ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎನ್ನಾರೈಗಳಿಗೂ ಮತದಾನ, ಕೇರಳಿಗರೇ ಮುಂದು

By Mahesh
|
Google Oneindia Kannada News

ಬೆಂಗಳೂರು,ಮಾ.11: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ಅನಿವಾಸಿ ಭಾರತೀಯರು ಮತದಾನ ಮಾಡುವ ಅವಕಾಶ ಕಲ್ಪಿಸಲಾಗಿದೆ. ಒಟ್ಟು 11,844 ಎನ್ ಆರ್ ಐಗಳು ಮತದಾನ ಮಾಡಲು ಅಂಚೆ ಮೂಲಕ ತಮ್ಮ ಹೆಸರು ನೋಂದಾಯಿಸಿ ಕೊಂಡಿದ್ದಾರೆ. ಆದರೆ, ಚುನಾವಣಾ ದಿನದಂದು ಮತದಾನ ಮಾಡಲು ಅವರು ತಮ್ಮ ಕ್ಷೇತ್ರಕ್ಕೆ ತೆರಳಬೇಕಾಗುತ್ತದೆ.

ಮತದಾನಕ್ಕಾಗಿ ಹೆಸರು ನೋಂದಾಯಿಸಿದ ಅನಿವಾಸಿ ಭಾರತೀಯರಲ್ಲಿ ಕೇರಳ ಮೂಲದ ಎನ್ನಾರೈಗಳು ಅಗ್ರಸ್ಥಾನದಲ್ಲಿದ್ದಾರೆ. 11,488 ಎನ್ ಆರ್ ಐ ಕೇರಳೀಯ ಮತದಾರರಿದ್ದಾರೆ. ಕೇವಲ 138 ಎನ್ ಆರ್ ಐ ಮತದಾರರಿರುವ ಪಂಜಾಬ್ ಎರಡನೆ ಸ್ಥಾನದಲ್ಲಿದೆ. 112 ಮತದಾರರೊಂದಿಗೆ ತಮಿಳುನಾಡು ತೃತೀಯ ಸ್ಥಾನ ಪಡೆದಿದೆ. ವಿಶೇಷವೆಂದರೆ, ಲೋಕಸಭಾ ಚುನಾವಣೆಯಲ್ಲಿ ಗರಿಷ್ಠ ಸಂಖ್ಯೆಯ ಮತದಾರರಿರುವ ಉತ್ತರಪ್ರದೇಶದಲ್ಲಿ ಒಬ್ಬನೇ ಒಬ್ಬ ಎನ್ ಆರ್ ಐ ಮತದಾರನಿಲ್ಲ. ಪಾಂಡಿಚೇರಿ ಮೂಲದವರು 56, ಗೋವಾದವರು 27, ನವದೆಹಲಿ 13, ಮಹಾರಾಷ್ಟ್ರ ಮೂಲದವರು 13 ಮಂದಿ ಇದ್ದಾರೆ.

Over 11k NRIs enroll in voters' list, majority from Kerala

2010ರ ಜನಪ್ರಾತಿನಿಧ್ಯ ಕಾಯ್ದೆಯ ತಿದ್ದುಪಡಿ ಮಾಡಿದ ಬಳಿಕ ವಿದೇಶಗಳಲ್ಲಿ ವಾಸಿಸುವ ಅನಿವಾಸಿ ಭಾರತೀಯರಿಗೂ ಮತದಾರರಾಗಿ ಹೆಸರು ನೋಂದಾಯಿಸಿಕೊಳ್ಳಲು ಅವಕಾಶ ನೀಡಲಾಗಿದೆ. ವಿದೇಶಗಳಲ್ಲಿ 1 ಕೋಟಿಗೂ ಅಧಿಕ ಎನ್ ಆರ್ ಐಗಳು ವಾಸಿಸುತ್ತಿದ್ದಾರೆಂದು ಮೇ 2012ರಲ್ಲಿ ಸಾಗರೋತ್ತರ ವ್ಯವಹಾರಗಳ ಸಚಿವಾಲಯದ ವರದಿ ತಿಳಿಸಿದೆ.

ಚುನಾವಣಾ ಆಯೋಗದ ಕಾನೂನುಗಳ ಪ್ರಕಾರ ಎನ್ಆರ್ ಐ ಬೇರೆ ಯಾವುದೇ ದೇಶದ ಪೌರತ್ವ ಹೊಂದಿರದಿದ್ದರೆ ಮಾತ್ರ ಆತ/ಆಕೆ ಮತದಾನಕ್ಕೆ ಅರ್ಹರಾಗುತ್ತಾರೆ. ಎನ್ ಆರ್ಐ ತನ್ನ ಪಾಸ್ ಪೋರ್ಟ್ ನಲ್ಲಿ ನಮೂದಿಸಿದ ಭಾರತದ ವಾಸ್ತವ್ಯ ಸ್ಥಳವಿರುವ ಕ್ಷೇತ್ರದಲ್ಲಿ ಮತದಾನ ಮಾಡಬೇಕಾಗುತ್ತದೆ. ಹೆಚ್ಚಿನ ಮಾಹಿತಿ ಇಲ್ಲಿದೆ ಓದಿ ಎನ್ನಾರೈಗಳು ಹೇಗೆ ಮತ ಹಾಕಬಹುದು? ಈ ಬಗ್ಗೆ ವಿವರ [ಚುನಾವಣಾ ವೆಬ್ ತಾಣದಲ್ಲಿದೆ ನೋಡಿ]

English summary
This time, for the first time, around 11, 844 non-resident Indians will be voting in the Lok Sabha elections, said a TOI report. Interestingly, 11, 488 NRI voters are from the southern state, Kerala.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X