ಭಾರತೀಯ ಸೇನೆಗೆ ಅಗೌರವ ತೋರಿದ ರಾಹುಲ್ ಗಾಂಧಿ?

ನವದೆಹಲಿ, ಜೂನ್ 21: ವಿಶ್ವವೇ ಇಂದು ಯೋಗ ದಿನವನ್ನು ಆಚರಣೆ ಮಾಡುತ್ತಿದೆ. ಭಾರತದಲ್ಲಿಯಂತೂ ಹಬ್ಬದಂತೆ ಈ ದಿನ ಯೋಗವನ್ನು ಆಚರಿಸಲಾಗುತ್ತಿದೆ. ಆದರೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಇಂದು ಮಾಡಿರುವ ಟ್ವೀಟ್ ಭಾರಿ ವಿವಾದಕ್ಕೆ ಕಾರಣವಾಗಿದೆ.

ಭಾರತೀಯ ಸೇನೆಯ ಶ್ವಾನ ವಿಭಾಗವು ಇಂದು ಯೋಗ ದಿನಾಚರಣೆಯಲ್ಲಿ ಭಾಗವಹಿಸಿತ್ತು. ಶ್ವಾನಗಳು ತಮ್ಮ ಮಾರ್ಗದರ್ಶಕರ ಜೊತೆ ಯೋಗ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿತ್ತು. ಆದರೆ ಈ ಬಗ್ಗೆ ರಾಹುಲ್ ಮಾಡಿರುವ ಟ್ವೀಟ್ ಹಲವರ ಕಣ್ಣು ಕೆಂಪಗಾಗಿಸಿದೆ.

ಭಾರತೀಯ ಸೇನೆಯ ಶ್ವಾನಗಳು ತಮ್ಮ ಮಾರ್ಗದರ್ಶಕರ ಮುಂದೆ ಯೋಗದ ಆಸನವನ್ನು ಮಾಡುತ್ತಿರುವ ಎರಡು ಚಿತ್ರಗಳನ್ನು ಟ್ವಿಟ್ಟರ್‌ನಲ್ಲಿ ಪ್ರಕಟಿಸಿರುವ ರಾಹುಲ್ ಗಾಂಧಿ ಅವರು 'ನ್ಯೂ ಇಂಡಿಯಾ' (ಹೊಸ ಭಾರತ) ಎಂದು ವ್ಯಂಗ್ಯ ಅರ್ಥ ಬರುವ ರೀತಿಯಲ್ಲಿ ಟ್ವೀಟ್ ಮಾಡಿದ್ದಾರೆ.

ವ್ಯಂಗ್ಯಾರ್ಥ ಮೂಡುವಂತೆ ಟ್ವೀಟ್ ಮಾಡಿರುವ ರಾಹುಲ್

ವ್ಯಂಗ್ಯಾರ್ಥ ಮೂಡುವಂತೆ ಟ್ವೀಟ್ ಮಾಡಿರುವ ರಾಹುಲ್

ರಾಹುಲ್ ಗಾಂಧಿ ಟ್ವೀಟಿಸಿರುವ ಚಿತ್ರದಲ್ಲಿ ನಾಯಿಗಳು ಅರ್ಧ ಶವಾನದ ಮಾದರಿಯಲ್ಲಿ ಮಲಗಿವೆ, ಮಾರ್ಗದರ್ಶನಕರು ಅದರ ಎದುರು ಹಾಗೆಯೇ ಮಲಗಿದ್ದಾರೆ. ನಾಯಿಗಳಿಗೆ ಸಲಾಂ ಹೊಡೆಯುವ ರೀತಿ ಮೇಲ್ನೋಟಕ್ಕೆ ಇದು ಕಾಣುತ್ತಿದೆ, ಇದನ್ನೇ ಗುರಿ ಮಾಡಿಕೊಂಡು ರಾಹುಲ್ ಅವರು ಟ್ವೀಟ್ ಮಾಡಿರುವಂತೆ ಕಾಣುತ್ತಿದೆ.

ರಾಹುಲ್ ಟ್ವೀಟ್‌ಗೆ ಭಾರಿ ವಿರೋಧ

ರಾಹುಲ್ ಟ್ವೀಟ್‌ಗೆ ಭಾರಿ ವಿರೋಧ

ರಾಹುಲ್ ಗಾಂಧಿ ಅವರು ಈ ಟ್ವೀಟ್‌ಗೆ ಭಾರಿ ವಿರೋಧ ವ್ಯಕ್ತವಾಗಿದೆ. ಸಾವಿರಾರು ಜನ ಈಗಾಗಲೇ ಈ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿದ್ದು, ರಾಹುಲ್ ಗಾಂಧಿ ಅವರು ಸೇನೆಯನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿದ್ದಾರೆ.

'ಸೇನೆ, ಶ್ವಾನ, ಯೋಗವನ್ನು ಅವಮಾನಿಸಿದ್ದಾರೆ'

'ಸೇನೆ, ಶ್ವಾನ, ಯೋಗವನ್ನು ಅವಮಾನಿಸಿದ್ದಾರೆ'

ರಾಹುಲ್ ಗಾಂಧಿ ಅವರು ಒಮ್ಮೆಲೆ ಸೇನೆ, ಶ್ವಾನ ಮತ್ತು ಯೋಗವನ್ನು ಅವಮಾನಿಸಿದ್ದಾರೆ. ರಾಹುಲ್ ಗಾಂಧಿ ಅವರು ಚುನಾವಣೆ ಬಳಿಕ ತಮ್ಮ ಸ್ಥಿಮಿತ ಕಳೆದುಕೊಂಡಿದ್ದಾರೆ ಎಂದು ಒಬ್ಬರು ಖಾರವಾಗಿ ಟ್ವೀಟ್ ಮಾಡಿದ್ದಾರೆ.

ನೆಹರು ಚಿತ್ರವನ್ನು ಟ್ವೀಟ್‌ ಮಾಡಿರುವ ನೆಟ್ಟಿಗರು

ನೆಹರು ಸಿಗರೇಟು ಸೇದುತ್ತಿರುವ ಚಿತ್ರಗಳನ್ನು ಪ್ರತಿಕ್ರಿಯೆಯಲ್ಲಿ ಹಾಕಿರುವ ಕೆಲವರು ಇದು ಓಲ್ಡ್‌ ಇಂಡಿಯಾ ಎಂದು ಕಾಲೆಳೆದಿದ್ದಾರೆ. ಬಹುಪಾಲು ಪ್ರತಿಕ್ರಿಯೆಗಳು ರಾಹುಲ್ ಗಾಂಧಿಗೆ ವ್ಯತಿರಿಕ್ತವಾಗಿಯೇ ಇವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+