• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕಳೆದ ವರ್ಷಕ್ಕೆ ಹೋಲಿಸಿದರೆ ಈರುಳ್ಳಿ ಬೆಲೆ ತುಂಬಾ ಅಗ್ಗ: ಕೇಂದ್ರ ಸರ್ಕಾರ

|
Google Oneindia Kannada News

ನವದೆಹಲಿ, ನವೆಂಬರ್‌ 04: "ಈ ವರ್ಷ ಈರುಳ್ಳಿ ದರವು ಕಳೆದ ವರ್ಷಕ್ಕಿಂತ ತುಂಬಾ ಕಡಿಮೆ ಆಗಿದೆ. ಬೆಲೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಮಾಡಿದ ಪ್ರಯತ್ನಗಳು ಈಗ ಫಲ ನೀಡುತ್ತಿದೆ," ಎಂದು ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯವು ಬುಧವಾರ ಹೇಳಿದೆ.

ಈ ಬಗ್ಗೆ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯವು ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿದೆ. ಪ್ರಸ್ತುತ ಈರುಳ್ಳಿಯ ಚಿಲ್ಲರೆ ಹಾಗೂ ಸಗಟು ದರವು ಕೆಜಿಗೆ 40.13 ರೂಪಾಯಿ ಆಗಿದೆ ಹಾಗೂ ಕ್ವಿಂಟಾಲ್‌ಗೆ 3215.92 ಆಗಿದೆ ಎಂದು ಮಾಹಿತಿ ನೀಡಿದೆ.

 ಪಾತಾಳಕ್ಕೆ ಕುಸಿದ ಈರುಳ್ಳಿ ದರ: ರೈತರ ಕಣ್ಣಲ್ಲಿ ನೀರು</a><a href=" title=" ಪಾತಾಳಕ್ಕೆ ಕುಸಿದ ಈರುಳ್ಳಿ ದರ: ರೈತರ ಕಣ್ಣಲ್ಲಿ ನೀರು" /> ಪಾತಾಳಕ್ಕೆ ಕುಸಿದ ಈರುಳ್ಳಿ ದರ: ರೈತರ ಕಣ್ಣಲ್ಲಿ ನೀರು

"ಅಕ್ಟೋಬರ್ ಮೊದಲ ವಾರದಲ್ಲಿ ಈರುಳ್ಳಿ ಬೆಲೆಯು ಏರಿಕೆ ಆಗಿರುವುದನ್ನು ನೀವು ಗಮನಿಸಿರಬಹುದು. ಮಳೆಯ ಕಾರಣದಿಂದಾಗಿ ಈ ಏರಿಕೆ ಕಂಡು ಬಂದಿತ್ತು. ಈ ಹಿನ್ನೆಲೆಯಿಂದಾಗಿ ನಾವು ಈರುಳ್ಳಿ ಬೆಲೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಕ್ರಮವನ್ನು ಕೈಗೊಂಡೆವು," ಎಂದು ಕೂಡಾ ಉಲ್ಲೇಖ ಮಾಡಲಾಗಿದೆ.

"ಈರುಳ್ಳಿ ಬೆಲೆಯನ್ನು ಇಳಿಸುವ ನಿಟ್ಟಿನಲ್ಲಿ ಗ್ರಾಹಕ ವ್ಯವಹಾರಗಳ ಇಲಾಖೆಯು ಕ್ರಮವನ್ನು ಕೈಗೊಂಡಿದೆ. ಫಸ್ಟ್-ಇನ್-ಫಸ್ಟ್-ಔಟ್ (ಎಫ್‌ಐಎಫ್‌ಒ) ತತ್ವವನ್ನು ಅನುಸರಣೆ ಮಾಡಲಾಗುತ್ತಿದೆ. ಈರುಳ್ಳಿ ಬೆಲೆಯ ಬಗ್ಗೆ ನಾವು ಅಧಿಕ ಗಮನ ಹರಿಸುತ್ತಿದ್ದೇವೆ. ಈರುಳ್ಳಿ ಬೆಲೆಯನ್ನು ಕಡಿಮೆ ಮಾಡಲು ಹಾಗೂ ಕನಿಷ್ಠ ಶೇಖರಣಾ ನಷ್ಟದ ಬಗ್ಗೆ ಖಾತ್ರಿ ಪರಿಸುವ ನಾವು ಅವಳಿ ಉದ್ದೇಶದ ಮಾರ್ಗದರ್ಶನ ನೀಡಿದ್ದೇವೆ. ಈ ಮೂಲಕ ಈರುಳ್ಳಿ ಬೆಲೆ ಇಳಿಕೆ ಮಾಡಲು ಸಾಧ್ಯವಾಗಿದೆ," ಎಂದು ತಿಳಿಸಿದೆ.

"ಪ್ರಮುಖ ಮಾರುಕಟ್ಟೆಯಲ್ಲಿ ನವೆಂಬರ್‌ 2 ರವರೆಗೆ ಒಟ್ಟು 1,11,376.17 ಮೆಟ್ರಿಕ್‌ ಟನ್‌ ಈರುಳ್ಳಿಯನ್ನು ಬಿಡುಗಡೆ ಮಾಡಲಾಗಿದೆ. ಪ್ರಮುಖ ಮಾರುಕಟ್ಟೆಗಳಾದ ದೆಹಲಿ, ಕೋಲ್ಕತ್ತಾ, ಲಕ್ನೋ, ಪಾಟ್ನಾ, ರಾಂಚಿ, ಗುವಾಹಟಿ, ಭುವನೇಶ್ವರ, ಹೈದಾರಾಬಾದ್‌, ಬೆಂಗಳೂರು, ಚೆನ್ನೈ, ಮುಂಬೈ, ಚಂಡೀಗಢ, ಕೊಚ್ಚಿ ಹಾಗೂ ರಾಯಪುರದಲ್ಲಿ ನವೆಂಬರ್‌ 2 ರವರೆಗೆ ಒಟ್ಟು 1,11,376.17 ಮೆಟ್ರಿಕ್‌ ಟನ್‌ ಈರುಳ್ಳಿಯನ್ನು ಬಿಡುಗಡೆ ಮಾಡಲಾಗಿದೆ. ಇನ್ನು ಮಹಾರಾಷ್ಟ್ರ, ಮಧ್ಯ ಪ್ರದೇಶ ಹಾಗೂ ಗುಜರಾತ್‌ನ ಸ್ಥಳೀಯ ಮಾರುಕಟ್ಟೆಯಲ್ಲಿ ಹೆಚ್ಚುವರಿ ಈರುಳ್ಳಿಯನ್ನು ವಿಲೇವಾರಿ ಮಾಡಲಾಗಿದೆ," ಎಂದು ಕೇಂದ್ರ ಸರ್ಕಾರ ವಿವರಿಸಿದೆ.

 ಅಮೆರಿಕದಲ್ಲಿ ಸಾಲ್ಮೊನೆಲ್ಲಾ ಬ್ಯಾಕ್ಟೀರಿಯಾ ಹಾವಳಿ: 650ಕ್ಕೂ ಹೆಚ್ಚು ಜನ ಅಸ್ವಸ್ಥ ಅಮೆರಿಕದಲ್ಲಿ ಸಾಲ್ಮೊನೆಲ್ಲಾ ಬ್ಯಾಕ್ಟೀರಿಯಾ ಹಾವಳಿ: 650ಕ್ಕೂ ಹೆಚ್ಚು ಜನ ಅಸ್ವಸ್ಥ

ಈರುಳ್ಳಿ ಬೆಲೆ ಈಗ ಕೆಜಿಗೆ 5- 12 ರೂಪಾಯಿ ಅಗ್ಗ ಎಂದ ಕೇಂದ್ರ

ಇನ್ನು ಇದೇ ಸಂದರ್ಭದಲ್ಲಿ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯವು, "ಈರುಳ್ಳಿ ಬೆಲೆಯು ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶದಲ್ಲಿ ಕೆಜಿಗೆ ರೂಪಾಯಿ 21 ಗೆ ನೀಡಲಾಗಿದೆ," ಎಂದು ತಿಳಿಸಿದೆ. "ಇದು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಚಿಲ್ಲರೆ ಮಾರಾಟ ಮಳಿಗೆಗಳಿಗೆ ನೇರ ಪೂರೈಕೆಯ ಮೂಲಕ ತಾವಾಗಿಯೇ ಮಾರುಕಟ್ಟೆ ಮಧ್ಯಸ್ಥಿಕೆ ತೆಗೆದುಕೊಳ್ಳಲು ಅನುವು ಮಾಡಿಕೊಡಲಿದೆ. ಹಾಗೆಯೇ ಬೆಲೆಗಳನ್ನು ಇಳಿಸುವ ನಿಟ್ಟಿನಲ್ಲಿ ಮುಖ ಮಾರುಕಟ್ಟೆಗಳಲ್ಲಿ ಬಿಡುಗಡೆ ಮಾಡಲು ಅವಕಾಶ ಮಾಡಿಕೊಡಲಿದೆ," ಎಂದು ಕೇಂದ್ರ ಸರ್ಕಾರ ಉಲ್ಲೇಖ ಮಾಡಿದೆ.

ಈ ಸಂದರ್ಭದಲ್ಲೇ ಈರುಳ್ಳಿ ಬೆಲೆ ಈಗ ಕೆಜಿಗೆ 5- 12 ರೂಪಾಯಿ ಅಗ್ಗವಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಅಧಿಕೃತ ಹೇಳಿಕೆಯ ಪ್ರಕಾರ, ಕೇಂದ್ರವು ದೇಶಾದ್ಯಂತ ಪ್ರಮುಖ ಮಾರುಕಟ್ಟೆಗಳಲ್ಲಿ ತನ್ನ ಬಫರ್ ಸ್ಟಾಕ್‌ನಿಂದ ಇದುವರೆಗೆ 1.11 ಲಕ್ಷ ಟನ್ ಈರುಳ್ಳಿಯನ್ನು ಬಿಡುಗಡೆ ಮಾಡಿದೆ, ಇದರಿಂದಾಗಿ ಚಿಲ್ಲರೆ ಬೆಲೆಯು ಕೆಜಿಗೆ 5- 12 ರೂಪಾಯಿಯಷ್ಟು ಅಗ್ಗವಾಗಲು ಸಹಾಯ ಮಾಡಿದೆ ಎಂದು ಹೇಳಿದೆ.

   ಟೀಮ್ ಇಂಡಿಯಾ ಮೇಲಿರುವ ಒತ್ತಡದ ಬಗ್ಗೆ ಬಾಯ್ಬಿಟ್ಟ ರೋಹಿತ್ ಶರ್ಮಾ | Oneindia Kannada

   (ಒನ್‌ಇಂಡಿಯಾ ಸುದ್ದಿ)

   English summary
   Onion cheaper than last year says Union Ministry.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   Desktop Bottom Promotion