ಹೆಲ್ತ್ ಇನ್ಷ್ಯೂರೆನ್ಸ್ ಮಾಡಿಸುವವರೇ ಗಮನಿಸಿ, ಕೇಂದ್ರ ಸರ್ಕಾರ ಕೊಟ್ಟಿದೆ ಬಂಪರ್ ಆಫರ್!
ದೇಶದಲ್ಲಿ ಈಗ ಹೊಸ ಮನ್ವಂತರ ಶುರುವಾಗಿದ್ದು, ಜಿಎಸ್‌ಟಿ ವಿಚಾರದಲ್ಲಿ ದೊಡ್ಡ ಬದಲಾವಣೆ ಮಾಡುವ ಮೂಲಕ ಕೇಂದ್ರ ಸರ್ಕಾರ ದೀಪಾವಳಿ ಹಬ್ಬಕ್ಕೂ ಮೊದಲು ಭರ್ಜರಿ ಗಿಫ್ಟ್ ಕೊಟ್ಟಿದೆ. ಹೆಚ್ಚಿನ ತೆರಿಗೆ ಭಾರ ಹಿನ್ನೆಲೆ ದೇಶದ ಬಡ ವರ್ಗ & ಮಧ್ಯಮ ವರ್ಗದ ಜನರು ಪರದಾಡುವ ಪರಿಸ್ಥಿತಿ ಇತ್ತು. ಇದನ್ನೆಲ್ಲ ಗಮನಿಸಿ ಇದೀಗ ಜಿಎಸ್‌ಟಿ ಭಾರಿ ಪ್ರಮಾಣದಲ್ಲಿ ಇಳಿಕೆ ಮಾಡಲಾಗಿದೆ. ಅದರಲ್ಲೂ ಕೆಲವು ಅತಿ ಅವಶ್ಯಕ ವಸ್ತುಗಳ ಮೇಲೆ ಇದ್ದ ಜಿಎಸ್‌ಟಿ ಸಂಪೂರ್ಣವಾಗಿ ತೆಗೆದು ಹಾಕಲಾಗಿದೆ. ಈ ಪೈಕಿ ಆರೋಗ್ಯ ವಿಮೆ ಅಂದ್ರೆ ಹೆಲ್ತ್ ಇನ್ಷ್ಯೂರೆನ್ಸ್ ಮಾಡಿಸುವವರಿಗೆ ಭಾರಿ ಭರ್ಜರಿ ಗಿಫ್ಟ್ ಸಿಕ್ಕಂತೆ ಆಗಿದೆ.
ನಿನ್ನೆ ಜಿಎಸ್‌ಟಿ ಕೌನ್ಸಿಲ್ ಐತಿಹಾಸಿಕ ಸಭೆ ನಡೆಸಿ, ಮಹತ್ವದ ತೀರ್ಮಾನ ಕೈಗೊಂಡಿದೆ. ಆ ಪ್ರಕಾರವಾಗಿ ಆರೋಗ್ಯ ಮತ್ತು ಜೀವ ವಿಮೆ ಪ್ರೀಮಿಯಂ ಮೇಲೆ ಇರುವ ಶೇಕಡಾ 18 ರಷ್ಟು ಜಿಎಸ್‌ಟಿ ತೆರಿಗೆ ಈಗ ರದ್ದು ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ. ಈ ಮೂಲಕ ಲಕ್ಷಾಂತರ ಭಾರತೀಯರಿಗೆ ಹೆಲ್ತ್ ಪಾಲಿಸಿ ಸೇರಿದಂತೆ ಲೈಫ್ ಪಾಲಿಸಿ ಕೂಡ ಮಾಡಿಸಲು ಪ್ರಯೋಜನಕ್ಕೆ ಬರಲಿದೆ. ಹೆಚ್ಚಿನ ಪ್ರಮಾಣದಲ್ಲಿ ಜಿಎಸ್‌ಟಿ ಹೇರಿಕೆಯನ್ನ ಮಾಡಿದ್ದ ಕಾರಣಕ್ಕೆ ಹೆಲ್ತ್ ಇನ್ಷ್ಯೂರೆನ್ಸ್ ಮಾಡಿಸುವವರ ಪ್ರಮಾಣ ಕಡಿಮೆ ಆಗಿತ್ತು ಅನ್ನೋ ಆರೋಪ ಕೂಡ ಕೇಳಿ ಬಂದಿತ್ತು. ಇದೀಗ ಜಿಎಸ್‌ಟಿ ಕೌನ್ಸಿಲ್ ಐತಿಹಾಸಿಕ ತೀರ್ಮಾನದಲ್ಲಿ ಆರೋಗ್ಯ ವಿಮೆ ಮೇಲಿನ ಜಿಎಸ್‌ಟಿ ರದ್ದು ಮಾಡಿರುವುದು ಬಂಪರ್ ಗಿಫ್ಟ್ ಕೊಟ್ಟಂತೆ ಆಗಿದೆ.

ಆರೋಗ್ಯ ವಿಮೆ ಮಾಡಿಸಿರುವುದೇ ಕಡಿಮೆ!
ಹೆಲ್ತ್ ಇನ್ಷ್ಯೂರೆನ್ಸ್ ಅಥವಾ ಆರೋಗ್ಯ ವಿಮೆ ಮಾಡಿಸುವುದು ಎಷ್ಟು ಮುಖ್ಯ ಎಂದರೆ, ಸಾಕಷ್ಟು ಕಷ್ಟ ಎದುರಾದ ಸಮಯದಲ್ಲಿ ಇದೇ ವಿಮೆ ಜೀವ ಕಾಪಾಡುತ್ತದೆ. ದಿಢೀರ್ ಆರೋಗ್ಯದಲ್ಲಿ ಏರುಪೇರು ಅಥವಾ ಅಪಘಾತ ಸಂಭವಿಸಿದಾಗ ಹೆಲ್ತ್ ಇನ್ಷ್ಯೂರೆನ್ಸ್ ಹಣದ ಜೊತೆಗೆ ಜೀವ ಕೂಡ ಉಳಿಸುತ್ತದೆ.
ಆದರೆ ಆಘಾತ ಮೂಡಿಸುವ ವಿಚಾರ ಏನು ಅಂದ್ರೆ ಭಾರತದಲ್ಲಿ ಕೇವಲ ಶೇಕಡಾ 20 ಕ್ಕಿಂತ ಕಡಿಮೆ ಜನ ಖಾಸಗಿ ಆರೋಗ್ಯ ವಿಮೆ ಮಾಡಿಸಿದ್ದರು. ಹೀಗಾಗಿಯೇ ಇದೀಗ ಜಿಎಸ್‌ಟಿ ವಿನಾಯಿತಿ ಜನರನ್ನು ವಿಮೆ ಮಾಡಿಸಲು ಮತ್ತಷ್ಟು ಉತ್ತೇಜಿಸಲಿದೆ. ಇದೀಗ ದೊಡ್ಡ ಮಟ್ಟಿಗೆ ವಿನಾಯಿತಿ ಸಿಕ್ಕಿರುವ ಹಿನ್ನೆಲೆಯಲ್ಲಿ ಆರೋಗ್ಯ ವಿಮೆ ಮಾಡಿಸುವವರ ಸಂಖ್ಯೆ ಕೂಡ ಹೆಚ್ಚಾಗುವ ಬಗ್ಗೆ ನಿರೀಕ್ಸೆ ಇದೀಗ ಮೂಡಿದೆ.












Click it and Unblock the Notifications