ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪತ್ರ ಬರೆದ ಮಾಜಿ ಸೈನಿಕರಿಂದ ಆಮರಣಾಂತ ಉಪವಾಸ

|
Google Oneindia Kannada News

ನವದೆಹಲಿ, ಆಗಸ್ಟ್. 17: ಒನ್ ರಾಂಕ್, ಒನ್ ಪೆನ್ಶನ್ ಯೋಜನೆ ಜಾರಿಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದ ಮಾಜಿ ಸೈನಿಕರು ಇದೀಗ್ ಉಪವಾಸದ ಹಾದಿ ಹಿಡಿದಿದ್ದಾರೆ. ಸ್ವಾತಂತ್ರ್ಯದ ದಿನ ತಮ್ಮ ನಿರೀಕ್ಷಗೆ ಪ್ರಧಾನಿ ಮೋದಿ ಬೆಲೆ ನೀಡುತ್ತಾರೆ ಎಂದು ಕಾದಿದ್ದ ಮಾಜಿ ಯೋಧರಲ್ಲಿ ಇಬ್ಬರು ಆಮರಣಾಂತ ಉಪವಾಸ ಆರಂಭಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿರುವ ಯೋಧರು ಸಮಸ್ಯೆಯನ್ನು ಕೂಡಲೇ ಬಗೆಹರಿಸಿ ಸವಲತ್ತು ಒದಗಿಸಿಕೊಡಬೇಕು ಎಂದು ಆಗ್ರಹಿಸಿದ್ದಾರೆ. ಕಪ್ಪು ಬಾವುಟ ಪ್ರದರ್ಶನ ಮಾಡಿರುವ ಯೋಧರು ಜಂತರ್ ಮಂತರ್ ನಲ್ಲಿ ಪ್ರತಿಭಟನೆಯನ್ನು ತೀವ್ರ ಮಾಡಿದ್ದಾರೆ.[ಗೋ ಬ್ಯಾಕ್ ' ರಾಹುಲ್ ಎಂದ ಮಾಜಿ ಸೈನಿಕರು]

india

ಮಾಜಿ ಸೈನಿಕರ ಪ್ರತಿಭಟನೆಗೆ ಬೆಂಬಲ ನೀಡಲು ಹೋಗಿದ್ದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಸೈನಿಕರ ಆಕ್ರೋಶಕ್ಕೆ ಗುರಿಯಾಗಿದ್ದರು. ನಮ್ಮ ನೆನಪು ಈಗ ಬಂತೆ? ಎಂದು ಸೈನಿಕರು ರಾಹುಲ್ ಗೆ ಪ್ರಶ್ನೆ ಮಾಡಿದ್ದರು.

ಪ್ರಧಾನಿ ಮೋದಿ ವಿದೇಶ ಪ್ರವಾಸದಲ್ಲಿರುವ ಹಿನ್ನೆಲೆಯಲ್ಲಿ ಮಾಜಿ ಸೈನಿಕರು ರಕ್ಷಣಾ ಸಚಿವ ಮನೋಹರ್ ಪೆರಿಕ್ಕರ್ ಅವರನ್ನು ಭೇಟಿ ಮಾಡುವ ಸಂಭವವಿದೆ. ಮಾಜಿ ಸೈನಿಕರು 64 ದಿನಗಳಿಂದ ದೆಹಲಿಯ ಜಂತರ್ ಮಂತರ್ ನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.

English summary
New Delhi: Stepping up agitation on 'One Rank One Pension', a fast-unto-death was launched by two of the protesting ex-servicemen at Jantar Mantar demanding early implementation of the long-pending scheme. Soldiers wrote a letter to Prime Minister Narendra Modi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X