ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿ ಕೊವಿಡ್-19 ಲಸಿಕೆ ಸಂಶೋಧನೆ ಯಾವ ಹಂತದಲ್ಲಿದೆ?

|
Google Oneindia Kannada News

ನವದೆಹಲಿ, ಸಪ್ಟೆಂಬರ್,09: ಭಾರತದಲ್ಲಿ ಕೊರೊನಾವೈರಸ್ ಲಸಿಕೆ ಸಂಶೋಧನೆಗಾಗಿ ಅಸ್ಟ್ರಾ ಜೆನಿಕ್ ಮಾದರಿ ಪ್ರಯೋಗ ನಡೆಸುವುದಕ್ಕೆ ಯಾವುದೇ ನಿರ್ಬಂಧವಿಲ್ಲ ಎಂದು ಸೆರಮ್ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾ(ಎಸ್ಐಐ) ಸ್ಪಷ್ಟನೆ ನೀಡಿದೆ.

ಇಂಗ್ಲೆಂಡ್ ನಲ್ಲಿ ಆಸ್ಟ್ರಾ ಜೆನಿಕ್ ಲಸಿಕೆಯ ಪ್ರಯೋಗವನ್ನು ರದ್ದುಗೊಳಿಸಿರುವ ಬೆನ್ನಲ್ಲೇ ಸೆರಮ್ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾ ಈ ಸ್ಪಷ್ಟನೆ ನೀಡಿದೆ. ಲಸಿಕೆಯ ಆಸ್ಟ್ರಾ ಜೆನಿಕ್ ಮಾದರಿ ಪ್ರಯೋಗದಲ್ಲಿ ಈವರೆಗೆ ಯಾವುದೇ ದೋಷಗಳು ಕಂಡು ಬಂದಿಲ್ಲ ಎಂದು ಎಸ್ಐಐ ತಿಳಿಸಿದೆ.

ಭಾರತದಲ್ಲಿ ಕೊರೊನಾ ವೈರಸ್ ಲಸಿಕೆಗಳ ಪ್ರಗತಿ ಯಾವ ಹಂತದಲ್ಲಿದೆ? ಭಾರತದಲ್ಲಿ ಕೊರೊನಾ ವೈರಸ್ ಲಸಿಕೆಗಳ ಪ್ರಗತಿ ಯಾವ ಹಂತದಲ್ಲಿದೆ?

"ಇಂಗ್ಲೆಂಡ್ ನಲ್ಲಿ ನಡೆಸಿದ ಪ್ರಯೋಗಗಳ ಬಗ್ಗೆ ನಾವು ಪ್ರತಿಕ್ರಿಯೆ ನೀಡುವುದಕ್ಕೆ ಹೋಗುವುದಿಲ್ಲ. ಆದರೆ ನಾವು ನಮ್ಮ ಸಂಶೋಧನೆಯನ್ನು ಯಾವುದೇ ಕಾರಣಕ್ಕೂ ತಡೆ ಹಿಡಿಯುವುದಿಲ್ಲ. ಏಕೆಂದರೆ ನಮ್ಮ ಪ್ರಯೋಗಗಳಲ್ಲಿ ಯಾವುದೇ ದೋಷಗಳು ಕಂಡು ಬಂದಿಲ್ಲ. ಈ ಹಿನ್ನೆಲೆ ಮೊದಲಿನಂತೆ ಲಸಿಕೆ ಸಂಶೋಧನಾ ಪ್ರಯೋಗವು ನಡೆಯಲಿದೆ" ಎಂದು ಎಸ್ಐಐ ತಿಳಿಸಿದೆ.

3ನೇ ಹಂತದ ಪ್ರಯೋಗ ನಡೆಸುವುದಿಲ್ಲ ಎಂದ ಇಂಗ್ಲೆಂಡ್

3ನೇ ಹಂತದ ಪ್ರಯೋಗ ನಡೆಸುವುದಿಲ್ಲ ಎಂದ ಇಂಗ್ಲೆಂಡ್

ಆಕ್ಸ್ ಫರ್ಡ್ ಯೂನಿವರ್ಸಿಟಿ ಜೊತೆಗೂಡಿ ನಡೆಸುತ್ತಿದ್ದ ಅಸ್ಟ್ರಾ ಜೆನಿಕ್ ಮಾದರಿಯ 3ನೇ ಹಂತದ ವೈದ್ಯಕೀಯ ಪ್ರಯೋಗವನ್ನು ತಡೆ ಹಿಡಿಯಲಾಗಿದೆ ಎಂದು ಇಂಗ್ಲೆಂಡ್ ಮೂಲದ ಬಯೋಟೆಕ್ ಸಂಸ್ಥೆ ತಿಳಿಸಿದೆ. ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವ ಶಂಕೆ ವ್ಯಕ್ತವಾದ ಹಿನ್ನೆಲೆ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಸಂಸ್ಥೆಯು ತಿಳಿಸಿದೆ.

ಮೂರು ಹಂತಗಳಲ್ಲಿ ನಡೆದ ವೈದ್ಯಕೀಯ ಪ್ರಯೋಗ ಸಫಲ

ಮೂರು ಹಂತಗಳಲ್ಲಿ ನಡೆದ ವೈದ್ಯಕೀಯ ಪ್ರಯೋಗ ಸಫಲ

ಸೆರಮ್ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾ ಪ್ರಾರಂಭಿಕವಾಗಿ ಮೊದಲ ಎರಡು ಹಂತಗಳಲ್ಲಿ ನಡೆಸಿದ ವೈದ್ಯಕೀಯ ಪ್ರಯೋಗಗಳು ಯಶಸ್ವಿಯಾಗಿದೆ. ಆಕ್ಸ್ ಫರ್ಡ್ ಯೂನಿವರ್ಟಿಸಿ ನೀಡಿದ ಕೊವಿಡ್-19 ಲಸಿಕೆಯ ಮಾದರಿ ಮೇಲೆ ನಡೆಸಿದ 3ನೇ ಪ್ರಯೋಗ ಕೂಡಾ ಭಾರತೀಯರಿಗೆ ಸುರಕ್ಷಿತ ಮತ್ತು ಪ್ರತಿರಕ್ಷಕವಾಗಿ ಕೆಲಸ ಮಾಡಿರುವುದು ಗೊತ್ತಾಗಿದೆ. ಇದಾದ ನಂತರವೇ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾದಿಂದ ಕಳೆದ ತಿಂಗಳು ಫಾರ್ಮಾ ಕಂಪನಿಗಳು ಅನುಮೋದನೆ ಪಡೆದುಕೊಂಡವು. ಭಾರತದಲ್ಲಿ ಕೊರೊನಾವೈರಸ್ ಸೋಂಕಿನ ಲಸಿಕೆಯನ್ನು ಸೆರಮ್ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾ ಉತ್ಪಾದನೆ ಮಾಡಲಿದೆ.

ಭಾರತದಲ್ಲಿ ಹೇಗಿದೆ ಕೊವಿಡ್-19 ಲಸಿಕೆ ಪ್ರಯೋಗ?

ಭಾರತದಲ್ಲಿ ಹೇಗಿದೆ ಕೊವಿಡ್-19 ಲಸಿಕೆ ಪ್ರಯೋಗ?

ಆಕ್ಸ್‌ಫರ್ಡ್ ಮತ್ತು ಭಾರತ್ ಬಯೋಟೆಕ್ ‌ನ ಲಸಿಕೆ ಮಾದರಿಗಳ 2-3 ಹಂತದ ಪ್ರಯೋಗಗಳು ಮುಂದಿನ ವಾರದ ಆರಂಭದಲ್ಲಿ ಶುರುಮಾಡಲಿದೆ. ಪ್ರಸ್ತುತ ಭಾರತದಲ್ಲಿ ಮೂರು ಕಂಪೆನಿಗಳು ಕೋವಿಡ್ ಲಸಿಕೆಯ 2-3 ಹಂತದ ಮಾನವ ಪ್ರಯೋಗಗಳನ್ನು ನಡೆಸುತ್ತಿವೆ. ಜಗತ್ತಿನಾದ್ಯಂತ ಅನೇಕ ದೇಶಗಳಲ್ಲಿ ವಿವಿಧ ಹಂತದ ಲಸಿಕೆಗಳ ಪ್ರಯೋಗ ನಡೆಯುತ್ತಿವೆ. ಕೆಲವು ಲಸಿಕೆಗಳು ಪ್ರಾಥಮಿಕ ಪ್ರಯೋಗಗಳಲ್ಲಿ ಜನರಲ್ಲಿ ಪ್ರತಿರಕ್ಷಕ ಸಾಮರ್ಥ್ಯ ಹೆಚ್ಚಿಸಿರುವುದು ಕಂಡುಬಂದಿದೆ. ಆದರೆ ಇವು ಕೊರೊನಾ ವೈರಸ್‌ಗೆ ಪರಿಣಾಮಕಾರಿ ಮದ್ದಾಗುತ್ತವೆ ಎಂದು ಇನ್ನೂ ಹೇಳಲು ಸಾಧ್ಯವಿಲ್ಲ.

ಕೊರೊನಾವೈರಸ್ ಸೋಂಕಿತ ಪ್ರಕರಣಗಳೆಷ್ಟು?

ಕೊರೊನಾವೈರಸ್ ಸೋಂಕಿತ ಪ್ರಕರಣಗಳೆಷ್ಟು?

ಭಾರತದಲ್ಲಿ ಒಂದೇ ದಿನ 89,706 ಮಂದಿಗೆ ಕೊರೊನಾವೈರಸ್ ಕಾಣಿಸಿಕೊಂಡಿದ್ದು, ಒಟ್ಟು ಕೊವಿಡ್-19 ಪ್ರಕರಣಗಳ ಸಂಖ್ಯೆ 43,70,129ಕ್ಕೆ ಏರಿಕೆಯಾಗಿದೆ. ದೇಶದಲ್ಲಿ ಇದುವರೆಗೂ 33,98,845 ಸೋಂಕಿತರು ಗುಣಮುಖರಾಗಿದ್ದು, 8,97,394 ಸಕ್ರಿಯ ಪ್ರಕರಣಗಳಿವೆ. ಕಳೆದ 24 ಗಂಟೆಯಲ್ಲಿ 1,115 ಜನರು ಮಹಾಮಾರಿಗೆ ಬಲಿಯಾಗಿದ್ದರೆ, ಒಟ್ಟು ಸಾವಿನ ಸಂಖ್ಯೆ 73,890ಕ್ಕೆ ಏರಿಕೆಯಾಗಿದೆ. ದೇಶದಲ್ಲಿ ಇದುವರೆಗೂ 5,18,04,677 ಮಾದರಿಗಳ ಕೊವಿಡ್-19 ಪರೀಕ್ಷೆ ನಡೆಸಲಾಗಿದೆ ಎಂದು ಐಸಿಎಂಆರ್ ಹೇಳಿದೆ.

English summary
Oxford Coronavirus Vaccine Trials Not Paused In India, Clarifies Serum Institute.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X