ಬೇರೆ ಬ್ಯಾಂಕ್‌ ಎಟಿಎಂ ಬಳಕೆ ಎರಡಕ್ಕೆ ಇಳಿಕೆ!

ಮುಂಬೈ, ಆ.2: ಬೇರೆ ಬ್ಯಾಂಕ್‌ನ ಎಟಿಎಂನಿಂದ ಹಣವನ್ನು ಡ್ರಾ ಮಾಡುವ ಮಂದಿಗೆ ಕಹಿಸುದ್ದಿ. ಯಾವುದೇ ಶುಲ್ಕವಿಲ್ಲದೇ ಬೇರೆ ಬ್ಯಾಂಕ್‌ ಎಟಿಎಂನಿಂದ ತಿಂಗಳಿಗೆ ಹಣ ಡ್ರಾ ಮಾಡುವ ಮಿತಿಯನ್ನು ಆರ್‌‌‌ಬಿಐ ಇಳಿಕೆ ಮಾಡಿದೆ.

ಇಲ್ಲಿಯವರೆಗೆ ತಿಂಗಳಿಗೆ ಐದು ಬಾರಿ ಬೇರೆ ಬ್ಯಾಂಕಿನ ಎಟಿಎಂನಿಂದ ಹಣವನ್ನು ಡ್ರಾ ಮಾಡಲು ಅವಕಾಶವಿತ್ತು. ಆದರೆ ಹೊಸ ನಿಯಮದ ಪ್ರಕಾರ ಇನ್ನು ಮುಂದೆ ತಿಂಗಳಿಗೆ ಗರಿಷ್ಠ ಎರಡು ಬಾರಿ ಮಾತ್ರ ಹಣ ಡ್ರಾ ಮಾಡಬಹುದಾಗಿದೆ.

ಇನ್ನೂ ಈ ನಿಯಮ ಜಾರಿಗೆ ಬಂದಿಲ್ಲ. ಸದ್ಯದಲ್ಲೇ ಆರ್‌‌ಬಿಐ ಎಲ್ಲಾ ಬ್ಯಾಂಕ್‌ಗಳಿಗೆ ಈ ನಿಯಮ ಜಾರಿಗೊಳಿಸುವಂತೆ ನಿರ್ದೇಶನ ನೀಡುವ ಸಾಧ್ಯತೆಯಿದೆ.[ಬೇರೆ ಬ್ಯಾಂಕ್ ಎಟಿಎಂಗೆ ಹೋಗೋ ಮುನ್ನ ಓದಿ]

atm

ಮಿತಿಯನ್ನು ಇಳಿಕೆ ಮಾಡಿರುವ ಜೊತೆಗೆ ಬೇರೆ ಬ್ಯಾಂಕಿನ ಎಟಿಎಂಗಳಲ್ಲಿ ಹಣ ಡ್ರಾ ಮಾಡಿದ್ದಕ್ಕೆ ವಿಧಿಸಲಾಗುತ್ತಿದ್ದ ಶುಲ್ಕವು ಹೆಚ್ಚಾಗಲಿದೆ. ಈಗ ಐದರ ಮಿತಿಯನ್ನು ದಾಟಿದ ಬಳಿಕ ಹಣ ಡ್ರಾ ಮಾಡಿದರೆ ಗ್ರಾಹಕ ಹೆಚ್ಚುವರಿಯಾಗಿ 15 ರೂ ಶುಲ್ಕವನ್ನು ಪಾವತಿ ಮಾಡಬೇಕಾಗುತ್ತದೆ. ಈ ಶುಲ್ಕದ ಮೊತ್ತ ಮುಂದೆ 20 ರೂಪಾಯಿಗೆ ಏರಿಕೆಯಾಗುವ ಸಾಧ್ಯತೆಯಿದೆ.

ಕೆಲವು ಬ್ಯಾಂಕ್‌ಗಳ ಎಟಿಎಂಗಳಲ್ಲಿ ಬೇರೆ ಬ್ಯಾಂಕಿನ ಗ್ರಾಹಕರೇ ಹೆಚ್ಚು ಹಣವನ್ನು ಡ್ರಾ ಮಾಡುತ್ತಿದ್ದು ಆ ಬ್ಯಾಂಕ್‌ಗಳಿಗೆ ತಲೆನೋವಾಗಿ ಪರಿಣಮಿಸಿದೆ. ಈ ಬ್ಯಾಂಕ್‌ಗಳು ಈ ಕಾರಣ ನೀಡಿ ದೂರು ನೀಡಿದ ಹಿನ್ನಲೆಯಲ್ಲಿ ಆರ್‌ಬಿಐ ಈ ಕ್ರಮ ಕೈಗೊಂಡಿದೆ ಎಂದು ಹೇಳಲಾಗಿದೆ.

ಎಟಿಎಂ ಭದ್ರತೆಗೆ ಸಂಬಂಧಿಸಿದಂತೆ ಆರ್‌ಬಿಐ ಕೆಲವೊಂದು ಸುರಕ್ಷಾ ಮಾನದಂಡಗಳನ್ನು ಅಳವಡಿಸಿಕೊಳ್ಳಲು ಬ್ಯಾಂಕ್‌ಗಳಿಗೆ ಸೂಚನೆ ನೀಡಿದೆ. ಈ ಸೂಚನೆಗಳನ್ನು ಅಳವಡಿಸಿಕೊಳ್ಳಲು ಹೆಚ್ಚಿನ ಹಣ ಖರ್ಚಾಗಲಿದ್ದು ಹೆಚ್ಚು ಶುಲ್ಕ ವಿಧಿಸಲೇಬೇಕೆಂದು ಆರ್‌ಬಿಐ ಮುಂದೆ ಬ್ಯಾಂಕ್‌ಗಳು ವಾದ ಮಂಡಿಸಿವೆ.[ಎಟಿಎಂ ಕಳ್ಳತನ ತಡೆಯಲು ಹೊಸ ಮಾದರಿಯ ಯಂತ್ರ]

ಭಾರತದಲ್ಲಿ 2009ರ ಏಪ್ರಿಲ್‌ ಬಳಿಕ ಬೇರೆ ಬ್ಯಾಂಕ್‌‌ ಎಟಿಎಂನಿಂದ ಹಣವನ್ನು ಡ್ರಾ ಮಾಡುವ ವ್ಯವಸ್ಥೆ ಬಂದಿದೆ. ಒಂದು ಬಾರಿ ಗರಿಷ್ಠ 10 ಸಾವಿರ ರೂ. ಡ್ರಾ ಮಾಡಬಹುದಾಗಿದೆ.

ಕಳೆದ ಮೂರು ವರ್ಷದಲ್ಲಿ ಎಟಿಎಂ ಸಂಖ್ಯೆ ದ್ವಿಗುಣಗೊಂಡಿದೆ. 2011ರಲ್ಲಿ 74,355 ಎಟಿಎಂಗಳಿದ್ದರೆ ಪ್ರಸ್ತುತ ದೇಶದಲ್ಲಿ 1,62,543 ಎಟಿಎಂಗಳು ಕಾರ್ಯ‌ನಿರ್ವ‌ಹಿಸುತ್ತಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+