ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಣರಾಜ್ಯೋತ್ಸವ ಪರೇಡ್ ನಲ್ಲಿ ಮಹಿಳಾ ಶಕ್ತಿ ಅನಾವರಣ

By ಡಾ. ಅನಂತ ಕೃಷ್ಣನ್ ಎಂ
|
Google Oneindia Kannada News

ನವದೆಹಲಿ, ಜ. 26 : ಈ ಬಾರಿಯ ಗಣರಾಜ್ಯೋತ್ಸವ ಪರೇಡ್ ನಲ್ಲಿ ಮಹಿಳಾ ಶಕ್ತಿ ಅನಾವರಣವಾಗಿದೆ. ಇದೆ ಮೊದಲ ಬಾರಿಗೆ ಮಹಿಳಾ ದಳ ಪರೇಡ್ ಆರಂಭದ ಮೊದಲಿಗೆ ಶಿಸ್ತಿನಿಂದ ಹೆಜ್ಜೆ ಹಾಕಿದೆ. ಮುಖ್ಯ ಅತಿಥಿ ಬರಾಕ್ ಒಮಾಮಾ ಮೊದಲಿಗೆ ವಂದನೆ ಸ್ವೀಕರಿಸಿದ್ದು ಇದೇ ನಾರಿ ಶಕ್ತಿ ದಳದಿಂದ ಎನ್ನುವುದು ಸ್ಮರಣೀಯ ಘಟನೆಗೆ ಸಾಕ್ಷಿಯಾಗಿದೆ.

'ನಾರಿ ಶಕ್ತಿ' ಹೆಸರಿನ ದಳದಲ್ಲಿ ಭಾರತದ ವಾಯು ಸೇನೆ ಮತ್ತು ನೌಕಾದಳದ ಮಹಿಳಾ ಸೇನಾನಿಗಳು ಹೆಜ್ಜೆಹಾಕಿದರು. ಈ ಮೂಲಕ ಭಾರತದಲ್ಲಿ ಮಹಿಳೆಯರಿಗೆ 2 ಸ್ಥಾನ ನೀಡಿಲ್ಲ. ಇಲ್ಲೂ ಸಮಾನತೆಯ ತತ್ವ ಅಳವಡಿಕೆಯಾಗಿದೆ ಎಂಬುದು ಬಿಂಬಿತವಾಯಿತು. ಭಾರತದ ಲಕ್ಷಾಂತರ ಮಹಿಳೆಯರ ಕನಸು ನರೇಂದ್ರ ಮೋದಿಯವರ 'ನಾರಿ ಶಕ್ತಿ' ಯೋಜನೆ ಮೂಲಕ ಸಾಧ್ಯವಾಯಿತು.

india

ಮಹಿಳಾ ಶಕ್ತಿ ಅನಾವರಣ
ಒನ್ ಇಂಡಿಯಾದೊಂದಿಗೆ ಮಾತನಾಡಿದ ಲೆಫ್ಟಿನೆಂಟ್ ಪ್ರಿಯಾ ಜಯಕುಮಾರ್, ಇಂಥ ಯೋಜನೆ ಮೂಲಕ ನೂರಾರು ಮಹಿಳೆಯರಿಗೆ ಪ್ರೇರಣೆಯಾದ ನರೇಂದ್ರ ಮೋದಿ ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದು ಹೇಳಿದರು.

ನನಗೆ ನಿಜಕ್ಕೂ ಸಂತಸವಾಗುತ್ತಿದೆ. ಮಹಿಳಾ ಶಕ್ತಿ ಅನಾವರಣಕ್ಕೆ ಒಂದು ಅವಕಾಶ ದೊರೆತಿದೆ. ನನ್ನ ತಂದೆ ಸಹ ಸೇನೆಯಿಂದ ನಿವೃತ್ತರಾದವರು. ಅವರ ಪ್ರೇರಣೆಯೇ ನನಗೆ ದೇಶ ಸೇವೆ ಮಾಡಲು ಸ್ಫೂರ್ತಿ ನೀಡಿತು ಎಂದು ಮಹಿಳಾ ದಳವನ್ನು ಮುನ್ನಡೆಸುತ್ತಿರುವ ಪ್ರಿಯಾ ಹೇಳಿದರು.[ವಿಡಿಯೋ: ಒಬಾಮಾ- ಮೋದಿ ಜಂಟಿ ಸುದ್ದಿಗೋಷ್ಠಿ]

india 1

ಮುಂದಿನ ಹೆಜ್ಜೆ ಏನು?
ಗಣರಾಜ್ಯೋತ್ಸವ ಸಂದರ್ಭ ಇಡೀ ದೇಶ ನಮ್ಮನ್ನು ನೋಡುತ್ತಿರುತ್ತದೆ. ಸಂಭ್ರವನ್ನು ನೆನಪಿನಲ್ಲಿ ಉಳಿತುವಂತೆ ಮಾಡಲು ಹೆಜ್ಜೆ ಹಾಕುತ್ತೇವೆ ಎಂದು ಪ್ರಿಯಾ ತಿಳಿಸಿದರು.

ನಮ್ಮ ದೇಶದ ಮುಂದಿನ ಹೆಜ್ಜೆ ಏನು ಎಂಬುದು ಸ್ಪಷ್ಟವಾಗಿದೆ. ಅಭಿವೃದ್ಧಿಗೆ, ದೇಶ ರಕ್ಷಣೆ ಪ್ರತಿಯೊಬ್ಬರು ಕಟಿಬದ್ಧವಾಗಬೇಕಿದೆ. ಸೈನ್ಯದಲ್ಲಿ ಸೇವೆ ಸಲ್ಲಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಹೇಳಿದರು.

ಕಳೆದ ಒಂದು ತಿಂಗಳಿಂದ ಪಥಸಂಚಲನ ನಡೆಸಲು ಸಿದ್ಧತೆ ನಡೆಸಿದ್ದೇವು. ಇಂದು ಅದು ಸಾಕಾರಗೊಂಡಿದೆ. ಪ್ರಿಯಾ ಅವರ ನಾಯಕತ್ವ ಲಕ್ಷಣ ನಮೆಗೆಲ್ಲ ಮಾದರಿಯಾಗಿದೆ ಎಂದು ಉಪ ಲೆಫ್ಟಿನೆಂಟ್ ಚಿಪ್ಲಿ ಹೇಳಿದರು.

English summary
American President Barack Obama will get a slice of India's Naari Shakti (Women Power) at Rajpath today while taking the salute as the chief guest during the Republic Day celebrations. As reported in these columns earlier, Obama will also witness history being created in Delhi today. For the first time ever the Indian Army, the Indian Air Force and the Indian Navy will be fielding an all-women marching contingents.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X