ಸಾಮಾಜಿಕ ಜಾಲತಾಣದಲ್ಲಿ ಉದಯಾನಿಧಿ ಸ್ಟಾಲಿನ್ ಅವರನ್ನು ದಕ್ಷಿಣದ ಪಪ್ಪು ಎನ್ನುತ್ತಿದ್ದಾರೆ: ಅಣ್ಣಾಮಲೈ
ಚೆನ್ನೈ, ಸೆಪ್ಟೆಂಬರ್ 5: ಸನಾತನ ಧರ್ಮದ ಕುರಿತು ತಮಿಳುನಾಡಿನ ಸಿಎಂ ಎಂಕೆ ಸ್ಟಾಲಿನ್ ಅವರ ಪುತ್ರ, ಯುವಜನ ಮತ್ತು ಕ್ರೀಡಾ ಸಚಿವ ಉದಯನಿಧಿ ಸ್ಟಾಲಿನ್ ಅವರ ಹೇಳಿಕೆಯನ್ನು ಖಂಡಿಸಿರುವ ರಾಜ್ಯ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಅವರು ಸಾಮಾಜಿಕ ಜಾಲತಾಣದಲ್ಲಿ ಉದಯಾನಿಧಿ ಸ್ಟಾಲಿನ್ ಅವರನ್ನು ದಕ್ಷಿಣದ ಪಪ್ಪು ಎನ್ನುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ತಮಿಳುನಾಡು ಸಿಎಂ ಸ್ಟಾಲಿನ್ ಪುತ್ರ ಉದಯನಿಧಿ ಸ್ಟಾಲಿನ್ ಸನಾತನ ಧರ್ಮದ ಬಗ್ಗೆ ನೀಡಿದ ಹೇಳಿಕೆ ತೀವ್ರ ಚರ್ಚೆಗೆ ಗ್ರಾಸವಾಗಿದೆ. ರಾಹುಲ್ ಗಾಂಧಿ ಮೋದಿ ಅವರ ಸಮುದಾಯದ ಬಗ್ಗೆ ಮಾತನಾಡಿದಂತೆ ಸನಾತನ ಧರ್ಮದ ಬಗ್ಗೆ ಉದಯನಿಧಿ ಸ್ಟಾಲಿನ್ ಮಾತನಾಡಿದ್ದಾರೆ. ಈ ಹಿನ್ನೆಲೆ ರಾಹುಲ್ ಗಾಂಧಿ ಉತ್ತರ ಭಾರತದ ಪಪ್ಪು ಆದ್ರೆ, ದಕ್ಷಿಣ ಭಾರತದ ಪಪ್ಪು ಉದಯನಿಧಿ ಸ್ಟಾಲಿನ್ ಎಂದು ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಟೀಕಿಸಿದ್ದಾರೆ.

ರಾಹುಲ್ ಗಾಂಧಿ ಮೋದಿ ಸಮುದಾಯದ ಬಗ್ಗೆ ಮಾತನಾಡಿದಂತೆ ಸನಾತನ ಬಗ್ಗೆ ಉದಯನಿಧಿ ಸ್ಟಾಲಿನ್ ಮಾತನಾಡಿದ್ದಾರೆ. ಈ ಹಿನ್ನೆಲೆ ಉತ್ತರ ಭಾರತದ ಪಪ್ಪು ರಾಹುಲ್ ಗಾಂಧಿ ಆದ್ರೆ, ದಕ್ಷಿಣ ಭಾರತದ ಪಪ್ಪು ಉದಯನಿಧಿ ಸ್ಟಾಲಿನ್.
ಅವರು ಹೀಗೆಯೇ ಮಾತನಾಡುತ್ತಾ ಹೋದರೆ 'I.N.D.I.A' ಮೈತ್ರಿಕೂಟದ ಮತಬ್ಯಾಂಕ್ ಕುಸಿಯುತ್ತಲೇ ಹೋಗುತ್ತದೆ. ಈಗ 'I.N.D.I.A' ಮೈತ್ರಿಕೂಟದ ಮತಗಳ ಪ್ರಮಾಣ ಶೇಕಡಾ ಐದಕ್ಕೆ ಇಳಿದಿದೆ. ಉದಯನಿಧಿ ಹೀಗೆಯೇ ಮುಂದುವರಿದರೆ, 'I.N.D.I.A' ಮೈತ್ರಿಕೂಟದ ಮತಗಳು ಶೇಕಡಾ 20 ರಷ್ಟು ಕಡಿಮೆಯಾಗುತ್ತದೆ ಎಂದು ಹೇಳಿದ್ದಾರೆ.
ಸಚಿವ ಉದಯನಿಧಿ ಸ್ಟಾಲಿನ್ ಅವರ "ಸನಾತನ ಧರ್ಮ ನಿರ್ಮೂಲನೆ" ಹೇಳಿಕೆಗೆ ಸಂಬಂಧಿಸಿದಂತೆ ಅವರ ಶಿರಚ್ಛೇದನ ಮಾಡಬೇಕು ಎಂದು ಕರೆ ನೀಡಿ ಸುದ್ದಿಯಾಗಿರುವ ಅಯೋಧ್ಯೆಯ ಅರ್ಚಕ ಪರಮಹಂಸ ಆಚಾರ್ಯ ಯಾರೂ ಮಾಡದಿದ್ದರೆ ಅಗತ್ಯವಿದ್ದರೆ, ನಾನೇ ಎಂಕೆ ಸ್ಟಾಲಿನ್ ಅವರ ಮಗನ ಶಿರಚ್ಛೇದ ಮಾಡುತ್ತೇನೆ. ಯಾರಾದರೂ ಶಿರಚ್ಛೇದ ಮಾಡಲು ಮುಂದಾದರೆ ಅವರಿಗೆ ಇನ್ನೂ 10 ಕೋಟಿ ರೂಪಾಯಿ ಹೆಚ್ಚು ಬಹುಮಾನವನ್ನು ಹೆಚ್ಚಿಸುತ್ತೇನೆ ಎಂದಿದ್ದಾರೆ.
'ಸನಾತನ ಧರ್ಮ'ದಿಂದಲೇ ದೇಶವಾಗಿದ್ದು, ಅವರು ತಮ್ಮ ಹೇಳಿಕೆಗೆ ಕ್ಷಮೆ ಯಾಚಿಸಬೇಕು. ಅವರು ದೇಶದ 100 ಕೋಟಿ ಜನರ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದಿದ್ದಾರೆ.












Click it and Unblock the Notifications