ಬಿಹಾರ : ಜೆಡಿಯು ಕಚೇರಿಯಲ್ಲಿ ಪಾರ್ಸೆಲ್ ಸ್ಫೋಟ, 1 ಸಾವು
ಪಾಟ್ನಾ, ಮೇ 26 : ಜೆಡಿಯು ನಾಯಕರಿಗೆ ಬಂದಿದ್ದ ಪಾರ್ಸೆಲ್ ಸಿಡಿದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಮಂಗಳವಾರ ನಡೆದಿದೆ. ಘಟನೆಯಲ್ಲಿ ಮತ್ತೊಬ್ಬರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.
ಬಿಹಾರದ ಗಯಾದ ಜೆಡಿಯು ಜಿಲ್ಲಾಧ್ಯಕ್ಷ ಅಭಯ್ ಕುಶ್ವಾಲ್ ಹೆಸರಿಗೆ ಈ ಪಾರ್ಸೆಲ್ ಬಂದಿತ್ತು. ಮಂಗಳವಾರ ಬೆಳಗ್ಗೆ ಕಚೇರಿಯ ಕೆಲಸಗಾರ ಇದನ್ನು ತೆರೆದಾಗ ಅದು ಸ್ಫೋಟಗೊಂಡಿದೆ. ಪಾರ್ಸೆಲ್ ತೆಗೆದ ಸಂತೋಷ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಮತ್ತೊಬ್ಬರು ಸ್ಫೋಟದಿಂದಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಪೊಲೀಸರು ಸ್ಥಳಕ್ಕೆ ತೆರಳಿದ್ದು ಪರಿಶೀಲನೆ ನಡೆಸುತ್ತಿದ್ದಾರೆ. [ಬಿಹಾರ ರಾಜಕೀಯದಲ್ಲಿ ಏನೇನೆಲ್ಲಾ ಆಯ್ತು ನೋಡಿ]












Click it and Unblock the Notifications