ಇವತ್ತು ಸಹ Operation Sindoor ಟ್ರೆಂಡಿಂಗ್: ಸುಳ್ಳು ಹಂಚದಂತೆ ಮನವಿ..

India Pakistan War: ಉಗ್ರರಿಗೆ ಸ್ವರ್ಗವಾಗಿದ್ದ ಪಾಕಿಸ್ತಾನವನ್ನು ಅಕ್ಷರಶಃ ನರಕವಾಗಿಸಿದ ಭಾರತೀಯ ಸೇನೆಯು ಪಹಲ್ಗಾಮ್ ದಾಳಿಗೆ ಪ್ರತಿಕಾರ ತೀರಿಸಿಕೊಂಡಿದೆ. ಭಾರತೀಯ ಪ್ರವಾಸಿಗರ ಸಾವಿಗೆ ನ್ಯಾಯ ದೊರಕಿಸಿಕೊಡುವ ಮೂಲಕ ಸೇನೆ, ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರಕ್ಕೆ ಶ್ಲಾಘನೆ ವ್ಯಕ್ತವಾಗಿದೆ. ಈ ಕಾರ್ಯಾಚರಣೆಗೆ 'Operation Sindoor' (ಆಪರೇಷನ್ ಸಿಂದೂರ) ಎಂದು ಹೆಸರಿಟ್ಟಿದೆ. ಈ ಹೆಸರಿನ ಹ್ಯಾಷ್‌ಟಾಗ್ ಸೇರಿ ಹಲವು ಹ್ಯಾಷ್‌ಟ್ಯಾಗ್‌ಗಳು ಕಳೆದೊಂದು ದಿನದಿಂದ ಟ್ರೆಂಡಿಂಗ್ ನಲ್ಲಿವೆ.

ಭಾರತವು ಪಾಕಿಸ್ತಾನದ ಮೇಲೆ ಮಾಡಿದ ದಾಳಿಗೆ ಸಂಬಂಧಿಸಿದಂತೆ ಇಡೀ ಭಾರತೀಯರೆಲ್ಲುರು ಸೇನಾ ಕಾರ್ಯವನ್ನು ಶ್ಲಾಘಿಸಿದ್ದಾರೆ. ಜೈ ಹಿಂದ್ ಎಂದು ಪೋಸ್ಟ್ ಹಾಕುವುದು, ಸಿಹಿ ಹಂಚಿ ಸಂಭ್ರಮಿಸಿ, ಪಟಾಕಿ ಸಿಡಿಸಿ ಕೇಂದ್ರದ ನಿರ್ಧಾರಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ.

Operation Sindoor Indian Army and India-Pakistan War Today Also Trending on Social Media

ಬುಧವಾರ ನಸುಕಿನ ಜಾವ ನಡೆದ ಪಾಕ್ 09 ಅಡಗು ತಾಣಗಳ ಮೇಲಿನ ದಾಳಿ ತಿಳಿಯುತ್ತಿದ್ದಂತೆ ಅದರ ಕುರಿತು ಫೋಟೋ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದವು. ನೋಡ ನೋಡುತ್ತಿದ್ದಂತೆ #OperationSindoor, #indianarmy #IndiaPakistanwar #JaiHind ಹ್ಯಾಷ್ ಟ್ಯಾಗ್ ಟ್ರೆಂಡಿಂಗ್‌ನಲ್ಲಿವೆ. ಇವತ್ತು ಸಹ #OperationSindoor ಟ್ರೆಡಿಂಗ್‌ನಲ್ಲಿದೆ. ಈ ಮೂಲಕ ಭಾರತೀಯ ಸೇನೆಗೆ ನೆಟ್ಟಿಗರು ಸಹ ಬೆಂಬಲ ವ್ಯಕ್ತಪಡಿಸಿದ್ದಾರೆ. ಪಕಿಸ್ತಾನಕ್ಕೆ ತಕ್ಕ ಬುದ್ಧಿ ಕಲಿಸಿದ ನಡೆಯನ್ನು ಪ್ರಶಂಸಿಸಲಾಗುತ್ತಿದೆ.

ಸಾಮಾಜಿಕ ಜಾಲತಾಣಗಳಾದ ಫೇಸ್ ಬುಕ್, ಟ್ವಿಟ್ಟರ್ (ಎಕ್ಸ್), ಇನ್ಸ್ಟಾಗ್ರಾಮ್ ಸೇರಿದಂತೆ ಅನೇಕ ವೇದಿಕೆಗಳಲ್ಲಿ ಈ ಹ್ಯಾಷ್‌ಟ್ಯಾಗ್‌ಗಳು ಟ್ರೆಂಡಿಂಗ್‌ನಲ್ಲಿದ್ದವು. ಭಾರೀ ಸಂಚಲನ ಸಹ ಮೂಡಿಸಿದವು. ಅವುಗಳ ಅಡಿಯಲ್ಲಿಯೇ ಮಿಲಿಟರಿ ಕಾರ್ಯಾಚರಣೆ ಫೋಟೋ, ವಿಡಿಯೋ ಹಂಚಿಕೊಂಡಿದ್ದಾರೆ. ಪಾಪಿಸ್ತಾನ ವಿರುದ್ಧ 'ಭಾರತ ತನ್ನ ರಕ್ಷಣೆಗೆ ಸಧಾ ಸಿದ್ಧ'. ಭಾರತ ಶಾಂತಿ ಗೂ ಸೈ, ಯುದ್ಧಕ್ಕೂ ಜೈ ಎಂದು ಕೊಂಡಾಡಿದ್ದಾರೆ.

'ಸಿಂದೂರ ನಮ್ಮ ಹೆಮ್ಮ ಅದನ್ನು ಅಳಿಸಲು ಸಾಧ್ಯವಿಲ್ಲ' ಎಂದಿದ್ದಾರೆ. ಭಾರತದ ಕುರಿತ, ಭಾರತದ ಸೇನಾ ಪರಾಕ್ರಮ ಕುರಿತು ಭಾನಾತ್ಮಕ ಪೋಸ್ಟ್ ಹಂಚಿಕೊಂಡಿದ್ದಾರೆ. ಅಲ್ಲದೇ ಇಂತಹ ಯದ್ಧ ಸಂದರ್ಭದಲ್ಲಿ ಯಾರು ಸಹ ಸುಳ್ಳು ಸುದ್ದಿಗಳನ್ನು, ಫೋಟೋ ವಿಡಿಯೋಗಳನ್ನು ಹಂಚಿಕೊಳ್ಳದಂತೆ ಮನವಿ ಮಾಡಿದ್ದಾರೆ.

ಏಕೆಂದರೆ ಯಾವುದೇ ಒಂದು ಬೆಳವಣಿಗೆ ಆದಾಗಲೂ ಅಧಿಕೃತ ಮಾಹಿತಿ ಬಂದರೂ ಬರದಿದ್ದರೂ ಸಹ ಸುಳ್ಳು ಸಂದೇಶಗಳು, ಫೋಟೋಗಳು ಹರಿ ಬಿಡಲಾಗುತ್ತದೆ. ಇದರಿಂದ ಸಾರ್ವಜನಿಕರಲ್ಲಿ ಗೊಂದಲ ಉಂಟಾಗುತ್ತದೆ. ಮಾಹಿತಿ ಅಸ್ಪಷ್ಟವಾಗುತ್ತದೆ. ಆದ್ದರಿಂದ ಕೆಲವರು ಭಾರತ ಮತ್ತು ಪಾಕಿಸ್ತಾನ ಕುರಿತು ಸುಳ್ಳು ಹರಡದಂತೆ ಕೋರಿದ್ದಾರೆ.

ಇಂದು ಸಹ 'ಆಪರೇಷನ್ ಸಿಂದೂರ' ಟ್ರೆಂಡಿಂಗ್

ಜೈಹಿಂದ್ ಟ್ರೆಂಡಿಂಗ್ ನಲ್ಲಿತ್ತು. ಭಾರತ್ ಮಾತಾಕಿ ಜೈ, ವಂದೇ ಮಾತರಂ, ಹಿಂದೂಸ್ತಾನ, ಭಾರತದ ಬಾವುಟ ಸಾಮಾಜಿಕ ಜಾಲತಾಣಗಳಲ್ಲಿ ರಾರಾಜಿಸಿದವು. ಇಂದು ಸಹ 'ಆಪರೇಷನ್ ಸಿಂದೂರ', ಇಂಡಿಯನ್ ಆರ್ಮಿ ಟ್ರೆಂಡಿಂಗ್‌ನಲ್ಲಿವೆ. ಈ ಮೂಲಕ ಕೋಟ್ಯಾಂತರ ಭಾರತೀಯರ ಚಿತ್ತ ಕೇಂದ್ರ ಸರ್ಕಾರದ ಮೇಲಿದೆ. ಕೇಂದ್ರ ಸರ್ಕಾರ ಹಾಗೂ ಮಿಲಿಟರಿ ಯಾವೆ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದೆಲ್ಲ ಆಲೋಚಿಸುತ್ತಿದ್ದಾರೆ.

ಮೋದಿಗೆ ಹೇಳಿದ್ದೇನೆ ಫೋಟೋ ವೈರಲ್

ಪಹಲ್ಗಾಮ್ ದಾಳಿ ವೇಳೆ ಪತಿ ಕೊಂದು ಪತ್ನಿ ಕೊಲ್ಲದೇ ಬಿಟ್ಟಿದ್ದ ಉಗ್ರರು ಇದನ್ನು ನೀನ್ನ ಮೋದಿಗೆ ಹೇಳು ಎಂದು ಹಿಂಸೆ ಮೆರೆದಿದ್ದ. ಆತನಿಗೆ ಈಗ ಪ್ರಧಾನಿ ಮೋದಿ ಬುದ್ಧಿ ಕಲಿಸಿದ್ದಾರೆ ಎನ್ನುವ ಎಡಿಟೆಡ್ ಫೋಟೋ ಭಾರೀ ವೈರಲ್ ಆಗುತ್ತಿದೆ. ಹೆಚ್ಚು ಶೇರ್ ಆಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+