ಸುಕೇಶ್ ಚಂದ್ರಶೇಖರ್ ಬಿಜೆಪಿ ಸೇರಬಹುದು: ಅರವಿಂದ್ ಕೇಜ್ರಿವಾಲ್

ನವದೆಹಲಿ ನವೆಂಬರ್ 12: ದೆಹಲಿ ಸರ್ಕಾರದ ಶಿಕ್ಷಣ ಮಾದರಿಯ ಬಗ್ಗೆ ಗದ್ದಲ ಸೃಷ್ಟಿಸಿರುವ ಸುಕೇಶ್ ಚಂದ್ರಶೇಖರ್ ಬಿಜೆಪಿಗೆ ಸೇರುತ್ತಾರೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಶನಿವಾರ ಹೇಳಿದ್ದಾರೆ.

"ಜೈಲಿನಲ್ಲಿರುವ ಸುಕೇಶ್ ಚಂದ್ರಶೇಖರ್ ಬಿಜೆಪಿ ಭಾಷೆಯಲ್ಲಿ ಮಾತನಾಡಲು ಕಲಿಯುತ್ತಿದ್ದಾರೆ. ಬಿಜೆಪಿಯವರು ಕೂಡ ಕೇಜ್ರಿವಾಲ್‌ ಅವರ ಸುಳ್ಳು ಪತ್ತೆ ಪರೀಕ್ಷೆ ನಡೆಸಬೇಕು ಎಂದು ಹೇಳುತ್ತಿದ್ದರು. ಇದನ್ನು ನೋಡಿದರೆ ಸುಕೇಶ್ ಬಿಜೆಪಿ ಸೇರಲು ತರಬೇತಿ ಪಡೆದಿದ್ದಾರೆ. ಸುಕೇಶ್ ಮುಂದೊಂದು ದಿನ ಬಿಜೆಪಿ ಸೇರಬಹುದು" ಎಂದು ಕೇಜ್ರಿವಾಲ್ ಹೇಳಿದ್ದಾರೆ.

"ಅವರನ್ನು [ಸುಕೇಶ್] ಸ್ಟಾರ್ ಪ್ರಚಾರಕನನ್ನಾಗಿ ಮಾಡಬೇಕು. ಸುಕೇಶ್ ಕರೆದುಕೊಂಡು ರ್‍ಯಾಲಿಗಳನ್ನು ಮಾಡಲಿ ಅವರ ಕಥೆಗಳನ್ನು ಕೇಳಲು ಅವರನ್ನು ನೋಡಲು ಜನರು ಬರುತ್ತಾರೆ. ಕನಿಷ್ಠ ಪಕ್ಷ ಬಿಜೆಪಿ ರ್‍ಯಾಲಿಗಳಲ್ಲಿ ಜನಸಂದಣಿ ಇರುತ್ತದೆ. ಬಿಜೆಪಿಯವರು ಅವರನ್ನು ಸೇರ್ಪಡೆಗೊಳಿಸಬೇಕು ಮತ್ತು ಅವರನ್ನು ಪಕ್ಷದ ಮುಖ್ಯಸ್ಥರನ್ನಾಗಿ ಮಾಡಬೇಕು" ಎಂದು ಕೇಜ್ರಿವಾಲ್ ಟೀಕಿಸಿದ್ದಾರೆ.

One day accused Sukesh Chandrasekhar may join BJP - Kejriwal

ದೆಹಲಿ ಶಾಲೆಗಳ ಸ್ಟೋರಿಯ ಪ್ರಚಾರಕ್ಕಾಗಿ ತಾನು ಪಿಆರ್ ವ್ಯವಸ್ಥೆ ಮಾಡಿದ್ದೇನೆ ಎಂದು ಸುಕೇಶ್ ಚಂದ್ರಶೇಖರ್ ಆರೋಪಿಸಿದ್ದರು. ಈ ಆರೋಪದ ಬಳಿಕ ಅರವಿಂದ ಕೇಜ್ರಿವಾಲ್ ತಿರುಗೇಟು ನೀಡಿದ್ದಾರೆ.

ಮಾಧ್ಯಮಗಳಿಗೆ ಬರೆದ ಪತ್ರದಲ್ಲಿ ಚಂದ್ರಶೇಖರ್, "ಅಮೆರಿಕ ಸುದ್ದಿಯಲ್ಲಿ ದೆಹಲಿ ಶಾಲೆಯ ಮಾದರಿಯನ್ನು ಪ್ರಚಾರ ಮಾಡಲು PR ಗೆ USD 8.5 ಲಕ್ಷ ಮತ್ತು ಶೇಕಡಾ 15 ರಷ್ಟು ಹೆಚ್ಚುವರಿ ಕಮಿಷನ್ ನೀಡಲಾಗಿದೆ" ಎಂದು ಆರೋಪಿಸಿದ್ದಾರೆ. ಈ ಹಿಂದೆ ದೆಹಲಿಯ ಎಲ್‌ಜಿ ವಿಕೆ ಸಕ್ಸೇನಾ ಅವರಿಗೆ ಸುಕೇಶ್ ಪತ್ರ ಬರೆದು ಬಂಧಿತ ಎಎಪಿ ಸಚಿವ ಸತ್ಯೇಂದ್ರ ಜೈನ್ ಅವರಿಗೆ 'ರಕ್ಷಣಾ ಹಣ' ಎಂದು 10 ಕೋಟಿ ರೂ. ಕೇಳಲಾಗಿದೆ ಎಂದಿದ್ದರು.

One day accused Sukesh Chandrasekhar may join BJP - Kejriwal

ತಮ್ಮ ಎರಡು ಪತ್ರಗಳಲ್ಲಿನ ಆರೋಪಗಳೆಲ್ಲವೂ ನಿಜವೆಂದು ಪ್ರತಿಪಾದಿಸಿದ ಸುಕೇಶ್, "ನಾನು ಪಾಲಿಗ್ರಾಫ್ ಪರೀಕ್ಷೆಗೆ ಸಿದ್ಧನಿದ್ದೇನೆ, ನನ್ನ ಪತ್ರದಲ್ಲಿ ನಾನು ಮಾಡಿರುವ ಎಲ್ಲಾ ಆರೋಪಗಳು ನಿಜ, ಎಎಪಿ ಸರಿಯಾಗಿದ್ದರೆ, ಅರವಿಂದ್ ಕೇಜ್ರಿವಾಲ್ ಮತ್ತು ಸತ್ಯೇಂದ್ರ ಜೈನ್ ಅವರ ಪಾಲಿಗ್ರಾಫ್ ಪರೀಕ್ಷೆಗಳನ್ನು ನಡೆಸುವಲ್ಲಿ ಯಾವುದೇ ಸಮಸ್ಯೆಗಳಿಲ್ಲ" ಎಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+