ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈರುಳ್ಳಿ ಇನ್ನು ಮುಂದೆ ಕಣ್ಣೀರು ತರಿಸಲ್ಲ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್. 23: ಇನ್ನು ಕೆಲವೇ ದಿನ ಕಾಯಿರಿ, ಮತ್ತೆ ನಿಮ್ಮ ಮನೆಯಲ್ಲಿ ಈರುಳ್ಳಿ ದೋಸೆ ಮಾಡಿಕೊಂಡು ಮನಸೋ ಇಚ್ಛೆ ಬಾರಿಸಬಹುದು! ಯಾಕಂದ್ರೆ ದರ ಏರಿಕೆ ಹಾದಿಯಲ್ಲೇ ಸಾಗಿದ್ದ ಈರುಳ್ಳಿ ಇದೀಗ ಹಿಂದಕ್ಕೆ ಹೆಜ್ಜೆ ಹಾಕುತ್ತಿದೆ.

ತಿಂಗಳುಗಳ ನಂತರ ಈರುಳ್ಳಿ ದರದಲ್ಲಿ ಇಳಿಕೆಯಾಗಿದೆ. ಸಗಟು ಮಾರುಕಟ್ಟೆಯಲ್ಲಿ ಈರುಳ್ಳಿ 3000-3800 ರೂಪಾಯಿಗೆ ಇಳಿಕೆ ಕಂಡಿದೆ. ಸಣ್ಣ ಈರುಳ್ಳಿ 1500-2000 ರೂ.ಗೆ ಇಳಿದಿದೆ.[ಕಣ್ಣೀರುಳ್ಳಿ: ಸಾಮಾಜಿಕ ತಾಣದಲ್ಲಿ ಕಂಡಿದ್ದು, ಕೇಳಿದ್ದು]

onion

ಚಿಲ್ಲರೆ ಮಾರುಕಟ್ಟೆಯಲ್ಲಿ ದಪ್ಪ ಈರುಳ್ಳಿಗೆ 70 ರು., ಮಧ್ಯಮ ಗಾತ್ರದ ಈರುಳ್ಳಿಗೆ 64 ರು. ನೀಡಬೇಕಿದೆ. ಇನ್ನು ಒಂದೆರಡು ವಾರದಲ್ಲಿ ಕೆಜಿಗೆ 50 ರು. ಗೆ ತಲುಪಬಹುದು.[ಏರ್ ಟೆಲ್ ಸಿಮ್ ಖರೀದಿಸಿದರೆ 1 ಕೆಜಿ ಈರುಳ್ಳಿ ಉಚಿತ]

ಬೆಂಗಳೂರು ಹಾಪ್ ಕಾಮ್ಸ್ ದರಪಟ್ಟಿ ನೋಡಿ
ಸಗಟು ಮಾರುಕಟ್ಟೆಯಲ್ಲಿ ಕ್ವಿಂಟಾಲ್​ ದಪ್ಪ ಗಾತ್ರದ ಈರುಳ್ಳಿಗೆ 5600- 5800 ರೂ. ಹಾಗೂ ಮಧ್ಯಮ ಗಾತ್ರದ ಈರುಳ್ಳಿಗೆ 4800-5000 ನೀಡಬೇಕಿತ್ತು. ಆದರೆ ಏಕಾಏಕಿ ಎರಡು ಸಾವಿರ ರು. ಇಳಿಕೆ ಕಂಡಿದೆ.

ರಾಜ್ಯದ ಚಿತ್ರದುರ್ಗ, ದಾವಣಗೆರೆ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಈರುಳ್ಳಿ ಕಟಾವು ನಡೆಯುತ್ತಿದ್ದು ಮಾರುಕಟ್ಟೆಗೆ ದೊಡ್ಡ ಪ್ರಮಾಣದಲ್ಲಿ ಆಗಮಿಸುತ್ತಿದೆ. ಕೋಲ್ಕತ, ಬಾಂಗ್ಲಾದೇಶಕ್ಕೆ ಈರುಳ್ಳಿ ರಫ್ತು ಪ್ರಮಾಣ ಕಡಿಮೆಯಾಗಿದ್ದು ಕೇಂದ್ರ ಸರ್ಕಾರ ತೆಗೆದುಕೊಂಡ ಕೆಲ ನೀತಿಗಳು ದರ ಇಳಿಕೆ ಮೇಲೆ ಪರಿಣಾಮ ಬೀರಿದೆ.

English summary
Onion prices are likely to fall 20 per cent in two weeks when the new crop arriving in markets. To discourage exports, the commerce ministry raised the minimum export price of onion. Karnataka people feeling free from onion price hike.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X