ನಟಿ ಪಾರ್ವತಿಗೆ ಕಿರುಕುಳ ಕೊಟ್ಟ ಯುವಕ ಬಂಧನ

Posted By:
Subscribe to Oneindia Kannada

ಕೊಚ್ಚಿ, ಡಿಸೆಂಬರ್ 28: ಕನ್ನಡದಲ್ಲೂ ನಟಿಸಿರುವ ಪ್ರಬುದ್ಧ ನಟಿ ಪಾರ್ವತಿ ಅವರನ್ನು ನಿಂದಿಸಿ ಸಾಮಾಜಿಕ ಜಾಲ ತಾಣಗಳಲ್ಲಿ ಸಂದೇಶ ಹರಡುತ್ತಿದ್ದ ಯುವಕನೊಬ್ಬನನ್ನು ತ್ರಿಶೂರ್ ಜಿಲ್ಲೆಯಲ್ಲಿ ಬಂಧಿಸಲಾಗಿದೆ.

ಮಿಲನ ಚಿತ್ರ ಖ್ಯಾತಿಯ ಪಾರ್ವತಿ ಅವರು, ತಮ್ಮ ವಿರುದ್ಧ ಆನ್‌ಲೈನ್‌ ತಾಣಗಳಲ್ಲಿ ಬಂದಿರುವ ಸಂದೇಶಗಳ ಸ್ಕ್ರೀನ್‌ಶಾಟ್‌ ಸಮೇತ ಪೊಲೀಸರಿಗೆ ದೂರು ನೀಡಿದ್ದರು.

One held after actress Parvathy cyber bullied

ಮಂಗಳವಾರ ದೂರು ನೀಡಲಾಗಿತ್ತು. ಬುಧವಾರ ಸಂಜೆ ವೇಳೆಗೆ ಆರೋಪಿ ತ್ರಿಶೂರ್ ಜಿಲ್ಲೆಯ ವಡಕ್ಕಂಚೇರಿಯ 23 ವರ್ಷ ವಯಸ್ಸಿನ ಪ್ರಿಂಟೊ ಎಂಬಾತನನ್ನು ಬಂಧಿಸಿ, ನ್ಯಾಯಾಲಯದ ಎದುರು ಹಾಜರುಪಡಿಸಿದ್ದು, 14 ದಿನಗಳ ನ್ಯಾಯಾಂಗ ಬಂಧನಕ್ಕೊಳಪಟ್ಟಿದ್ದಾರೆ.

ಕೇರಳದಲ್ಲಿ ಇತ್ತೀಚೆಗೆ ನಡೆದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಮಾತನಾಡಿದ್ದ ಪಾರ್ವತಿ, ಖ್ಯಾತ ನಟನ ಸ್ತ್ರೀದ್ವೇಷಪೂರಿತ ಡೈಲಾಗ್ ಬಗ್ಗೆ ಅಸಮಾಧಾನ ಹೊರ ಹಾಕಿದ್ದರು. ಪಾರ್ವತಿ ಅವರು ಸೂಪರ್ ಸ್ಟಾರ್ ಎಂದಷ್ಟೇ ಹೇಳಿದ್ದರು. ಕಸಬಾ ಎಂಬ ಚಿತ್ರದಲ್ಲಿ ಮಮ್ಮೂಟಿ ಅವರು ಹೇಳಿದ ಸ್ತ್ರೀದ್ವೇಷ ಹೊಂದಿರುವ ಡೈಲಾಗ್ ಬಗ್ಗೆ ಪಾರ್ವತಿ ಹೇಳಿದ್ದರು.

ಆದರೆ, ಮಮ್ಮೂಟಿ ಅಭಿಮಾನಿಯಾದ ಪ್ರಿಂಟೋ, ತನ್ನ ಹೀರೋ ವಿರುದ್ಧ ಪಾರ್ವತಿ ಮಾತನಾಡಿದ್ದರೆ ಎಂಬ ಸಿಟ್ಟಿನಿಂದ ಈ ರೀತಿ ಕೃತ್ಯ ಎಸಗಿದ್ದಾನೆ.(ಪಿಟಿಐ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A man was today arrested following a police complaint by award-winning actress Parvathy, who alleged that she was abused and viciously trolled on social media for terming as "misogynistic" some dialogues in a film starring top actor Mammootty.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ