ಕೋವಿಶೀಲ್ಡ್ ಲಸಿಕೆಯ ಒಂದು ಡೋಸ್‌ಗೆ 200 ರೂ ಫಿಕ್ಸ್!
ನವದೆಹಲಿ, ಜನವರಿ 11: ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಮತ್ತು ಆಸ್ಟ್ರಾಜೆನಿಕಾ ಸಂಸ್ಥೆಗಳು ಅಭಿವೃದ್ಧಿಪಡಿಸಿರುವ ಕೋವಿಶೀಲ್ಡ್ ಕೊರೊನಾ ವೈರಸ್ ಲಸಿಕೆಗೆ ಪ್ರತಿ ಡೋಸ್‌ಗೆ 200 ರೂ ದರ ನಿಗದಿಪಡಿಸಲಾಗಿದೆ. ಭಾರತದಲ್ಲಿ ಈ ಎರಡು ಕಂಪೆನಿಗಳ ಸಹಭಾಗಿತ್ವದಲ್ಲಿ ಲಸಿಕೆ ತಯಾರಿಕೆ, ಪ್ರಯೋಗ ಮತ್ತು ವಿತರಣೆ ನಡೆಸುತ್ತಿರುವ ಪುಣೆಯ ಸೆರಮ್ ಇನ್‌ಸ್ಟಿಟ್ಯೂಟ್, ಕೋವಿಶೀಲ್ಡ್ ದರವನ್ನು ನಿಗದಿಪಡಿಸಲಾಗಿದೆ ಎಂದು ಮಾಹಿತಿ ನೀಡಿದೆ.
ಸರ್ಕಾರದೊಂದಿಗೆ ಮಾಡಿಕೊಳ್ಳಲಾದ ಬೆಲೆ ಒಪ್ಪಂದದ ಬಳಿಕ ಈ ದರವನ್ನು ನಿಗದಿಪಡಿಸಲಾಗಿದೆ. ಮೊದಲ 100 ಮಿಲಿಯನ್ ಡೋಸ್‌ಗಳನ್ನು 200 ರೂ ದಂತೆ ಸರ್ಕಾರಕ್ಕೆ ಮಾರಾಟ ಮಾಡಲಿದೆ. ಆರಂಭಿಕ ಹಂತದಲ್ಲಿ 11 ಮಿಲಿಯನ್ ಡೋಸ್ ಲಸಿಕೆಗಳನ್ನು ಅದು ಪೂರೈಕೆ ಮಾಡುವ ನಿರೀಕ್ಷೆಯಿದೆ.
'ಲಸಿಕೆಯ ದರವು ನಿಗದಿಗೊಂಡಿದೆ. ಒಪ್ಪಂದದಲ್ಲಿ ಯಾವುದೇ ಸಮಸ್ಯೆಯಿಲ್ಲ' ಎಂದಿರುವ ಎಸ್‌ಐಐ, ಸೋಮವಾರ ಸಂಜೆ ಅಥವಾ ಮಂಗಳವಾರ ಬೆಳಿಗ್ಗೆ ಪುಣೆಯಲ್ಲಿನ ಘಟಕದಿಂದ ಕೋವಿಶೀಲ್ಡ್ ಪೂರೈಕೆ ಆರಂಭವಾಗಲಿದೆ ಎಂದು ಹೇಳಿದೆ.

ಪ್ರತಿ ವಾರ ಕೆಲವು ಮಿಲಿಯನ್ ಲಸಿಕೆಗಳನ್ನು ಪೂರೈಕೆ ಮಾಡಲಾಗುವುದು. ಮೊದಲ ಹಂತದಲ್ಲಿ 11 ಮಿಲಿಯನ್ ಡೋಸ್‌ಗಳಷ್ಟು ಲಸಿಕೆಗಳನ್ನು ರವಾನಿಸುವ ನಿರೀಕ್ಷೆಯಿದೆ. ಸರ್ಕಾರದ ಕಡೆಯಿಂದ ಕೆಲವು ದಾಖಲೆ ಕೆಲಸಗಳು ಬಾಕಿ ಇತ್ತು. ಈಗ ಅದು ಮುಗಿದಿದೆ. ಹೀಗಾಗಿ ಲಸಿಕೆ ಪೂರೈಕೆಗೆ ತಯಾರಿ ಶುರುವಾಗಿದೆ ಎಂದು ತಿಳಿಸಿದೆ.
ಭಾರತದ ಖಾಸಗಿ ಮಾರುಕಟ್ಟೆಗೆ ಲಸಿಕೆ ನೀಡುವುದಾದರೆ ಪ್ರತಿ ಡೋಸ್‌ಗೆ 1,000 ರೂ ವೆಚ್ಚ ತಗುಲಲಿದೆ ಎಂದು ಸೆರಮ್ ಸಂಸ್ಥೆ ಮುಖ್ಯಸ್ಥ ಅದಾರ್ ಪೂನಾವಾಲಾ ತಿಳಿಸಿದ್ದರು. ಜನವರಿ 16ರಿಂದ ಲಸಿಕೆ ಕಾರ್ಯಕ್ರಮ ನಡೆಸುವುದಾಗಿ ಸರ್ಕಾರ ತಿಳಿಸಿದೆ.












Click it and Unblock the Notifications