• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಒಂದೇ ಒಂದು ಕ್ಷೇತ್ರಕ್ಕೆ 3 ಹಂತದಲ್ಲಿ ಚುನಾವಣೆ: ಇದೊಂದು ದಾಖಲೆ

|

ಕೇಂದ್ರ ಚುನಾವಣಾ ಆಯೋಗ ಘೋಷಿಸಿರುವ ವೇಳಾಪಟ್ಟಿಯಲ್ಲಿ ಗಮನಿಸಬೇಕಾದ ವಿಚಾರವೇನಂದರೆ, ಜಮ್ಮು ಮತ್ತು ಕಾಶ್ಮೀರದಲ್ಲಿನ ಆರು ಲೋಕಸಭಾ ಕ್ಷೇತ್ರದ ಚುನಾವಣೆಯ ಹಂತಗಳು.

ಸಾರ್ವತ್ರಿಕ ಚುನಾವಣೆಯ ಜೊತೆಗೆ ಅಸೆಂಬ್ಲಿ ಚುನಾವಣೆಯೂ ನಡೆಯಬೇಕಾಗಿದ್ದರು, ಸದ್ಯ ಭದ್ರತಾ ಕಾರಣದಿಂದ ಆಯೋಗ ವಿಧಾನಸಭಾ ಚುನಾವಣೆಯನ್ನು ನಡೆಸುತ್ತಿಲ್ಲ. ಆದರೂ, ಅಲ್ಲಿ ಚುನಾವಣೆ ನಡೆಸುವ ಸಂಬಂಧ, ಸೋಮವಾರ (ಮಾ 11) ಮತ್ತೊಂದು ಸುತ್ತಿನ ಮಾತುಕತೆಯನ್ನು ನಡೆಸಲಾಗಿದೆ.

ಚುನಾವಣೆ ಸಮಯ ಸಾಲುಸಾಲು ರಜಾ : ಮತ ಹಾಕದೆ ಮಾಡಬೇಡಿ ಮಜಾ

ಕಣಿವೆ ರಾಜ್ಯದಲ್ಲಿ ಸುಗುಮವಾಗಿ ಚುನಾವಣೆ ನಡೆಸುವುದು ತುಂಬಾ ಜಟಿಲ ಕೆಲಸವಾಗಿರುವುದರಿಂದ ಏಕಕಾಲದಲ್ಲಿ ಅಸೆಂಬ್ಲಿ ಮತ್ತು ಲೋಕಸಭಾ ಚುನಾವಣೆ ನಡೆಸಲು ಸಾಧ್ಯವಿಲ್ಲ ಎನ್ನುವ ಮಾತನ್ನು ಚುನಾವಣಾ ಆಯುಕ್ತರು ಹೇಳಿದ್ದಾರೆ.

ಕಣಿವೆ ರಾಜ್ಯದಲ್ಲಿ ಅಸೆಂಬ್ಲಿ ಚುನಾವಣೆ ಇಲ್ಲ, ಮೋದಿ ವಿರುದ್ಧ ಆಕ್ರೋಶ

ಗುಪ್ತಚರ ಇಲಾಖೆಯ ಕಟ್ಟೆಚ್ಚರದ ಪ್ರಕಾರ, ಮತ್ತೆ ಪುಲ್ವಾಮಾ ಮಾದರಿಯ ದಾಳಿ ನಡೆಯುವ ಸಾಧ್ಯತೆಯಿರುವುದರಿಂದ, ಚುನಾವಣಾ ಆಯೋಗ ಯಾವುದೇ ರಿಸ್ಕ್ ತೆಗೆದುಕೊಳ್ಳದೇ ಇರುವ ಗಟ್ಟಿ ನಿರ್ಧಾರಕ್ಕೆ ಬಂದಿದೆ. ಒಂದು ಕ್ಷೇತ್ರಕ್ಕೆ ಮೂರು ಹಂತದಲ್ಲಿ ಚುನಾವಣೆ ನಡೆಸುವ ತೀರಾ ಅಪರೂಪದ ನಿರ್ಧಾರಕ್ಕೂ ಆಯೋಗ ಬಂದಿದೆ.

ಐವತ್ತಾರು ಇಂಚು ಏನಾಯಿತು, ಖಾರವಾಗಿ ಓಮರ್ ಅಬ್ದುಲ್ಲಾ ಟ್ವೀಟ್

ಅಸೆಂಬ್ಲಿ ಚುನಾವಣೆ ನಡೆಸದೇ ಇರುವುದಕ್ಕೆ ನಿರೀಕ್ಷೆಯಂತೆ, ಓಮರ್ ಅಬ್ದುಲ್ಲಾ ಮತ್ತು ಮೆಹಬೂಬಾ ಮುಫ್ತಿ, ಮೋದಿ ಸರಕಾರವನ್ನು ದೂರಿದ್ದಾರೆ. ಕೇಂದ್ರ ಗೃಹಸಚಿವರು ನೀಡಿದ್ದ ಭರವಸೆ ಏನಾಯಿತು? ಪ್ರಧಾನಿ ಮೋದಿ ಪಾಕಿಸ್ತಾನಕ್ಕೆ ಶರಣಾಗಿದ್ದಾರೆ, ಜೊತೆಗೆ, ಉಗ್ರರು ಮತ್ತು ಹುರಿಯತ್ ಮುಖಂಡರಿಗೂ ತಲೆಬಾಗಿಸಿದ್ದಾರೆ. ಐವತ್ತಾರು ಇಂಚು ಏನಾಯಿತು ಎಂದು ಖಾರವಾಗಿ ಓಮರ್ ಅಬ್ದುಲ್ಲಾ ಟ್ವೀಟ್ ಮಾಡಿದ್ದಾರೆ.

ಆರು ಲೋಕಸಭಾ ಕ್ಷೇತ್ರಗಳಿಗೆ ಐದು ಹಂತದ ಚುನಾವಣೆ

ಆರು ಲೋಕಸಭಾ ಕ್ಷೇತ್ರಗಳಿಗೆ ಐದು ಹಂತದ ಚುನಾವಣೆ

ಜಮ್ಮು ಕಾಶ್ಮೀರದ ಆರು ಲೋಕಸಭಾ ಕ್ಷೇತ್ರಗಳೆಂದರೆ, ಅನಂತ್ ನಾಗ್, ಬಾರಾಮುಲ್ಲಾ, ಶ್ರೀನಗರ, ಜಮ್ಮು, ಲಡಾಖ್ ಮತ್ತು ಉಧಂಪುರ. ಈ ಆರು ಲೋಕಸಭಾ ಕ್ಷೇತ್ರಗಳಿಗೆ ಐದು ಹಂತದಲ್ಲಿ ಚುನಾವಣೆ ನಡೆಯುತ್ತಿದೆ ಎಂದರೆ, ಅಲ್ಲಿನ ಭದ್ರತಾ ಸೂಕ್ಷ್ಮತೆಯ ಅರಿವಾಗಬಹುದು. ದೇಶದ ಸುರಕ್ಷತೆ ನಮ್ಮ ಮೊದಲ ಆದ್ಯತೆ, ಹಾಗಾಗಿ ಐದು ಹಂತದಲ್ಲಿ ಚುನಾವಣೆ ನಡೆಯಲಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ಸುನಿಲ್ ಅರೋರಾ ಹೇಳಿದ್ದಾರೆ.

ನಾಲ್ಕು ರಾಜ್ಯಗಳಲ್ಲಿ ಲೋಕಸಭೆ ಜೊತೆಗೆ ವಿಧಾನಸಭೆ ಚುನಾವಣೆ

ಅನಂತ್ ನಾಗ್ ಲೋಕಸಭಾ ಕ್ಷೇತ್ರದಲ್ಲಿ ಮೂರು ಹಂತದಲ್ಲಿ ಚುನಾವಣೆ

ಅನಂತ್ ನಾಗ್ ಲೋಕಸಭಾ ಕ್ಷೇತ್ರದಲ್ಲಿ ಮೂರು ಹಂತದಲ್ಲಿ ಚುನಾವಣೆ

ಇದೆಲ್ಲಕ್ಕಿಂತ ಹೆಚ್ಚಾಗಿ ಗಮನಿಸಬೇಕಾದ ವಿಚಾರವೇನಂದರೆ, ಒಂದು ಲೋಕಸಭಾ ಕ್ಷೇತ್ರಕ್ಕೆ ಮೂರು ಹಂತದಲ್ಲಿ ಚುನಾವಣೆ ನಡೆಯುತ್ತಿರುವುದು. ಹೌದು, ಸದಾ ಉಗ್ರರ ಉಪಟಳದಿಂದ ಕುಖ್ಯಾತಿ ಪಡೆದಿರುವ ಅನಂತ್ ನಾಗ್ ಲೋಕಸಭಾ ಕ್ಷೇತ್ರದಲ್ಲಿ ಮೂರು ಹಂತದಲ್ಲಿ ಚುನಾವಣೆ ನಡೆಯುತ್ತಿದೆ. ದೇಶದ ಇತಿಹಾಸದಲ್ಲಿ ತೀರಾ ಅಪರೂಪದ ವಿದ್ಯಮಾನವಿದು.

ಮೆಹಬೂಬಾ ಮುಫ್ತಿಯ ಪಕ್ಷ ಎರಡು ಬಾರಿ ಗೆದ್ದಿತ್ತು

ಮೆಹಬೂಬಾ ಮುಫ್ತಿಯ ಪಕ್ಷ ಎರಡು ಬಾರಿ ಗೆದ್ದಿತ್ತು

ಹೆಚ್ಚಾಗಿ ಎಂಟು ಅಸೆಂಬ್ಲಿ ಕ್ಷೇತ್ರದ ವ್ಯಾಪ್ತಿ ಒಂದು ಲೋಕಸಭಾ ಕ್ಷೇತ್ರಕ್ಕೆ ಬರುತ್ತದೆ. ಆದರೆ, ಅನಂತ್ ನಾಗ್ ಕ್ಷೇತ್ರದಲ್ಲಿ ಹದಿನಾರು ಅಸೆಂಬ್ಲಿ ಕ್ಷೇತ್ರಗಳಿವೆ. ಅವುಗಳಲ್ಲಿ, ಪುಲ್ವಾಮಾ, ಶೋಫಿಯಾನ್, ಅನಂತ್ ನಾಗ್, ದೇವ್ಸರ್, ಕುಲ್ ಗಾಂ ಮತ್ತು ಪಹಲಗಾಂ ಕೂಡಾ ಸೇರಿವೆ. 1967 ರಿಂದ 2014ರ ವರೆಗೆ ನಡೆದ ಹನ್ನೆರಡು ಲೋಕಸಭಾ ಚುನಾವಣೆಯಲ್ಲಿ ಜೆಕೆಎನ್ಸಿ ಐದು ಬಾರಿ, ಕಾಂಗ್ರೆಸ್ ನಾಲ್ಕು ಬಾರಿ, ಮೆಹಬೂಬಾ ಮುಫ್ತಿಯ ಪಕ್ಷ ಎರಡು ಬಾರಿ ಮತ್ತು ಜನತಾದಳ ಒಂದು ಬಾರಿ ಗೆದ್ದಿತ್ತು.

ಲೋಕಸಭೆ ಚುನಾವಣೆ 2019ರ ಮಾಹಿತಿ ಅಂಕಿ- ಅಂಶಗಳಲ್ಲಿ

ಉಗ್ರರ ಉಪಟಳದಿಂದ ಕೂಡಿರುವ ಅಸೆಂಬ್ಲಿ ಕ್ಷೇತ್ರಗಳು

ಉಗ್ರರ ಉಪಟಳದಿಂದ ಕೂಡಿರುವ ಅಸೆಂಬ್ಲಿ ಕ್ಷೇತ್ರಗಳು

ಅನಂತ್ ನಾಗ್ ಕ್ಷೇತ್ರದ ಲೋಕಸಭಾ ಚುನಾವಣೆ ಏಪ್ರಿಲ್ 23, 29 ಮತ್ತು ಮೇ 6ರಂದು ನಡೆಯಲಿದೆ. ಇದರಲ್ಲಿ ಅನಂತ್ ನಾಗ್ ಅಸೆಂಬ್ಲಿ ಕ್ಷೇತ್ರ 23ಕ್ಕೆ, ಕುಲ್ ಗಾಂ ಕ್ಷೇತ್ರ 29ಕ್ಕೆ ಮತ್ತು ಪುಲ್ವಾಮಾ, ಶೋಫಿಯಾನ್ ಕ್ಷೇತ್ರದ ಚುನಾವಣೆ ಮೇ 6ರಂದು ನಡೆಯಲಿದೆ. ಇವೆಲ್ಲವೂ ಉಗ್ರರ ಉಪಟಳದಿಂದ ಕೂಡಿರುವ ಅಸೆಂಬ್ಲಿ ಕ್ಷೇತ್ರಗಳು.

lok-sabha-home

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Anantnag constituency, which falls in the militancy-hit south Kashmir region of Jammu and Kashmir, will witness three-phase elections. This is unprecedented given that a three phase election has never been held in a single constituency.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more