ಆಪರೇಷನ್‌ ಸಿಂಧೂರ್ ಬಗ್ಗೆ ಹಗುರವಾಗಿ ಪ್ರತಿಕ್ರಿಯಿಸಿದ್ದ ನಟಿ ಸಂಜನಾ ಗಲ್ರಾನಿ ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿ

Sanjjana Galrani: ಪಹಲ್ಗಾಮ್‌ನಲ್ಲಿ ಉಗ್ರರು ದಾಳಿ ನಡೆಸಿ ಅಮಾಯಕ ಜನರನ್ನು ಬಲಿ ಪಡೆದುಕೊಂಡಿದ್ದರು. ಇದಕ್ಕೆ ಪ್ರತ್ಯುತ್ತರವಾಗಿ ಭಾರತೀಯ ಸೇನೆಯು 'ಆಪರೇಷನ್‌ ಸಿಂಧೂರ್' ಕಾರ್ಯಾಚರಣೆ ಮೂಲಕ ಪಾಕ್‌ನಲ್ಲಿನ ಉಗ್ರರ 9 ನೆಲೆಗಳನ್ನು ಧ್ವಂಸ ಮಾಡಿತ್ತು. ಈ ಕಾರ್ಯಾಚರಣೆ ಬಗ್ಗೆ ಇಡೀ ದೇಶ ಅಷ್ಟೇ ಅಲ್ಲದೆ, ವಿದೇಶಗಳಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅಂತಹದ್ದರಲ್ಲಿ ಈ ಬಗ್ಗೆ ಹಗುರವಾಗಿ ಪ್ರತಿಕ್ರಿಯಿಸಿ ನಟಿ ಸಂಜನಾ ಗಲ್ರಾನಿ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ್ದ ನಟಿ ಸಂಜನಾ ಗಲ್ರಾನಿ ಯುದ್ಧವು ಯಾವುದೇ ದೇಶದ ಖ್ಯಾತಿಗೆ ಒಳ್ಳೆಯದಲ್ಲ ಎಂದು ತಮ್ಮ ಇನ್ಸ್ಟಾಗ್ರಾಂ ಪೋಸ್ಟ್ಸ್‌ನಲ್ಲಿ ಹಂಚಿಕೊಂಡಿದ್ದು, ಇದೀಗ ಇದಕ್ಕೆ ಭಾರೀ ಆಕ್ರೋಶಗಳು ಭುಗಿಲೆದ್ದಿವೆ. ಯಾವ ಮಟ್ಟಿಗೆ ಅಂದರೆ, ಗಾದೆ ಮಾತು ನೆನಪಿಸುವ ಹಾಗೆ.

Operation Sindoor Netizens outraged against Actress Sanjjana Galrani s Insta poster

'ಆಪರೇಷನ್ ಸಿಂಧೂರ' ಕಾರ್ಯಾಚರಣೆ ಬಗ್ಗೆ ನಟಿ ಸಂಜನಾ ಗಲ್ರಾನ ಇನ್‌ಸ್ಟಾ ಪೋಸ್ಟ್‌ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಪ್ರತಿಯೊಂದು ಕ್ರಿಯೆಗೂ ಸಮನಾದ ಹಾಗೂ ವಿರುದ್ಧವಾದ ಪ್ರತಿಕ್ರಿಯೆ ಇರುತ್ತದೆ. ನಾನು ದೇಶಪ್ರೇಮಿಯೇ, ಅದೇ ಸಮಯದಲ್ಲಿ ಸಂಪೂರ್ಣ ಶಾಂತಿ ಪ್ರಿಯಳೂ ಹೌದು. ಸಣ್ಣ ಅಥವಾ ದೊಡ್ಡ ಯುದ್ಧದ ಯಾವುದೇ ಸೂಚನೆಯು ದೇಶದ ಖ್ಯಾತಿಗೆ ಒಳ್ಳೆಯದಲ್ಲ ಅದು ಭಾರತದ ಆರ್ಥಿಕತೆ, ಅಂತಾರಾಷ್ಟ್ರೀಯ ಪ್ರವಾಸಿಗರ ಮೇಲೆ ಪರಿಣಾಮ ಬೀರಬಹುದು ಎಂದು ಬರೆದುಕೊಂಡಿದ್ದರು.

ಅಲ್ಲದೆ, ಯುದ್ಧದದಿಂದ ದೇಶಕ್ಕೆ ಆಗುವ ಹಾನಿ ಆಗುವುದೇ ಹೆಚ್ಚು. ಅದು ಊಹೆಗೂ ಮೀರಿದ್ದಾಗಿದೆ. ತಕ್ಷಣವೇ ಎಲ್ಲವೂ ಶಾಂತಿಯೊಂದಿಗೆ ಕೊನೆಗೊಳ್ಳಲಿ ಎಂದು ಕೇಳಿಕೊಳ್ಳುತ್ತೇನೆ. ಜೈ ಹಿಂದ್ ಎಂದು ಸಂಜನಾ ಪೋಸ್ಟ್ ಮಾಡಿದ್ದಾರೆ. ಇನ್ನು ಸಂಜಾ ಗಲ್ರಾನಿ ಈ ಪೋಸ್ಟ್‌ಗೆ ನೆಟ್ಟಿಗರು ಭಾರೀ ಆಕ್ರೋಶ ಹೊರಹಾಕಿದ್ದಾರೆ. ಅದರಲ್ಲೂ, 🇳‌🇪‌🇴‌🇳‌🇹‌🇪‌🇦‌🇱 ಎಂಬ ಇನ್ಸ್ಟಾ ಪೋಸ್ಟ್‌ನಲ್ಲಿ ಸಂಜನಾ ಹೇಳಿಕೆಗೆ ಗಾದೆ ಮಾತೊಂದನ್ನು ಹೇಳುವ ಮೂಲಕ ಪೋಸ್ಟ್‌ವೊಂದನ್ನು ಹಂಚಿಕೊಳ್ಳಲಾಗಿದ್ದು, ಇದು ಭಾರೀ ವೈಲ್‌ ಆಗುತ್ತಿದೆ.

Take a Poll

"ಇಷ್ಟೇ ಇವರ ಯೋಗ್ಯತೆ. "ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ" ಅಂತಾ ಹಳೆ ಕಾಲದ ಗಾದೆ ಮಾತು ಆದರೆ, ಇವಳು ಧರ್ಮದಿಂದಲೇ ಹೊರಕ್ಕೆ ಹೋಗಿರುವಾಗ, ಸಿಂಧೂರದ ಬೆಲೆ ಗೊತ್ತಿರೋಲ್ಲ ಎಂದು ಬರೆದಿರುವ ಪೋಸ್ಟರ್ ಅನ್ನು ಶೇರ್ ಮಾಡಲಾಗಿದೆ. ಇದು ಭಾರೀ ವೈರಲ್‌ ಆಗುತ್ತಿದೆ".

ಏಪ್ರಿಲ್‌ 22ರಂದು ಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಗೆ 26 ಭಾರತೀಯ ಪ್ರವಾಸಿಗರು ಬಲಿಯಾಗಿದ್ದರು. ಅದಕ್ಕೆ ಪ್ರತೀಕಾರವಾಗಿ ಭಾರತೀಯ ಸೇನೆ ಪಾಕ್ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಉಗ್ರರ 9 ಅಡಗುತಾಣಗಳ ಮೇಲೆ ದಾಳಿ ನಡೆಸುವ ಪ್ರತೀಕಾರ ತೀರಿಸಿಕೊಂಡಿದೆ. 'ಆಪರೇಷನ್ ಸಿಂಧೂರ' ಕಾರ್ಯಾಚರಣೆ ಮೂಲಕ 100 ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+