Orangutan: ಭಾರತದಲ್ಲಿ ಅಪರೂಪದ 5 ಪ್ರಾಣಿ ಮರಿಗಳು ಪತ್ತೆ: ವಿಚಿತ್ರ ಪ್ರಾಣಿಯ ಶೋಧಕ್ಕೆ ಮುಂದಾದ ಸರ್ಕಾರ!
Orangutan: ಭಾರತದ ಪ್ರಮುಖ ರಾಜ್ಯವೊಂದರಲ್ಲಿ ವಿಚಿತ್ರವಾದ ಪ್ರಾಣಿಯ ಮರಿಗಳು ಪತ್ತೆಯಾಗಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಪ್ರಾಣಿ ಮರಿಗಳ ಫೋಟೋ ವೈರಲ್ ಆಗುತ್ತಿದೆ. ಭಾರತದ ಒಡಿಶಾದಲ್ಲಿ ವಿಚಿತ್ರ ಪ್ರಾಣಿಯ 5 ಮರಿಗಳು ಪತ್ತೆ ಆಗಿವೆ. ಭಾರತದಲ್ಲಿ ಈ ಅಪರೂಪದ ಪ್ರಾಣಿ ಪತ್ತೆ ಆಗಿರುವುದು ಭಾರೀ ಚರ್ಚೆಗೂ ಕಾರಣವಾಗಿದೆ. ಇದರ ಸಂಪೂರ್ಣ ವಿವರ ಈ ಲೇಖನದಲ್ಲಿದೆ.
ಒಡಿಶಾದಲ್ಲಿ ಅಪರೂಪದ ಹಾಗೂ ವಿಚಿತ್ರ ಪ್ರಾಣಿ ಆಗಿರುವ ಒರಾಂಗುಟಾನ್ ಮರಿಗಳು ಪತ್ತೆ ಆಗಿವೆ. ಐದು ಒರಾಂಗುಟಾನ್ ಮರಿಗಳು ಪತ್ತೆ ಆಗಿರುವುದು ಭಾರೀ ಕುತೂಹಲವನ್ನು ಸಹ ಮೂಡಿಸಿವೆ. ಒಡಿಶಾದ ಅರಣ್ಯ ಪ್ರದೇಶದಲ್ಲಿ 5 ಮರಿ ಒರಾಂಗುಟಾನ್‌ಗಳನ್ನು ರಕ್ಷಿಸಲಾಗಿದೆ. ಈ ಪ್ರಾಣಿಗಳು ಸ್ವಾಭಾವಿಕವಾಗಿ ವಾಸಿಸುವ ಪ್ರದೇಶದಿಂದ ಸಾವಿರಾರು ಕಿಲೋಮೀಟರ್ ದೂರದಲ್ಲಿ ಪತ್ತೆ ಆಗಿರುವುದು ಅಧಿಕಾರಿಗಳಲ್ಲಿ ಕುತೂಹಲ ಮೂಡಿಸಿದೆ. ಈ ಮರಿಗಳು ಭಾರತಕ್ಕೆ ಹೇಗೆ ಬಂದವು ಅಥವಾ ಇದೊಂದು ಕಳ್ಳ ಸಾಗಾಣಿಕೆಯೇ ಎನ್ನುವ ವಿಷಯ ಸೇರಿದಂತೆ ವಿವಿಧ ಆಯಾಮಗಳಿಂದ ತನಿಖೆ ನಡೆಸಲಾಗುತ್ತಿದೆ.

ಒರಾಂಗುಟಾನ್ ಪ್ರಾಣಿಗಳು ಭಾರತದ ಸ್ಥಳೀಯ ಪ್ರಾಣಿಗಳಲ್ಲ. ಇವು ಸಹಜವಾಗಿ ಆಗ್ನೇಯ ಏಷ್ಯಾದ ಕೆಲವೇ ಪ್ರದೇಶಗಳಲ್ಲಿ ಮಾತ್ರ ಕಂಡುಬರುತ್ತವೆ. ಬಿಬಿಸಿ ವರದಿ ಪ್ರಕಾರ, ಬಾಲಸೋರ್ ಜಿಲ್ಲೆಯ ಉದಯಪುರ-ತಲಸಾರಿ ಪ್ರದೇಶದ ಕ್ಯಾಸುರಿನಾ ತೋಟವೊಂದರಲ್ಲಿ ಈ ಐದು ಮರಿಗಳು ಪತ್ತೆಯಾಗಿವೆ. ಈ ಪ್ರಾಣಿಗಳನ್ನು ಅಕ್ರಮವಾಗಿ ಅಥವಾ ಕಳ್ಳ ಸಾಗಾಣಿಕೆಯ ಮೂಲಕ ಭಾರತಕ್ಕೆ ತಂದಿರುವ ಸಾಧ್ಯತೆ ಇದೆ ಎಂದು ವನ್ಯಜೀವಿ ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಪ್ರಾಣಿಗಳು ಭಾರತಕ್ಕೆ ಹೇಗೆ ಬಂದವು ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರಿದಿದೆ.
ಒರಾಂಗುಟಾನ್ ಪ್ರಾಣಿಗಳು ನೈಸರ್ಗಿಕವಾಗಿ ವಾಸಿಸುವ ಏಕೈಕ ಸ್ಥಳದಿಂದ ಸಾವಿರಾರು ಕಿಲೋಮೀಟರ್ ದೂರದಲ್ಲಿರುವ ಅರಣ್ಯದಿಂದ ಐದು ಮರಿಗಳನ್ನು ರಕ್ಷಿಸಲಾಗಿದೆ. ಈ ಯುವ ಮಂಗಗಳು ಭಾರತವನ್ನು ಹೇಗೆ ತಲುಪಿದವು ಎಂಬುದನ್ನು ಅಧಿಕಾರಿಗಳು ತನಿಖೆ ನಡೆಯುತ್ತಿದೆ. ಈ ಐದು ಮರಿಗಳನ್ನು ಒಡಿಶಾದ ಬಾಲಸೋರ್ ಜಿಲ್ಲೆಯ ಉದಯಪುರ - ತಲ್ಸಾರಿ ಪ್ರದೇಶದ ಕ್ಯಾಸುವರಿನಾ ತೋಟದಲ್ಲಿ ಪತ್ತೆ ಮಾಡಲಾಗಿದೆ.
ರಕ್ಷಿಸಲಾಗಿರುವ ಒರಾಂಗುಟಾನ್ ಮರಿಗಳನ್ನು ಭುವನೇಶ್ವರದ ನಂದಂಕಣನ್ ಪ್ರಾಣಿಶಾಸ್ತ್ರ ಉದ್ಯಾನವನಕ್ಕೆ ಸ್ಥಳಾಂತರಿಸಲಾಗಿದೆ. ಈ ಪ್ರಾಣಿಗಳನ್ನು ಇಲ್ಲಿ ಕ್ವಾರಂಟೈನ್‌ನಲ್ಲಿ ಇರಿಸಲಾಗಿದ್ದು, ಪಶುವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗುತ್ತಿದೆ ಎಂದು ಹೇಳಲಾಗಿದೆ. ಪ್ರತಿ ಒರಾಂಗುಟಾನ್ ಪ್ರಾಣಿಗಳು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಸುಮಾರು 20 ಲಕ್ಷ ರೂ.ದಿಂದ 25 ಲಕ್ಷ ರೂ. ಬೆಲೆ ಇದೆ ಎಂದು ಒಡಿಶಾದ ಅರಣ್ಯ ಮತ್ತು ಪರಿಸರ ಸಚಿವ ಗಣೇಶ್ ರಾಮ್ ಸಿಂಗ್‌ಖುಂಟಿಯಾ ಅವರು ಹೇಳಿದ್ದಾರೆ. ಇದು ಪ್ರಾಣಿಗಳು ಅಕ್ರಮ ವನ್ಯಜೀವಿ ಕಳ್ಳಸಾಗಣೆಯ ಭಾಗವಾಗಿರಬಹುದು ಎನ್ನುವ ಅನುಮಾನ ಹೆಚ್ಚಾಗಿದೆ.
Orangutan: ಒರಾಂಗುಟಾನ್ ಪ್ರಾಣಿ ಯಾವ ಪ್ರಬೇಧ ?
ಒರಾಂಗುಟಾನ್ ಪ್ರಾಣಿಗಳನ್ನು ಕೆಲವೊಮ್ಮೆ ಸಾಂದರ್ಭಿಕವಾಗಿ ಮಂಗಗಳು ಎಂದೂ ಕರೆಯಲಾಗುತ್ತದೆ. ಒರಾಂಗುಟಾನ್‌ಗಳನ್ನು ದೊಡ್ಡ ಮಂಗಗಳು, ಗೊರಿಲ್ಲಾಗಳು, ಚಿಂಪಾಂಜಿಗಳು ಹಾಗೂ ಬೊನೊಬೊಗಳು ಮಂಗಗಳ ಕುಟುಂಬಕ್ಕೆ ಸೇರಿವೆ. ಆದರೆ, ಅವು ಮಂಗಗಳಲ್ಲ ಏಕೆಂದರೆ, ಇತರ ಅಂಗರಚನಾ ವ್ಯತ್ಯಾಸಗಳ ಜೊತೆಗೆ, ದೊಡ್ಡ ಮಂಗಗಳಂತೆ ಇವಕ್ಕೆ ಬಾಲವಿರುವುದಿಲ್ಲ.


Click it and Unblock the Notifications
