ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇವರ ಪ್ರಾರ್ಥನೆಯಾದರೂ ಬಾಲಕನನ್ನು ಬದುಕಿಸುವುದೆ?

By ಡಾ. ಅನಂತ ಕೃಷ್ಣನ್ ಎಂ
|
Google Oneindia Kannada News

ಬೆಂಗಳೂರು, ಫೆ. 2: ಆತನ ಕಣ್ಣಲ್ಲಿ ಆಕಾಶದಲ್ಲಿ ಹಾರಾಡುವ ಕನಸಿತ್ತು. ವಿಶೇಷ ರೀತಿಯ ಕಿರು ಯುದ್ಧವಿಮಾನ ತಯಾರು ಮಾಡಬೇಕೆಂಬ ಹಂಬಲವಿತ್ತು. ಎಲ್ಲದಕ್ಕಿಂತ ಹೆಚ್ಚಾಗಿ ದೇಶದ ಒಳಿತಿಗೆ ದುಡಿಯಬೇಕೆಂಬ ಛಲವಿತ್ತು.

ಆದರೆ ಈ ಎಲ್ಲ ಆಸೆ-ಆಕಾಂಕ್ಷೆಗಳ ಗೂಡಾಗಿದ್ದ ಹುಡುಗನನ್ನು ಕ್ಯಾನ್ಸರ್ ಎಂಬ ಮಾರಕ ಕಾಯಿಲೆ ನಿಧಾನವಾಗಿ ನುಂಗತೊಡಗಿದೆ. ಭಾರತದ ಅತ್ಯಂತ ಕಿರಿಯ ಪೈಲಟ್ ಸಾವಿನ ಹೊಸ್ತಿಲಿಗೆ ಬಂದು ನಿಂತಿದ್ದಾನೆ.

chandan

ಭಾರತದ ಅತಿ ಕಿರಿಯ ಪೈಲಟ್ ಚಂದನ್ ಇಂದು ಹಾಸಿಗೆ ಹಿಡಿದಿದ್ದಾನೆ. ಕ್ಯಾನ್ಸರ್ ಎಳೆ ಜೀವವನ್ನು ಬಾಧಿಸುತ್ತಿದ್ದು ಕಳೆದ ಕೆಲ ದಿನಗಳಿಂದ ಚಂದನ್ ಆಹಾರವನ್ನು ಸೇವಿಸಲು ಸಾಧ್ಯವಾಗುತ್ತಿಲ್ಲ. ಆತನ ತೂಕ ಕೇವಲ 17 ಕೆಜಿಗೆ ತಲುಪಿದೆ.[10 ವರ್ಷದ ಬಾಲಕ ಹೈದರಾಬಾದಿನ ಪೊಲೀಸ್ ಕಮಿಷನರ್]

ನನ್ನ ಮಗ ಈ ಕಾಯಿಲೆ ವಿರುದ್ಧದ ಹೋರಾಟದಲ್ಲಿ ಜಯ ಸಾಧಿಸುತ್ತಾನೆ. ನಮ್ಮ ಪ್ರಾರ್ಥನೆಗಳು ಆತನಗೆ ಹೊಸ ಜನ್ಮ ನೀಡುತ್ತವೆ ಎಂಬ ನಂಬಿಕೆಯೇ ನಮಗೆ ಆಧಾರ ಎಂದು ಚಂದನ್ ತಂದೆ ಗಿರೀಶ್ ಮಂಡಲ್ ಹೇಳುತ್ತಾರೆ. ಚಂದನ್ ಕುರಿತಾಗಿ ಒನ್ ಇಂಡಿಯಾ ಕಳೆದ ನವೆಂಬರ್ ನಲ್ಲಿ ವಿಶೇಷ ವರದಿಯೊಂದನ್ನು ಸಿದ್ಧಪಡಿಸಿ ನೀಡಿತ್ತು.

chandan 2

ಎಲ್ಲ ಸಾಧ್ಯತೆಗಳು ಮುಗಿದಿವೆ ಎಂದ ವೈದ್ಯರು
ಚಂದನ್ ಯಾವುದೇ ಔಷಧಗಳಿಗೆ ಸಕಾರಾತ್ಮಕ ಪ್ರತಿಕ್ರಿಯೆ ನೀಡುತ್ತಿಲ್ಲ. ಆತನ ಆರೋಗ್ಯ ಸ್ಥಿತಿ ಪ್ರತಿದಿನ ಹದಗೆಡುತ್ತಿರುವುದನ್ನು ತಡೆಯಲು ಸಾಧ್ಯವಿಲ್ಲ ಎಂದು ಚಂದನ್ ಆರೈಕೆ ಮಾಡುತ್ತಿದ್ದ ಆಲ್ ಇಂಡಿಯಾ ಇನ್ ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ನ ವೈದ್ಯರು ವಿಷಾದದಿಂದಲೇ ಹೇಳುತ್ತಾರೆ.

ಸದ್ಯ ಚಂದನ್ ಗೆ ಹಾಸಿಗೆ ಬಿಟ್ಟು ಏಳಲಾಗದ ಸ್ಥಿತಿಯಿದೆ. ಪ್ರತಿ ನಾಲ್ಕು ಗಂಟೆಗೊಮ್ಮೆ ನೋವು ನಿವಾರಕ ಔಷಧ ನೀಡಬೇಕಿದ್ದು ದೇಹವನ್ನು ನಿಧಾನವಾಗಿ ಬಲಿತೆಗೆದುಕೊಳ್ಳುತ್ತಿವೆ.[ಸಾವನ್ನು ಧಿಕ್ಕರಿಸಿ ಹಕ್ಕಿಯಂತೆ ಹಾರಾಡಿದ ಬಾಲಕ]

ಆತನ ತಲೆಯಲ್ಲಿ ದೊಡ್ಡದಾದ ಗಡ್ಡೆಯೊಂದು ಬೆಳೆದಿದೆ. ಮಾರಕ ಕ್ಯಾನ್ಸರ್ ಇಡೀ ದೇಹಕ್ಕೆ ವ್ಯಾಪಿಸುತ್ತಿದೆ. ತಲೆಯಲ್ಲಿನ ಗಡ್ಡೆಯ ಗಾತ್ರ ಪ್ರತಿದಿನ ದೊಡ್ಡದಾಗುತ್ತಿದೆ. ಹಾಗಾಗಿ ಆತ ಅತ್ತಿತ್ತ ಕದಲಲು ಸಾಧ್ಯವಾಗುತ್ತಿಲ್ಲ ಎಂದು ಹುಡುಗನ ಸ್ಥಿತಿ ನೋಡಿರುವ ದೆಹಲಿ ಬದ್ರಾಪುರದ ಗೋಪಾಲ್ ಹೇಳುತ್ತಾರೆ.

chandan 3

ಬಾಲಕನಿಗಾಗಿ ಪ್ರಾರ್ಥನೆ ಮಾಡುವುದೊಂದೇ ನಮಗೆ ಉಳಿದಿರುವ ದಾರಿ. ಈಗ ಆತ ಆಹಾರವನ್ನು ಬಿಟ್ಟಿರುವುದು ನಮ್ಮನ್ನು ಮತ್ತಷ್ಟು ಚಿಂತೆಗೀಡು ಮಾಡಿದೆ ಎಂದು ಕಳೆದ ಕೆಲ ವರ್ಷಗಳಿಂದ ಕುಟುಂಬಕ್ಕೆ ನೆರವಾಗುತ್ತ ಬಂದಿದ್ದ ಉದಯ್ ಫೌಂಡೇಶನ್ ನ ಸಂಸ್ಥಾಪಕ ರಾಹುಲ್ ವರ್ಮಾ ಬೇಸರದಿಂದಲೇ ಹೇಳುತ್ತಾರೆ.

ಕಳೆದ ಬಾರಿ ಒನ್ ಇಂಡಿಯಾ ವರದಿ ಮಾಡಿದ್ದಾಗ ಚೂಟಿಯಾಗಿದ್ದದ ಹುಡುಗನ ಕುಟುಂಬ ಚಿಕ್ಕ ಉದ್ದಿಮೆ ನಡೆಸಲು ಬಿಹಾರಕ್ಕೆ ತೆರಳಿತ್ತು ಎಂದು ಹೇಳಲಾಗಿತ್ತು. ಆದರೆ ಹುಡುಗನಿಗೆ ಕಾಣಿಸಿಕೊಂಡ ಮಾರಕ ಕಾಯಿಲೆ ಕೆಲವೇ ದಿನಗಳಲ್ಲಿ ಅವರನ್ನು ದೆಹಲಿಯ ಎಐಐಎಮ್ ಎಸ್ ಆಸ್ಪತ್ರೆಯ ಮೆಟ್ಟಿಲು ತುಳಿಯುವಂತೆ ಮಾಡಿತು.

chandan 4

ಸೈನ್ಯದ ಹಾಜರಿ ಹುಡುಗನಿಗೆ ಸ್ಫೂರ್ತಿ ತುಂಬಿತು
ಕಳೆದ ನವೆಂಬರ್ ನಲ್ಲಿ ಪೈಲಟ್ ಆಗಬೇಕಿಂದಿದ್ದ ಚಂದನ್ ಕನಸನ್ನು ಭಾರತೀಯ ವಾಯು ಸೇನೆ ಪೂರೈಸಿತು. ಮಕ್ಕಳ ದಿನಾಚರಣೆ ಸಂದರ್ಭ ಚಂದನ್ ಆಕಾಶದಲ್ಲಿ ಹಾರಾಟ ನಡೆಸಿದ್ದನು. ಚಂದನ್ ಸುದ್ದಿಯನ್ನು ತಿಳಿದ ಏರ್ ಚೀಫ್ ಮಾರ್ಷಲ್ ಅರುಪ್ ರಹಾ ಸ್ವತಂ ಚಂದನ್ ಮತ್ತು ಆತನ ತಂದೆಯನ್ನು ಭೇಟಿಯಾಗಿದ್ದರು.

ಕಿರು ವಿಮಾನ ತಯಾರಿಕೆ ಕನಸು

ಚಂದನ್ ತಯಾರು ಮಾಡಬೇಕೆಂದಿದ್ದ ಕಿರು ವಿಮಾನ ತಯಾರಿಕೆ ಅರ್ಧಕ್ಕೆ ನಿಂತಿದೆ. ತನ್ನ ತಂದೆಯ ಬಳಿ ಚಂದನ್ ಕಿರು ವಿಮಾನ ತಯಾರು ಮಾಢಲು ಬೇಕಾಗುವ ಸಾಮಗ್ರಿಗಳನ್ನು ತಂದು ಕೊಡುವಂತೆ ಕೇಳಿದ್ದ. ನೀನು ಗುಣಮುಖನಾದ ಮೇಲೆ ವಿಮಾನ ತಯಾರು ಮಾಡಬಹುದು ಎಂದು ಆತನ ತಾಯಿ ಹೇಳಿದ್ದಳು. ಆದರೆ ಈಗ ಸಾಮರ್ಥ್ಯವಿದ್ದರೂ ಸಾಧಿಸಲಾಗದ ನೋವು ಚಂದನ್ ನನ್ನು ಕಾಡುತ್ತಿದೆ.

ಯಾವುದೋ ಒಂದು ಚಮತ್ಕಾರ ಮಾತ್ರ ಚಂದನ್ ಜೀವ ಕಾಪಾಡಬಹುದು. ಆತನಿಗೋಸ್ಕರ ಒಂಧು ಪ್ರಾರ್ಥನಾ ಸಭೆಯನ್ನು ಹಮ್ಮಿಕೊಂಡಿದ್ದೇವೆ ಎಂದು ಉದಯ್ ಫೌಂಡೇಶನ್ ನ ರಾಹುಲ್ ತಿಳಿಸಿದ್ದಾರೆ.

English summary
India's ‘youngest pilot' Chandan is in pain. In advanced stages of cancer, the 14-year-old little fighter has not eaten anything for the past five days. He weighs just over 17 kgs now. Unable to bear the pain, Chandan was moaning when this Correspondent spoke to his father Girish Mandal (39) over the phone from Delhi. "He smiles at us and I know my son won't give up his fight. He had told me that through our prayers he will spring back to life," says Girish.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X