• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

One class, one channel ಆನ್ಲೈನ್ ಶಿಕ್ಷಣಕ್ಕೆ ಒತ್ತು!

|

ನವದೆಹಲಿ, ಮೇ 17: ಪ್ರಧಾನಿ ಮೋದಿ ಅವರ ಆಶಯದಂತೆ ವಿಶೇಷ ಆರ್ಥಿಕ ಪ್ಯಾಕೇಜ್ ರೂಪದಲ್ಲಿ ವಿವಿಧ ಕ್ಷೇತ್ರಗಳಿಗೆ ಯೋಜನೆ, ಹಣ ನಿಗದಿ ಮಾಡಲಾಗಿದೆ. ಈ ಕುರಿತಂತೆ ಇಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.

ಕೊರೊನಾ ನಂತರದ ದಿನಗಳಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಭಾರಿ ಬದಲಾವಣೆಯಾಗಬೇಕಿದೆ. ಇದಕ್ಕಾಗಿ ಸರ್ಕಾರ ವಿವಿಧ ಯೋಜನೆಗಳನ್ನು ರೂಪಿಸಿದೆ ಎಂದರು.

ನಿರ್ಮಲಾ 5ನೇ ಕಂತು: ಏಳು ವಲಯಗಳಿಗೆ ಹಲವು ಯೋಜನೆ ಘೋಷಣೆ

ಆನ್‌ಲೈನ್ ಎಜುಕೇಶನ್ ದೊಡ್ಡಮಟ್ಟದಲ್ಲಿ ಕೈಗೊಳ್ಳಲಾಗುತ್ತಿದೆ. ಆನ್ಲೈನ್ ಶಿಕ್ಷಣ ಪ್ರಸಾರಕ್ಕಾಗಿ 3 ಪ್ರತ್ಯೇಕ ಚಾನೆಲ್ ಸ್ಥಾಪಿಸಲಾಗುತ್ತಿದ್ದು, ಡಿಟಿಎಚ್, ಸ್ಕೈಪ್ ಮೂಲಕ ವಿದ್ಯಾರ್ಥಿಗಳಿಗೆ ಇ-ಪಾಠ ಮಾಡುವ ದಿನಗಳನ್ನು ಕಾಣಬಹುದು.

ಸ್ವಯಂಪ್ರಭಾ ಆನ್‌ಲೈನ್ ಮಾಧ್ಯಮದ ಮೂಲಕ ಪ್ರಸಾರವಾಗಲಿರುವ ಶಿಕ್ಷಣ ಕುರಿತು 12 ಹೊಸ ಚಾನಲ್‌ಗಳು ಕಾರ್ಯನಿರ್ವಹಣೆ ಬಗ್ಗೆ ಶೀಘ್ರದಲ್ಲೇ ವಿಸ್ತಾರವಾದ ಪ್ರಕಟಣೆ ನೀಡಲಾಗುತ್ತದ್ ಎಂದರು. ಆನ್‌ಲೈನ್ ಶಿಕ್ಷಣ ನೀಡಲು 200 ಹೊಸ ಪಠ್ಯ ಪುಸ್ತಕವನ್ನು ಪರಿಚಯಿಸಲಾಗುತ್ತದೆ.

ಕೊರೊನಾ ವಿರುದ್ಧ ಹೋರಾಟ; ರಾಜ್ಯಗಳಿಗೆ 15 ಸಾವಿರ ಕೋಟಿ

ಒನ್ ಕ್ಲಾಸ್, ಒನ್ ಚಾನಲ್ ಯೋಜನೆ:

1 ರಿಂದ 12ನೇ ತರಗತಿವರೆಗಿನ ಶಿಕ್ಷಣಕ್ಕೆ ಪ್ರತ್ಯೇಕ ಚಾನಲ್ ಪ್ರಾರಂಭವಾಗುತ್ತಿದ್ದು, ಆಯಾ ರಾಜ್ಯಗಳ ಭಾಷೆ, ಪಠ್ಯಕ್ರಮಕ್ಕೆ ಅನುಗುಣವಾಗಿ ಚಾನೆಲ್ ಹಾಗೂ ಸಂಪನ್ಮೂಲ ಬಳಕೆಗೆ ಅವಕಾಶವಿರಲಿದೆ.

ಡಿಜಿಟಲ್ ಶಿಕ್ಷಣಕ್ಕಾಗಿ 'ಪಿಎಂ ಇ-ವಿದ್ಯಾ' ಯೋಜನೆಯಾಗಲಿದೆ. ಅಂಧರಿಗೆ ರೆಡಿಯೋ ಮೂಲಕ ಶಿಕ್ಷಣಕ್ಕೆ ನಿರ್ಧರಿಸಲಾಗಿದೆ. ದಿವ್ಯಾಂಗರಿಗಾಗಿ ಪ್ರತ್ಯೇಕ ಪಠ್ಯ ಪುಸ್ತಕ ನೀಡಲು ನಿರ್ಧಾರ ಮಾಡಲಾಗಿದೆ. ವಿವಿಧ ವಿವಿಗಳಲ್ಲಿ ಆನ್‌ಲೈನ್‌ ಕೋರ್ಸ್‌ಗಳಿಗೆ ಹೆಚ್ಚು ಒತ್ತು ನೀಡಲಾಗುವುದು. ಟಾಪ್ 100 ವಿವಿಗಳಲ್ಲಿ ಆನ್‌ಲೈನ್ ಶಿಕ್ಷಣವು ಮೇ 30ರಿಂದ ಆರಂಭವಾಗಲಿದೆ ಎಂದು ಸಚಿವೆ ನಿರ್ಮಲಾ ವಿವರಿಸಿದರು.

English summary
Finance Minister Nirmala Sitharaman on Sunday said that online education has been taken up in a big way in India and the government is taking proactive steps to help children who don't have access to internet.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X