Oracle Layoffs: ಬೆಳಗ್ಗೆ 6ಕ್ಕೆ ಲೇಆಫ್ ಮೇಲ್ ಕಳಿಸಿದ ಒರಾಕಲ್, ಮುಂದಿನ ಸರದಿ ಭಾರತದ ಡೆವಲಪ್ಮೆಂಟ್ ಸೆಂಟರ್ ಉದ್ಯೋಗಿಗಳದ್ದಾ?

ಪ್ರಮುಖ ಟೆಕ್ ದೈತ್ಯ ಒರಾಕಲ್ ತನ್ನ ಉದ್ಯೋಗಿಗಳಿಗೆ ಮತ್ತೊಮ್ಮೆ ಶಾಕ್ ನೀಡಿದೆ. ಸೆಪ್ಟೆಂಬರ್ 14ರಂದು ಕಂಪನಿಯು ಮತ್ತೆ ಉದ್ಯೋಗ ಕಡಿತ ಅಂದ್ರೆ ಲೇಆಫ್‌ ಆರಂಭಿಸಿದ್ದು, ಕಳೆದ ಮಾರ್ಚ್ ತಿಂಗಳಿನಲ್ಲಿ ನಡೆದ ಲೇಆಫ್ ಮಾದರಿಯಲ್ಲೇ ಈ ಬಾರಿಯೂ ಉದ್ಯೋಗಿಗಳನ್ನಾ ಮನೆಗೆ ಕಳುಹಿಸಲಾಗಿದೆ.

ಅಮೆರಿಕದಲ್ಲಿರುವ ಉದ್ಯೋಗಿಗಳಿಗೆ ಬೆಳಗಿನ ಜಾವ 4 ಗಂಟೆಗೆ ಸಿಸ್ಟಮ್ ಲಾಗಿನ್ ಸ್ಥಗಿತಗೊಂಡಿದೆ. 5 ಗಂಟೆ ಸುಮಾರಿಗೆ ಸ್ಲಾಕ್ ಸಂಪರ್ಕ ಕಡಿತಗೊಂಡಿದ್ದು, ಕಚೇರಿ ಗೇಟ್‌ಗಳಲ್ಲಿ ಐಡಿ ಕಾರ್ಡ್‌ಗಳು ಸಹ ಕೆಲಸ ಮಾಡಿಲ್ಲ. ಬಳಿಕ ಸರಿಯಾಗಿ ಬೆಳಿಗ್ಗೆ 6 ಗಂಟೆಗೆ ಒರಾಕಲ್ ಲೀಡರ್‌ಶಿಪ್ ಹೆಸರಿನಿಂದ "ನಿಮ್ಮ ಹುದ್ದೆಗೆ ಸಂಬಂಧಿಸಿದಂತೆ ಕೆಲವು ಸುದ್ದಿಗಳನ್ನ ಹಂಚಿಕೊಳ್ಳುತ್ತಿದ್ದೇವೆ" ಎಂಬ ಇಮೇಲ್ ಬಂದಿದೆ. ಅಂದೇ ಅವರ ಕೊನೆಯ ಕೆಲಸದ ದಿನ ಎಂದು ಘೋಷಿಸಿ ಕಂಪನಿ ಆಘಾತ ನೀಡಿದೆ.

Oracle Layoffs 2026 Employees Wake Up To 6 AM Job Cut Emails India Development Centre Is Next

ಉತ್ತಮ ಕಾರ್ಯಕ್ಷಮತೆ ಇದ್ದರೂ ಕೆಲಸಕ್ಕೆ ಕುತ್ತು

ಈ ಬಾರಿಯ ಒರಾಕಲ್ ಉದ್ಯೋಗ ಕಡಿತ ಪ್ರಕ್ರಿಯೆಯಲ್ಲಿ ಉತ್ತಮ ಕಾರ್ಯಕ್ಷಮತೆ ತೋರಿದ ಉದ್ಯೋಗಿಗಳನ್ನ ಸಹ ಕೆಲಸದಿಂದ ತೆಗೆದುಹಾಕಲಾಗಿದೆ. ರೆಡ್ಡಿಟ್‌ನಲ್ಲಿ ಸಾಮಾಜಿಕ ಜಾಲತಾಣದಲ್ಲಿ ನೌಕರರು ಹಂಚಿಕೊಂಡಿರುವ ಮಾಹಿತಿಯ ಪ್ರಕಾರ, ಸತತವಾಗಿ 4 ಮತ್ತು 5 ರೇಟಿಂಗ್ ಪಡೆದವರು ಹಾಗೂ 24 ವರ್ಷಗಳಿಂದ ಕಂಪನಿಯಲ್ಲಿ ಸೇವೆ ಸಲ್ಲಿಸುತ್ತಿದ್ದ ಕ್ಯೂಎ ಇಂಜಿನಿಯರ್ ಸೇರಿದಂತೆ ಅನೇಕ ಹಿರಿಯ ಉದ್ಯೋಗಿಗಳಿಗೂ ಬೆಳಿಗ್ಗೆ 6 ಗಂಟೆಯ ಲೇಆಫ್ ಇಮೇಲ್ ಬಂದಿದೆ.

ಕೇವಲ ಬೆಳಗಿನ ಅವಧಿಯಲ್ಲಿಯೇ ಸ್ಲಾಕ್ ಖಾತೆಯಲ್ಲಿ 3,000 ದಿಂದ 4,000ರಷ್ಟು ಉದ್ಯೋಗಿಗಳ ಸಂಖ್ಯೆ ಕಡಿಮೆಯಾಗಿದೆ. OCI ಭದ್ರತೆ, ಎಚ್‌ಆರ್ ತಂತ್ರಜ್ಞಾನ, ನೆಟ್‌ಸೂಟ್ ಸೇಲ್ಸ್ ಸೇರಿದಂತೆ ಹಲವು ವಿಭಾಗಗಳಲ್ಲಿ ಉದ್ಯೋಗ ಕಡಿತ ನಡೆದಿದೆ. ಕೆಲಸ ಕಳೆದುಕೊಂಡ ಅನೇಕರಿಗೆ ತಕ್ಷಣವೇ ಪರಿಹಾರದ ಮಾಹಿತಿಯೂ ಲಭ್ಯವಾಗಿರಲಿಲ್ಲ.

ಭಾರತದ ಒರಾಕಲ್ ಡೆವಲಪ್ಮೆಂಟ್ ಸೆಂಟರ್ ಮೇಲೆ ತೂಗುಗತ್ತಿ

ಅಮೆರಿಕದಲ್ಲಿ ಉದ್ಯೋಗ ಕಡಿತದ ಪ್ರಕ್ರಿಯೆ ಕೆಲವೇ ಗಂಟೆಗಳಲ್ಲಿ ಮುಕ್ತಾಯಗೊಂಡಿದ್ದು, ಮುಂದಿನ ಸರದಿ ಭಾರತದ್ದಾಗಿದೆ ಎಂಬ ಆತಂಕ ಶುರುವಾಗಿದೆ. ಮಾರ್ಚ್‌ನಲ್ಲಿ ನಡೆದಂತೆಯೇ ಭಾರತದಲ್ಲಿನ ಒರಾಕಲ್ ಡೆವಲಪ್ಮೆಂಟ್ ಸೆಂಟರ್‌ನಲ್ಲಿ ಶೀಘ್ರದಲ್ಲೇ ಲೇಆಫ್ ನಡೆಯುವ ನಿರೀಕ್ಷೆಯಿದೆ.

ಅಂದಾಜಿನ ಪ್ರಕಾರ ಇಲ್ಲಿ 3,000 ದಿಂದ 4,000 ಉದ್ಯೋಗಿಗಳನ್ನ ವಜಾಗೊಳಿಸುವ ಸಾಧ್ಯತೆಯಿದ್ದು, ಕಸ್ಟಮರ್ ಸಪೋರ್ಟ್ ವಿಭಾಗದಲ್ಲಿ ಶೇ.30 ರಷ್ಟು ಉದ್ಯೋಗ ಕಡಿತವಾಗುವ ನಿರೀಕ್ಷೆಯಿದೆ. ಭಾರತದ ನಂತರ ಯುರೋಪ್, ಮಧ್ಯಪ್ರಾಚ್ಯ ಮತ್ತು ಆಫ್ರಿಕಾ ಪ್ರದೇಶಗಳಲ್ಲಿ ಲೇಆಫ್ ನಡೆಯಲಿದೆ ಎನ್ನಲಾಗಿದೆ.

ಭಾರತದಲ್ಲಿ ನೌಕರರಿಗೆ N+2 ಸೂತ್ರದ ಆಧಾರದ ಮೇಲೆ ಪರಿಹಾರ ನೀಡುವ ಸಾಧ್ಯತೆಯಿದೆ.

ಎಐ ಅಳವಡಿಕೆ

ಕಂಪನಿಯು ತನ್ನ ವಿವಿಧ ವಿಭಾಗಗಳಲ್ಲಿ ಕೃತಕ ಬುದ್ಧಿಮತ್ತೆಯನ್ನ ಅಳವಡಿಸಿಕೊಳ್ಳುತ್ತಿರುವುದು ಈ ಬದಲಾವಣೆಗಳಿಗೆ ಪ್ರಮುಖ ಕಾರಣವಾಗಿದೆ. ಒರಾಕಲ್‌ನ ಮರುಸಂಘಟನಾ ವೆಚ್ಚವು ಸರಿಸುಮಾರು 2.8 ಶತಕೋಟಿ ಡಾಲರ್‌ಗೆ ಏರಿಕೆಯಾಗಿದೆ. ಡೇಟಾ ಸೆಂಟರ್ ಮೇಲಿನ ಹೂಡಿಕೆಯೂ ಹೆಚ್ಚಾಗಿದ್ದು, ಮೊದಲ ತ್ರೈಮಾಸಿಕದ ಬಂಡವಾಳ ವೆಚ್ಚ 28.5 ಶತಕೋಟಿ ಡಾಲರ್‌ಗೆ ತಲುಪಿದೆ. ಈ ವರ್ಷ ಮೇ 31 ರ ವೇಳೆಗೆ ಕಂಪನಿಯು ಈಗಾಗಲೇ 21,000 ಉದ್ಯೋಗಿಗಳನ್ನ ಕಡಿತಗೊಳಿಸಿತ್ತು. ಇದರ ನಡುವೆಯೂ ಈ ವರ್ಷ ಒರಾಕಲ್ ಷೇರುಗಳು ಶೇ.23 ರಷ್ಟು ಕುಸಿತ ಕಂಡಿವೆ.

ಒರಾಕಲ್ ಲೇಆಫ್ ಇಮೇಲ್‌ನಲ್ಲಿ ಏನಿದೆ?

ತಮ್ಮ ನೌಕರರಿಗೆ ಕಳುಹಿಸಿರುವ ಇಮೇಲ್‌ನಲ್ಲಿ ಕಂಪನಿಯು ಹೀಗೆ ಬರೆದಿದೆ, "ಪ್ರಸ್ತುತ ವ್ಯವಹಾರದ ಅಗತ್ಯಗಳನ್ನ ಗಮನದಲ್ಲಿಟ್ಟುಕೊಂಡು, ಸಾಂಸ್ಥಿಕ ಬದಲಾವಣೆಯ ಭಾಗವಾಗಿ ನಿಮ್ಮ ಹುದ್ದೆಯನ್ನ ರದ್ದುಗೊಳಿಸುವ ನಿರ್ಧಾರ ಮಾಡಿದ್ದೇವೆ. ಹೀಗಾಗಿ, ಇಂದು ನಿಮ್ಮ ಕೊನೆಯ ಕೆಲಸದ ದಿನವಾಗಿದೆ. ಕಂಪನಿಗೆ ನೀವು ನೀಡಿದ ಕೊಡುಗೆ ಮತ್ತು ನಿಮ್ಮ ಶ್ರಮಕ್ಕೆ ನಾವು ಕೃತಜ್ಞರಾಗಿದ್ದೇವೆ. ಟರ್ಮಿನೇಷನ್ ಪೇಪರ್‌ಗಳಿಗೆ ಸಹಿ ಮಾಡಿದ ನಂತರ ನಿಮಗೆ ಪರಿಹಾರದ ಪ್ಯಾಕೇಜ್ ದೊರೆಯಲಿದೆ. ನಿಮ್ಮ ಸಿಸ್ಟಮ್, ಇಮೇಲ್ ಮತ್ತು ಫೈಲ್‌ಗಳ ಆಕ್ಸೆಸ್ ಅನ್ನು ಶೀಘ್ರದಲ್ಲೇ ಸ್ಥಗಿತಗೊಳಿಸಲಾಗುವುದು. ಕಂಪನಿಯ ಯಾವುದೇ ಗೌಪ್ಯ ಮಾಹಿತಿಯನ್ನು ಡೌನ್‌ಲೋಡ್ ಮಾಡುವಂತಿಲ್ಲ." - ಒರಾಕಲ್ ಲೀಡರ್‌ಶಿಪ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+