ಆನ್ ಲೈನ್ ಮೂಲಕ 3,700 ಕೋಟಿ ರು. ಲೂಟಿ ಮಾಡಿದ್ದವರ ಬಂಧನ

Posted By:
Subscribe to Oneindia Kannada

ಲಖನೌ, ಫೆಬ್ರವರಿ 3: ಆನ್ ಲೈನ್ ಪೋರ್ಟಲ್ ಮೂಲಕ ಹೂಡಿಕೆ ವ್ಯವಹಾರವನ್ನಾರಂಭಿಸಿ ಸುಮಾರು ಲಕ್ಷಾಂತರ ಗ್ರಾಹಕರಿಂದ 3,700 ಕೋಟಿ ರು.ಗಳಷ್ಟು ಹಣ ದೋಚಿದ್ದ ವಂಚಕರ ತಂಡವೊಂದನ್ನು ಉತ್ತರ ಪ್ರದೇಶ ಎಸ್ ಟಿಎಫ್ ಪೊಲೀಸರು ಪತ್ತೆ ಹಚ್ಚಿ ಬಂಧಿಸಿದ್ದಾರೆ. ಬಂಧನದ ವೇಳೆ ಆರೋಪಿಗಳಿಂದ ಸುಮಾರು 500 ಕೋಟಿ ರು. ವಶಪಡಿಸಿಕೊಳ್ಳಲಾಗಿದೆ. ಇವರ ವಂಚನೆಗೆ ಸುಮಾರು ಆರೂವರೆ ಲಕ್ಷ ಜನರು ಮೋಸ ಹೋಗಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳಾದ ಅನುಭವ್ ಮಿತ್ತಲ್, ಶ್ರೀಧರ್ ಪ್ರಸಾದ್ ಹಾಗೂ ಮಹೇಶ್ ದಯಾಳ್ ಎಂಬುವರು ನೋಯ್ಡಾ ವಿಳಾಸ ಹೊಂದಿರುವ ಅಬ್ಲೇಜ್ ಇನ್ಫೋ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ ಎಂಬ ಸಂಸ್ಥೆಯೊಂದರ ಅಡಿಯಲ್ಲಿ ಸೋಷಿಯಲ್ ಟ್ರೇಡ್ ಡಾಟ್ ಬಿಝ್ ಎಂಬ ಆನ್ ಲೈನ್ ಹೂಡಿಕೆ ಪೋರ್ಟಲ್ ಅನ್ನು ಸ್ಥಾಪಿಸಿದ್ದರು.

Online Fraud Racket Of 3,700 Crore Busted By Uttar Pradesh Police, 3 Arrested

ಅನುಭವ್ ಮಿತ್ತಲ್ ಈ ಮೋಸದ ಕಂಪನಿಯ ಪ್ರಮುಖ ರೂವಾರಿ ಎಂದು ಹೇಳಲಾಗಿದ್ದು, ಈತ ಬಿಟೆಕ್ ಪದವೀಧರ ಹಾಗೂ ಗಾಜಿಯಾಬಾದ್ ಮೂಲದವ ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನು, ಶ್ರೀಧರ್ ಪ್ರಸಾದ್ ಆಂಧ್ರಪ್ರದೇಶದ ವಿಶಾಖಪಟ್ಟಣಂಗೆ ಸೇರಿದವನಾಗಿದ್ದು ಮಹೇಶ್ ದಯಾಳ್ ಎಂಬಾತ ಉತ್ತರ ಪ್ರದೇಶದ ಮಥುರಾದವನು ಎಂದು ಹೇಳಲಾಗಿದೆ.

ಆಸಕ್ತ ಗ್ರಾಹಕರು ಇದರಲ್ಲಿ 5,750 ರು.ಗಳಿಂದ 57,500 ರು.ಗಳವರೆಗೆ ಹೂಡಿಕೆ ಮಾಡಿ ಸಂಸ್ಥೆಯ ಸದಸ್ಯತ್ವ ಪಡೆಯಬೇಕಿತ್ತು. ಹಾಗೆ ಸದಸ್ಯತ್ವ ಪಡೆದ ಗ್ರಾಹಕರು ಈ ಆನ್ ಲೈನ್ ಪೋರ್ಟಲ್ ಸರ್ಚ್ ಮಾಡುವ ವೇಳೆ ಪ್ರತಿಯೊಂದು ಬಾರಿ ಕ್ಲಿಕ್ ಮಾಡಿದಾಗಲೂ ಐದು ರು.ಗಳು ಗ್ರಾಹಕರ ಖಾತೆಗೆ ಜಮೆಯಾಗುತ್ತದೆ ಎಂಬ ಆಶ್ವಾಸನೆಯನ್ನು ಕಂಪನಿ ನೀಡಿತ್ತು.

2015ರಲ್ಲ ಈ ಕಂಪನಿ ಹುಟ್ಟುಹಾಕಲಾಗಿದ್ದು, ಇದರಲ್ಲಿ ಸದಸ್ಯತ್ವ ಪಡೆದ ಎಲ್ಲರಿಗೂ ಈ ವೆಬ್ ಸೈಟ್ ನಲ್ಲಿರುವ ಕೆಲವಾರು ಪೇಜ್ ಗಳನ್ನು ಲೈಕ್ ಮಾಡುವಂತೆ ಸೂಚಿಸಲಾಗಿತ್ತು. ಹೀಗೆ, ಪ್ರತಿ ಪೇಜ್ ಗಳನ್ನು ಲೈಕ್ ಮಾಡುವಾಗ ಕ್ಲಿಕ್ ಮಾಡುತ್ತಾ ಹೋದಂತೆ ಗ್ರಾಹಕರ ಖಾತೆಗೆ ಹಣ ಹರಿದುಬರುವುದಾಗಿ ಹೇಳಲಾಗಿತ್ತು.

ಆದರೆ, ಇದು ಕೇವಲ ಮೋಸದಾಟವಾಗಿದ್ದರಿಂದ ಆರೋಪಿಗಳು ಹಣ ಬಂದು ಒಂದಿಷ್ಟು ಗ್ರಾಹಕರ ಸೇರ್ಪಡೆಯಾದ ಮೇಲೆ ವೆಬ್ ಸೈಟ್ ನ ಪೋರ್ಟಲ್ ಹೆಸರನ್ನು ಪದೇ ಪದೇ ಬದಲಾಯಿಸಿಬಿಡುತ್ತಿದ್ದರು. ಆಗ, ಹಣ ಹಾಕಿದವರಿಗೆ ಈ ವೆಬ್ ಸೈಟ್ ಸಿಗುತ್ತಲೇ ಇರಲಿಲ್ಲ. ಈ ಮೂಲಕ ಅವರು ಗ್ರಾಹಕರನ್ನು ವಂಚಿಸುತ್ತಿದ್ದರೆಂದು ಉತ್ತರ ಪ್ರದೇಶದ ಎಸ್ ಟಿಎಫ್ ಪೊಲೀಸ್ ಕಮೀಷನರ್ ತ್ರಿವೇಣಿ ಸಿಂಗ್ ಹೇಳಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Three persons alleged to have duped nearly 6.5 lakh people of Rs. 3,700 crore through an online portal have been arrested by the Uttar Pradesh police. So far, they defrauded over 6.5 lakh people collecting around Rs. 3,700 crore, says police.
Please Wait while comments are loading...