಡಿಸುವವರೆಗೆ ಮಹಾರಾಷ್ಟ್ರದಲ್ಲಿ 614 ಎಂ.ಟಿ. ಆಮ್ಲಜನಕವನ್ನು ಇಳಿಸಲಾಗಿದೆ. ಉತ್ತರ ಪ್ರದೇಶದಲ್ಲಿ ಸುಮಾರು 3731 ಎಂ.ಟಿ., ಮಧ್ಯಪ್ರದೇಶದಲ್ಲಿ 656 ಎಂ.ಟಿ., ದಿಲ್ಲಿಯಲ್ಲಿ 5327 ಎಂ.ಟಿ., ಹರ್ಯಾಣಾದಲ್ಲಿ 1967 ಎಂ.ಟಿ., ರಾಜಸ್ಥಾನದಲ್ಲಿ 98 ಎಂ.ಟಿ., ಕರ್ನಾಟಕದಲ್ಲಿ 1994 ಎಂ.ಟಿ., ಉತ್ತರಾಖಂಡದಲ್ಲಿ 320 ಎಂ.ಟಿ., ತಮಿಳುನಾಡಿನಲ್ಲಿ 1735 ಎಂ.ಟಿ., ಆಂಧ್ರಪ್ರದೇಶದಲ್ಲಿ 1668 ಎಂ.ಟಿ., ಪಂಜಾಬಿನಲ್ಲಿ 225 ಎಂ.ಟಿ., ಕೇರಳದಲ್ಲಿ 380 ಎಂ.ಟಿ., ತೆಲಂಗಾಣದಲ್ಲಿ 1770 ಎಂ.ಟಿ., ಜಾರ್ಖಂಡದಲ್ಲಿ 38 ಎಂ.ಟಿ., ಮತ್ತು ಅಸ್ಸಾಂನಲ್ಲಿ 240 ಎಂ.ಟಿ. ಆಮ್ಲಜನಕ ತಲುಪಿಸಲಾಗಿದೆ.

ಸುಮಾರು 39 ನಗರಗಳಿಗೆ ಪೂರೈಕೆ

ಸುಮಾರು 39 ನಗರಗಳಿಗೆ ಪೂರೈಕೆ

ಇದುವರೆಗೆ ಆಮ್ಲಜನಕ ಎಕ್ಸ್ ಪ್ರೆಸ್ ಗಳು ದೇಶಾದ್ಯಂತ 15 ರಾಜ್ಯಗಳ ಸುಮಾರು 39 ನಗರಗಳು/ ಪಟ್ಟಣಗಳಲ್ಲಿ ಎಲ್.ಎಂ.ಒ.ವನ್ನು ಇಳಿಸಿವೆ. ಆ ನಗರ /ಪಟ್ಟಣಗಳೆಂದರೆ -ಉತ್ತರ ಪ್ರದೇಶದ ಲಕ್ನೋ,, ವಾರಾಣಸಿ, ಕಾನ್ಪುರ, ಬರೇಲಿ, ಗೋರಖ್ ಪುರ, ಮತ್ತು ಆಗ್ರಾ, ಮಧ್ಯ ಪ್ರದೇಶದ ಸಾಗರ್, ಜಬಲ್ಪುರ, ಕತ್ನಿ, ಮತ್ತು ಭೋಪಾಲ್, ಮಹಾರಾಷ್ಟ್ರದ ನಾಗಪುರ, ನಾಸಿಕ್, ಪುಣೆ, ಮುಂಬಯಿ, ಮತ್ತು ಸೋಲಾಪುರ, ತೆಲಂಗಾಣದಲ್ಲಿಯ ಹೈದರಾಬಾದ್, ಹರ್ಯಾಣಾದ ಫರಿದಾಬಾದ್ ಮತ್ತು ಗುರುಗ್ರಾಮ, ದಿಲ್ಲಿಯ ತುಘ್ಲಕಾಬಾದ್, ದಿಲ್ಲಿ ಕಂಟೋನ್ಮೆಂಟ್ ಮತ್ತು ಓಕ್ಲಾ, ರಾಜಸ್ಥಾನದ ಕೋಟಾ ಮತ್ತು ಕನಕಪುರ, ಕರ್ನಾಟಕದ ಬೆಂಗಳೂರು, ಉತ್ತರಾಖಂಡದ ಡೆಹ್ರಾಡೂನ್, ಆಂಧ್ರ ಪ್ರದೇಶದಲ್ಲಿ ನೆಲ್ಲೋರ್, ಗುಂಟೂರು, ತಾಡಿಪತ್ರಿ, ಮತ್ತು ವಿಶಾಖಪಟ್ಟಣಂ, ಕೇರಳದಲ್ಲಿ ಎರ್ನಾಕುಲಂ, ತಮಿಳುನಾಡಿನಲ್ಲಿ ತಿರುವಲ್ಲೂರ್, ಚೆನ್ನೈ, ಟ್ಯುಟಿಕೋರಿನ್, ಕೊಯಮುತ್ತೂರು, ಮತ್ತು ಮಧುರೈ, ಪಂಜಾಬಿನಲ್ಲಿ ಭಟಿಂಡಾ ಮತ್ತು ಫಿಲ್ಲೌರ್, ಅಸ್ಸಾಂನಲ್ಲಿ ಕಾಮರೂಪ ಮತ್ತು ಜಾರ್ಖಂಡದಲ್ಲಿಯ ರಾಂಚಿ.

20770 ಎಂ.ಟಿ.ಗೂ ಅಧಿಕ ಆಮ್ಲಜನಕ ಪೂರೈಸಿದ 135 ಎಕ್ಸ್ ಪ್ರೆಸ್

20770 ಎಂ.ಟಿ.ಗೂ ಅಧಿಕ ಆಮ್ಲಜನಕ ಪೂರೈಸಿದ 135 ಎಕ್ಸ್ ಪ್ರೆಸ್

ಭಾರತೀಯ ರೈಲ್ವೆಯು ಆಮ್ಲಜನಕ ಪೂರೈಕೆ ಸ್ಥಳಗಳೊಂದಿಗೆ ವಿವಿಧ ಮಾರ್ಗಗಳ ನಕ್ಷೆಯನ್ನು ಸಿದ್ಧ ಮಾಡಿಟ್ಟುಕೊಂಡಿದೆ. ಮತ್ತು ಯಾವುದೇ ಸಂಭಾವ್ಯ ಸ್ಥಿತಿಯಲ್ಲಿ ರಾಜ್ಯಗಳ ಬೇಡಿಕೆಯನ್ನು ಈಡೇರಿಸಲು ತಯಾರಾಗಿದೆ. ರಾಜ್ಯಗಳು ಎಲ್.ಎಂ.ಒ. ತರಲು ಭಾರತೀಯ ರೈಲ್ವೆಗೆ ಟ್ಯಾಂಕರುಗಳನ್ನು ಒದಗಿಸಿಕೊಡುತ್ತವೆ.

ದೇಶಾದ್ಯಂತ ಓಡಾಟ ನಡೆಸುವ ಭಾರತೀಯ ರೈಲ್ವೆಯು ಪಶ್ಚಿಮದಲ್ಲಿ ಹಪಾ, ಬರೋಡಾ, ಮುಂದ್ರಾ ಮತ್ತು ಪೂರ್ವದಲ್ಲಿ ರೂರ್ಕೆಲಾ, ದುರ್ಗಾಪುರ, ಟಾಟಾನಗರ, ಅಂಗುಲ್ ಗಳಿಂದ ಆಮ್ಲಜನಕ ಪಡೆದುಕೊಂಡು ಉತ್ತರಾಖಂಡ, ಕರ್ನಾಟಕ, ಮಹಾರಾಷ್ಟ್ರ, ಮಧ್ಯಪ್ರದೇಶ, ಆಂಧ್ರಪ್ರದೇಶ, ರಾಜಸ್ಥಾನ, ತಮಿಳು ನಾಡು, ಹರ್ಯಾಣಾ, ತೆಲಂಗಾಣ, ಪಂಜಾಬ್, ಕೇರಳ, ದಿಲ್ಲಿ, ಉತ್ತರ ಪ್ರದೇಶ, ಮತ್ತು ಅಸ್ಸಾಂ ರಾಜ್ಯಗಳಿಗೆ ಅತ್ಯಂತ ಸಂಕೀರ್ಣ ಕಾರ್ಯಾಚರಣಾ ಮಾರ್ಗಗಳನ್ನು ಯೋಜಿಸಿ ಸರಬರಾಜು ಮಾಡುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+