ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉತ್ತರ ಭಾರತದ 100ಕ್ಕೂ ಹೆಚ್ಚು ಮಕ್ಕಳಲ್ಲಿ ಇನ್‌ಫ್ಲಾಮೇಟರಿ ಸಿಂಡ್ರೋಮ್ ಪತ್ತೆ

|
Google Oneindia Kannada News

ನವದೆಹಲಿ, ಮೇ 28: ಉತ್ತರ ಭಾರತದಲ್ಲಿ 100ಕ್ಕೂ ಹೆಚ್ಚು ಮಕ್ಕಳಲ್ಲಿ ಇನ್‌ಫ್ಲಾಮೇಟರಿ ಸಿಂಡ್ರೋಮ್ ಪತ್ತೆಯಾಗಿದೆ.

ಕಳೆದ ಐದು ದಿನಗಳ್ಲಲಿ ಕೊರೊನಾ ಸೋಂಕಿನಿಂದ ಚೇತರಿಸಿಕೊಂಡ ಮಕ್ಕಳಲ್ಲಿ ಈ ರೋಗ ಕಾಣಿಸಿಕೊಂಡಿದೆ. ಇದನ್ನು ಕೊರೊನಾ ನಂತರದ ಸಮಸ್ಯೆ ಎಂದು ಗುರುತಿಸಲಾಗಿದೆ.

ಎರಡು ಪ್ರತ್ಯೇಕ ಕೋವಿಡ್ ಲಸಿಕೆ ಡೋಸ್‌ ಪಡೆಯುವುದರಿಂದ ಏನಾಗುತ್ತೆ: ಕೇಂದ್ರ ಹೇಳಿದ್ದೇನು? ಎರಡು ಪ್ರತ್ಯೇಕ ಕೋವಿಡ್ ಲಸಿಕೆ ಡೋಸ್‌ ಪಡೆಯುವುದರಿಂದ ಏನಾಗುತ್ತೆ: ಕೇಂದ್ರ ಹೇಳಿದ್ದೇನು?

ಈ ರೋಗ ಕೊರೊನಾ ಸೋಂಕಿನಿಂದ ಗುಣಮುಖರಾದ 4 ರಿಂದ 18ವರ್ಷ ವಯಸ್ಸಿನವರಲ್ಲಿ ಕಾಣಿಸಿಕೊಂಡಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ಅತಿಸಾರ, ಮೈಕೈ ನೋವು, ರಕ್ತದೊತ್ತಡ ಕಾಣಿಸಿಕೊಂಡಿದೆ.

Over 100 Inflammatory Syndrome Cases Among Children In North India

ಏನೂ ಇಲ್ಲದೆ ಜ್ವರ ಬರಲಿದೆ. ಇದು ರಕ್ತನಾಳದ ಒಂದು ರೂಪವಾಗಿದ್ದು, ನಾಳಗಳು ದೇಹದಾದ್ಯಂತ ಉಬ್ಬಿಕೊಳ್ಳುತ್ತವೆ. ಜ್ವರವು ಸಾಮಾನ್ಯವಾಗಿ ಐದು ದಿನಗಳಿಗಿಂತ ಹೆಚ್ಚು ಇರುತ್ತದೆ ಮತ್ತು ಸಾಮಾನ್ಯ ಔಷಧಿಗಳಿಗೆ ಪ್ರತಿಕ್ರಿಯಿಸುವುದಿಲ್ಲ. ಆದರೆ, ಇದು 7ರಿಂದ 15 ವರ್ಷದ ನಡುವಿನ ಮಕ್ಕಳಲ್ಲಿಯೂ ವರದಿಯಾಗಿರುವುದಾಗಿ ವೈದ್ಯರು ಹೇಳಿದ್ದಾರೆ.

ತೀವ್ರ ಹೊಟ್ಟೆ, ಜ್ವರ , ಊರಿಯುತದಂತಹ ಲಕ್ಷಣಗಳು ಸಾಮಾನ್ಯವಾಗಿ ಕಂಡುಬರಲಿವೆ. ಇತರ ವೈರಸ್ ಗಳು ಕೂಡಾ ಈ ಲಕ್ಷಣಕ್ಕೆ ಕಾರಣವಾಗಬಹುದು.ತಾಯಿಯ ಗರ್ಭದಲ್ಲಿರುವಾಗ ಮಗುವಿಗೆ ಕೊರೊನಾ ಸೋಂಕು ತಗುಲುವುದಿಲ್ಲ. ಕೆಲವು ಶಿಶುಗಳು ಹೆರಿಗೆಯ ನಂತರ ಸೋಂಕಿಗೆ ಒಳಗಾಗುತ್ತವೆ. ಮಕ್ಕಳಲ್ಲಿ ವೈರಸ್ ಕಡಿಮೆಯಾದಾಗ ಮಕ್ಕಳಲ್ಲಿ ಮಲ್ಟಿ ಸಿಸ್ಟಮ್ ಇನ್ಫ್ಲಾಮೇಟರಿ ಸಿಂಡ್ರೋಮ್ (ಎಂಐಎಸ್-ಸಿ) ಬೆಳವಣಿಗೆಯಾಗುತ್ತದೆ.

ಜ್ವರ, ಕಣ್ಣುಗಳು ಕೆಂಪಾಗುವುದು, ಹಾಲು ಕುಡಿಯಲು ಸಾಧ್ಯವಾಗದಿರುವುದು, ದುಗ್ಧರಸ ಗ್ರಂಥಿಗಳ ಊತ, ವಾಂತಿ ಮತ್ತು ಅತಿಸಾರ ಇದರ ಲಕ್ಷಣಗಳಾಗಿವೆ. ವಿಳಂಬ ಮಾಡದೇ ಮಗುವನ್ನು ತಕ್ಷಣ ವೈದ್ಯರಿಗೆ ತೋರಿಸುವುದರಿಂದ ಈ ಸಮಸ್ಯೆ ಸಂಪೂರ್ಣವಾಗಿ ಕಡಿಮೆಯಾಗುತ್ತದೆ.

English summary
More than 100 cases of multi-organ inflammatory syndrome in children (MIS-C) have been reported in northern India in the last five days as post-Covid reaction, Indian Academy of Pediatric Intensive Care said citing its data.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X