ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆರ್‌ಟಿಐ ಅನುಷ್ಠಾನಕ್ಕೆ 17 ವರ್ಷ; 42 ಮಾಹಿತಿ ಆಯುಕ್ತರ ಹುದ್ದೆಗಳು ಇನ್ನೂ ಖಾಲಿ!

|
Google Oneindia Kannada News

ನವದೆಹಲಿ, ಅ.11: ಅಕ್ಟೋಬರ್ 2022 ಕ್ಕೆ ಮಾಹಿತಿ ಹಕ್ಕು (ಆರ್‌ಟಿಐ) ಕಾಯಿದೆ ಜಾರಿಗೆ ಬಂದು 17 ವರ್ಷಗಳು ತುಂಬಿವೆ. ಇದು ಲಕ್ಷಾಂತರ ಜನರಿಗೆ ಮಾಹಿತಿ ಪಡೆಯಲು ಮತ್ತು ಸರ್ಕಾರವನ್ನು ಜವಾಬ್ದಾರರನ್ನಾಗಿಸಲು ಅವಕಾಶ ಮಾಡಿಕೊಟ್ಟ ಹೆಗ್ಗುರುತಿನ ಕಾನೂನಾಗಿ ಗುರುತಿಸಿಕೊಂಡಿದೆ. ಆದರೆ, ಈ 17 ವರ್ಷಗಳನ್ನು ಹಿಂತಿರುಗಿ ನೋಡಿದರೇ ಪಾರದರ್ಶಕತೆ ಕಾಣುವುದು ಅಷ್ಟಕ್ಕಷ್ಟೇ.

ದೇಶದಾದ್ಯಂತ 26 ಮಾಹಿತಿ ಆಯೋಗಗಳಲ್ಲಿ ಸುಮಾರು 3.15 ಲಕ್ಷ ದೂರುಗಳು ಅಥವಾ ಮೇಲ್ಮನವಿಗಳು ಬಾಕಿ ಉಳಿದಿವೆ. ಹಲವು ರಾಜ್ಯಗಳಲ್ಲಿ ಕಚೇರಿಗಳೇ ಇಲ್ಲ, ಕೆಲವೆಡೆ ಕಚೇರಿಗಳಿದ್ದರೇ, ಯಾವುದೇ ಆಡಳಿತ ಮುಖ್ಯಸ್ಥರಿಲ್ಲ.

ಆರ್‌ಟಿಐ ಆಯುಕ್ತರ ನೇಮಕ ಪ್ರಶ್ನಿಸಿದ್ದ ವ್ಯಕ್ತಿಗೆ 5 ಲಕ್ಷ ದಂಡ ವಿಧಿಸಿದ ಹೈಕೋರ್ಟ್ಆರ್‌ಟಿಐ ಆಯುಕ್ತರ ನೇಮಕ ಪ್ರಶ್ನಿಸಿದ್ದ ವ್ಯಕ್ತಿಗೆ 5 ಲಕ್ಷ ದಂಡ ವಿಧಿಸಿದ ಹೈಕೋರ್ಟ್

ಹೀಗಾಗಿ ಜನರಿಗೆ ಮಾಹಿತಿ ಮತ್ತು ಪಾರದರ್ಶಕತೆಯ ಆಡಳಿತ ನೀಡುವ ಈ ಕಾನೂನು ಬಳಕೆಯಾಗಿರುವುದು ಅಷ್ಟಕ್ಕಷ್ಟೇ. ಸತಾರ್ಕ್ ನಾಗ್ರಿಕ್ ಸಂಘಟನೆಯ ವರದಿಯ ಪ್ರಕಾರ, ಪ್ರತಿ ವರ್ಷ ಆಯೋಗಗಳಲ್ಲಿ ಮೇಲ್ಮನವಿ ಅಥವಾ ದೂರುಗಳ ಬ್ಯಾಕ್‌ಲಾಗ್ ಸ್ಥಿರವಾಗಿ ಹೆಚ್ಚಾಗುತ್ತಲೆ ಇದೆ.

ಗುಣಮಟ್ಟಕ್ಕೆ ಅನುಗುಣವಾಗಿ ಕಾರ್ಯ ನಿರ್ವಹಣೆಯಿಲ್ಲ!

ಗುಣಮಟ್ಟಕ್ಕೆ ಅನುಗುಣವಾಗಿ ಕಾರ್ಯ ನಿರ್ವಹಣೆಯಿಲ್ಲ!

ಮಾಹಿತಿ ಆಯೋಗಗಳು (IC ಗಳು) ಗುಣಮಟ್ಟಕ್ಕೆ ಅನುಗುಣವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಹೊಸ ವರದಿಯು ಕಂಡುಹಿಡಿದಿದೆ. ಜಾರ್ಖಂಡ್ ಮತ್ತು ತ್ರಿಪುರಾದ ಎರಡು ರಾಜ್ಯ ಆಯೋಗಗಳು ನಿಷ್ಕ್ರಿಯಗೊಂಡಿವೆ. ಆದರೆ ನಾಲ್ಕು ಪಶ್ಚಿಮ ಬಂಗಾಳ, ಆಂಧ್ರಪ್ರದೇಶ, ತೆಲಂಗಾಣ ಮತ್ತು ಮಣಿಪುರದಲ್ಲಿ ಯಾವುದೇ ಆಡಳಿತ ಮುಖ್ಯಸ್ಥರಿಲ್ಲದೆ ಕಾರ್ಯನಿರ್ವಹಿಸುತ್ತಿವೆ.

ದೆಹಲಿ ಮೂಲದ ಸತಾರ್ಕ್ ನಾಗ್ರಿಕ್ ಫೌಂಡೇಶನ್‌ನ ವರದಿಯು ಆರ್‌ಟಿಐ ಕಾಯ್ದೆಯ ಮೂಲಕ ಈ ಡೇಟಾವನ್ನು ಕೆದಕಿದೆ.

ನಾಗರಿಕರ ಕಡೆ ಸಾರ್ವಜನಿಕ ಮಾಹಿತಿ ಅಧಿಕಾರಿಗಳ ದುರ್ವರ್ತನೆ!

ನಾಗರಿಕರ ಕಡೆ ಸಾರ್ವಜನಿಕ ಮಾಹಿತಿ ಅಧಿಕಾರಿಗಳ ದುರ್ವರ್ತನೆ!

ಸಾರ್ವಜನಿಕ ಅಧಿಕಾರಿಗಳು ಮಾಹಿತಿ ಬಹಿರಂಗಪಡಿಸುವಿಕೆಯಲ್ಲಿ ತೋರುವ ನಿರ್ಲಕ್ಷ್ಯ, ನಾಗರಿಕರ ಬಗ್ಗೆ ಸಾರ್ವಜನಿಕ ಮಾಹಿತಿ ಅಧಿಕಾರಿಗಳು ತೋರುವ ದುರ್ವರ್ತನೆ, ಮಾಹಿತಿಯನ್ನು ಮರೆಮಾಚಲು ಮಾಹಿತಿ ಹಕ್ಕು (ಆರ್‌ಟಿಐ) ಕಾಯಿದೆಯ ನಿಬಂಧನೆಗಳನ್ನು ತಪ್ಪಾಗಿ ಅರ್ಥೈಸುವುದು, ಸಾರ್ವಜನಿಕ ಹಿತಾಸಕ್ತಿ ಯಾವುದು ಮತ್ತು ಸರಿ ಎಂಬುದರ ಕುರಿತು ಸ್ಪಷ್ಟತೆಯ ಕೊರತೆ ಈ ಪಾರದರ್ಶಕತೆಯ ಕಾನೂನಿನ ಪರಿಣಾಮಕಾರಿ ಅನುಷ್ಠಾನದಲ್ಲಿ ತೊಡಕಾಗುತ್ತಿವೆ ಎಂದು ವರದಿ ತಿಳಿಸಿದೆ.

ಮಾಹಿತಿ ಆಯುಕ್ತರಲ್ಲಿ ಶೇಕಡ ಐದಕ್ಕಿಂತ ಕಡಿಮೆ ಮಹಿಳೆಯರು!

ಮಾಹಿತಿ ಆಯುಕ್ತರಲ್ಲಿ ಶೇಕಡ ಐದಕ್ಕಿಂತ ಕಡಿಮೆ ಮಹಿಳೆಯರು!

"ಮುಖ್ಯ ಮಾಹಿತಿ ಆಯುಕ್ತರು ಮತ್ತು ಮಾಹಿತಿ ಆಯುಕ್ತರಿಗೆ ಮಂಜೂರಾದ 165 ಹುದ್ದೆಗಳಲ್ಲಿ 42 ಹುದ್ದೆಗಳು ಖಾಲಿ ಇವೆ" ಎಂದು ಸರ್ಕಾರೇತರ ಸಂಸ್ಥೆಯಾದ ಟ್ರಾನ್ಸ್‌ಪರೆನ್ಸಿ ಇಂಟರ್‌ನ್ಯಾಶನಲ್ ಇಂಡಿಯಾ (TII) ಹೊರತಂದಿರುವ ಆರನೇ ರಾಜ್ಯ ಪಾರದರ್ಶಕತೆ ವರದಿ 2022 ಹೇಳಿದೆ.

42 ಖಾಲಿ ಹುದ್ದೆಗಳಲ್ಲಿ ಎರಡು CIC ಗಳು (ಗುಜರಾತ್ ಮತ್ತು ಜಾರ್ಖಂಡ್‌ನಲ್ಲಿ) ಮತ್ತು ಪಶ್ಚಿಮ ಬಂಗಾಳ, ಪಂಜಾಬ್ ಮತ್ತು ಮಹಾರಾಷ್ಟ್ರದಲ್ಲಿ ತಲಾ ನಾಲ್ಕು ಮತ್ತು ಉತ್ತರಾಖಂಡ, ಕೇರಳ, ಹರಿಯಾಣ ಮತ್ತು ಕೇಂದ್ರದಲ್ಲಿ ತಲಾ ಮೂರು ಸೇರಿದಂತೆ 40 ಮಾಹಿತಿ ಆಯುಕ್ತರ ಹುದ್ದೆಗಳು ಹಾಗೆ ಖಾಲಿ ಇವೆ ಎಂದಿದೆ.

ಇದರ ಜೊತೆಗೆ ಮಾಹಿತಿ ಆಯುಕ್ತರ ಹುದ್ದೆಗಳಲ್ಲಿ ಶೇಕಡ ಐದಕ್ಕಿಂತ ಕಡಿಮೆ ಮಹಿಳೆಯರೇ ಇದ್ದಾರೆ ಎಂದು ವರದಿ ಹೇಳಿದೆ.

ಮಹಾರಾಷ್ಟ್ರದಲ್ಲಿ 90 ಸಾವಿರಕ್ಕೂ ಹೆಚ್ಚು ಆರ್‌ಟಿಐಗಳು ಬಾಕಿ

ಮಹಾರಾಷ್ಟ್ರದಲ್ಲಿ 90 ಸಾವಿರಕ್ಕೂ ಹೆಚ್ಚು ಆರ್‌ಟಿಐಗಳು ಬಾಕಿ

ಈ ವರ್ಷದ ಜೂನ್ 30 ರ ಹೊತ್ತಿಗೆ, ಮೂರು ಲಕ್ಷಕ್ಕೂ ಹೆಚ್ಚು ಮೇಲ್ಮನವಿಗಳು ಬಾಕಿ ಉಳಿದಿದ್ದು, ಪ್ರತಿವರ್ಷ ಬ್ಯಾಕ್‌ಲಾಗ್ ಸ್ಥಿರವಾಗಿ ಹೆಚ್ಚುತ್ತಿದೆ. ಕಳೆದ ವರ್ಷದಿಂದ ಈ ಸಂಖ್ಯೆ ಸುಮಾರು ಒಂದು ಲಕ್ಷದಷ್ಟು ಏರಿಕೆಯಾಗಿದೆ. ಕಡಿಮೆ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುವ ಆಯೋಗಗಳೇ ಇದಕ್ಕೆ ಕಾರಣ ಎನ್ನಲಾಗಿದೆ.

ಮಹಾರಾಷ್ಟ್ರವು 90 ಸಾವಿರಕ್ಕೂ ಹೆಚ್ಚು ಆರ್‌ಟಿಐಗಳು ಬಾಕಿ ಉಳಿದಿದ್ದು, ಕೇವಲ 9 ರಾಜ್ಯಗಳಲ್ಲಿ ಸಾವಿರಕ್ಕಿಂತ ಕಡಿಮೆ ಇದೆ. ಮಿಜೋರಾಂನಲ್ಲಿ ಗಮನಾರ್ಹವಾಗಿ, ಒಂದೇ ಒಂದು RTI ಅರ್ಜಿ ಬಾಕಿ ಇಲ್ಲ.

ಕಾಯಿದೆಯ ಪ್ರಕಾರ, ಯಾವುದೇ ಸಾರ್ವಜನಿಕ ಅಧಿಕಾರಿಯು ಉದ್ದೇಶಪೂರ್ವಕವಾಗಿ ವಿಳಂಬ ಮಾಡುವ ಅಥವಾ ಬೇಡಿಕೆಯ ಮಾಹಿತಿಯನ್ನು ನೀಡಲು ನಿರಾಕರಿಸುವ ವಿರುದ್ಧ ದಿನಕ್ಕೆ 250 ರೂ.ಗಳ ದಂಡವನ್ನು ವಿಧಿಸಬಹುದು. ಇದೂ ಕೂಡ ಇಲ್ಲಿ ಪಾಲನೆಯಾಗಿಲ್ಲ.

ಮಹಾರಾಷ್ಟ್ರ ಆಯೋಗವು ಪ್ರಸ್ತುತ ಐದು ಮಾಹಿತಿ ಆಯುಕ್ತರನ್ನು ಹೊಂದಿದೆ. ಪಶ್ಚಿಮ ಬಂಗಾಳದಲ್ಲಿ 11 ಮಂದಿ ಆಯುಕ್ತರು ಇರಬೇಕು. ಆದರೆ, ಕೇವಲ ಇಬ್ಬರನ್ನು ಹೊಂದಿದೆ. ಮೇಲ್ಮನವಿಗಳ ಸಂಖ್ಯೆ ಹೆಚ್ಚಿದ್ದರೂ, ಅಗತ್ಯವಿರುವ ಸಾಮರ್ಥ್ಯದೊಂದಿಗೆ ಕಾರ್ಯನಿರ್ವಹಿಸುತ್ತಿರುವ ಕೆಲವೇ ರಾಜ್ಯಗಳಲ್ಲಿ ಕರ್ನಾಟಕವೂ ಒಂದಾಗಿದೆ.

ಮಾಹಿತಿ ಹಕ್ಕು ಕಾಯಿದೆಯ ಸೆಕ್ಷನ್ 25 ಪ್ರತಿ ಆಯೋಗವು ತಮ್ಮ ಕಾರ್ಯಚಟುವಟಿಕೆ ಮತ್ತು ಕಾಯಿದೆಯ ಅನುಷ್ಠಾನವನ್ನು ವಿವರಿಸುವ ವಾರ್ಷಿಕ ವರದಿಯನ್ನು ಪ್ರಕಟಿಸಬೇಕು ಎಂದು ಹೇಳುತ್ತದೆ. 2020 ರಲ್ಲಿ, 29 ಆಯೋಗಗಳಲ್ಲಿ 20 ಕೂಡ ಇದನ್ನು ಅನುಸರಿಸಿಲ್ಲ.

English summary
Over 3.15 lakh RTI appeals pending, Over 40 vacant posts of information commissioner, 2 states without CICs: Report. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X