ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಓಮಿಕ್ರಾನ್‌ ಆತಂಕ: ಬೂಸ್ಟರ್‌ ಶಾಟ್‌ ಬಗ್ಗೆ ಶೀಘ್ರ ನಿರ್ಧಾರ ಎಂದ ನೀತಿ ಆಯೋಗ

|
Google Oneindia Kannada News

ನವದೆಹಲಿ, ಡಿಸೆಂಬರ್‌ 17: ಓಮಿಕ್ರಾನ್ ಕೊರೊನಾವೈರಸ್ ರೂಪಾಂತರದ ಬೆದರಿಕೆ ಪ್ರತಿದಿನ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಪೂರ್ಣ ಲಸಿಕೆ ಪಡೆಯುವುದು, ಮಾಸ್ಕ್‌ ಧರಿಸುವುದು ಹಾಗೂ ದೊಡ್ಡ ಸಭೆಗಳನ್ನು ಸೇರುವುದನ್ನು ತಪ್ಪಿಸುವುದು ಬಹಳ ಮುಖ್ಯ ಎಂದು ನೀತಿ ಆಯೋಗ ಸದಸ್ಯ (ಆರೋಗ್ಯ) ಡಾ ವಿ ಕೆ ಪೌಲ್‌ ಶುಕ್ರವಾರ ಹೇಳಿದ್ದಾರೆ.

ಭಾರತದಲ್ಲಿ ಲಭ್ಯವಿರುವ ಕೋವಿಡ್‌ ಲಸಿಕೆಗಳು ಕೊರೊನಾ ವೈರಸ್‌ ಸೋಂಕಿನ ವಿರುದ್ಧ ಪರಿಣಾಮಕಾರಿಯಾಗಿವೆ ಮತ್ತು ಬೂಸ್ಟರ್ ಶಾಟ್‌ಗಳ ಕುರಿತು ವಿಜ್ಞಾನ ಆಧಾರಿತ ನಿರ್ಧಾರವನ್ನು ಶೀಘ್ರದಲ್ಲೇ ತೆಗೆದುಕೊಳ್ಳಲಾಗುವುದು ಎಂದು ಕೂಡಾ ಡಾ. ವಿ ಕೆ ಪೌಲ್‌ ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ. Genova mRNA ಲಸಿಕೆಯು ಹಂತ II ಮತ್ತು ಹಂತ III ಪ್ರಯೋಗಗಳು ಪ್ರಗತಿಯಲ್ಲಿ ಇದೆ ಎಂದು ಕೂಡಾ ತಿಳಿಸಿದ್ದಾರೆ.

ಓಮಿಕ್ರಾನ್‌ ಆತಂಕ: ವಿವಿಧ ದೇಶಗಳ ಪ್ರಯಾಣ ಮಾರ್ಗಸೂಚಿ ಹೀಗಿದೆ..ಓಮಿಕ್ರಾನ್‌ ಆತಂಕ: ವಿವಿಧ ದೇಶಗಳ ಪ್ರಯಾಣ ಮಾರ್ಗಸೂಚಿ ಹೀಗಿದೆ..

ಇನ್ನು ಶುಕ್ರವಾರ ದೇಶಾದ್ಯಂತ 7,447 ಹೊಸ ಕೊರೊನಾವೈರಸ್ ಪ್ರಕರಣಗಳು ವರದಿಯಾಗಿವೆ. ಈ ಮೂಲಕ ದೇಶದಲ್ಲಿ ಒಟ್ಟು ಕೋವಿಡ್ ಪ್ರಕರಣಗಳ ಸಂಖ್ಯೆ ಈಗ 3,47,26,049 ಕ್ಕೆ ಏರಿದೆ. ಇದಲ್ಲದೆ, ಕಳೆದ 24 ಗಂಟೆಗಳಲ್ಲಿ 391 ರೋಗಿಗಳು ಸಾವನ್ನಪ್ಪಿದ್ದು, ದೇಶದಲ್ಲಿ ಕೋವಿಡ್‌ಗೆ ಈವರೆಗೆ 4,76,869 ಮಂದಿ ಬಲಿಯಾಗಿದ್ದಾರೆ.

Omicron Threat: Decision on Booster Shots Soon, Says NITI Aayog Expert

ಈ ಬಗ್ಗೆ ಅಧಿಕ ಮಾಹಿತಿ ನೀಡಿರುವ ಕೇಂದ್ರ ಆರೋಗ್ಯ ಸಚಿವಾಲಯವು, "ದೇಶದಲ್ಲಿ ಸಕ್ರಿಯ ಕೊರೊನಾ ಸೋಂಕಿತರ ಸಂಖ್ಯೆ ಈಗ 86,000ಕ್ಕೆ ಇಳಿದಿದೆ. ಕಳೆದ 24 ಗಂಟೆಗಳಲ್ಲಿ ದೇಶಾದ್ಯಂತ 7,886 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ, ಈ ಮೂಲಕ ದೇಶದಲ್ಲಿ ಕೊರೊನಾ ವೈರಸ್‌ ಸೋಂಕಿನಿಂದ ಗುಣಮುಖರಾದವರ ಸಂಖ್ಯೆ 3,41,62,765 ಕ್ಕೆ ಏರಿದೆ. ಪ್ರಸ್ತುತ ಸಕ್ರಿಯ ಪ್ರಕರಣಗಳ ಸಂಖ್ಯೆಯು 86,415 ಆಗಿದೆ. ದೇಶದಲ್ಲಿ ಒಟ್ಟು ಕೊರೊನಾ ವೈರಸ್‌ ಸಕ್ರಿಯ ಪ್ರಕರಣಗಳು ಶೇಕಡ 0.25 ರಷ್ಟು ಇದೆ. ಸಕ್ರಿಯ ಪ್ರಕರಣಗಳ ಈ ಅಂಕಿ ಅಂಶವು ಮಾರ್ಚ್ 2020 ರಿಂದ ಕಡಿಮೆಯಾಗಿದೆ," ಎಂದು ಮಾಹಿತಿ ನೀಡಿದ್ದಾರೆ.

ದೇಶದಲ್ಲಿ ಕೋವಿಡ್‌ ರೂಪಾಂತರ ಓಮಿಕ್ರಾನ್‌ ಹೆಚ್ಚಳ

ಈ ನಡುವೆ ದೇಶದಲ್ಲಿ ಭಾರತದಲ್ಲಿ ಇದುವರೆಗೆ 101 ಓಮಿಕ್ರಾನ್ ಪ್ರಕರಣಗಳು ಕಾಣಿಸಿಕೊಂಡಿದೆ. ಇದುವರೆಗೆ 11 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಓಮಿಕ್ರಾನ್‌ ಪ್ರಕರಣ ಕಾಣಿಸಿಕೊಂಡಿದೆ ಎಂದು ಸರ್ಕಾರ ಶುಕ್ರವಾರ ತಿಳಿಸಿದೆ. ಹೊಸ ವರ್ಷದ ಆಚರಣೆಗಳನ್ನು ಹೆಚ್ಚು ಅದ್ಧೂರಿಯಾಗಿ ನಡೆಸದಂತೆ, ಹೆಚ್ಚು ಜನರು ಸೇರದಂತೆ ಸರ್ಕಾರ ಜನರಿಗೆ ಸಲಹೆ ನೀಡಿದೆ. ಕಳೆದ 20 ದಿನಗಳಿಂದ ದೈನಂದಿನ ಕೋವಿಡ್‌ ಪ್ರಕರಣಗಳ ಸಂಖ್ಯೆಯು 10,000 ಕ್ಕಿಂತ ಕಡಿಮೆ ಇದ್ದರೂ, ಹೊಸ ಕೋವಿಡ್‌ ರೂಪಾಂತರ ಓಮಿಕ್ರಾನ್‌ ಹೆಚ್ಚಳ ಆಗುತ್ತಿರುವ ನಿಟ್ಟಿನಲ್ಲಿ ಹೆಚ್ಚು ಜಾಗರೂಕರಾಗಿರಬೇಕು ಎಂದು ಸರ್ಕಾರ ಹೇಳಿದೆ.

ಓಮಿಕ್ರಾನ್ ಎಚ್ಚರಿಕೆ: ಅನಗತ್ಯ ಪ್ರಯಾಣ, ಕೂಟಗಳಿಂದ ದೂರವಿರಿ ಓಮಿಕ್ರಾನ್ ಎಚ್ಚರಿಕೆ: ಅನಗತ್ಯ ಪ್ರಯಾಣ, ಕೂಟಗಳಿಂದ ದೂರವಿರಿ

ಎಲ್ಲೆಲ್ಲಿ ಎಷ್ಟು ಓಮಿಕ್ರಾನ್‌ ಪ್ರಕರಣ ದಾಖಲು

ಮಹಾರಾಷ್ಟ್ರದಲ್ಲಿ 32, ದೆಹಲಿ (22), ರಾಜಸ್ಥಾನ (17), ಕರ್ನಾಟಕ (8), ತೆಲಂಗಾಣ (8), ಗುಜರಾತ್ (5), ಕೇರಳ (5), ಆಂಧ್ರಪ್ರದೇಶ ( 1), ಚಂಡೀಗಢ (1), ತಮಿಳುನಾಡು (1) ಮತ್ತು ಪಶ್ಚಿಮ ಬಂಗಾಳ (1) ಓಮಿಕ್ರಾನ್‌ ಪ್ರಕರಣ ದಾಖಲು ಆಗಿದೆ ಎಂದು ಸರ್ಕಾರ ಹೇಳಿದೆ. ಓಮಿಕ್ರಾನ್ ರೂಪಾಂತರವು ಯುರೋಪ್ ಮತ್ತು ಪ್ರಪಂಚದ ಇತರ ಭಾಗಗಳಲ್ಲಿ ಅತ್ಯಂತ ವೇಗವಾಗಿ ಹರಡುತ್ತಿದೆ. ಈ ನಿಟ್ಟಿನಲ್ಲಿ ಜನರು ಅನಿವಾರ್ಯವಲ್ಲದೆ ಪ್ರಯಾಣವನ್ನು ಮಾಡಬಾರದು ಎಂದು ಸರ್ಕಾರ ಹೇಳಿದೆ.

ಡಿಸೆಂಬರ್‌ 20 ರಿಂದ ಭಾರತಕ್ಕೆ ಆಗಮಿಸುವವರಿಗೆ ಭಾರತ ಸರ್ಕಾರವು ಹೊಸ ಪ್ರಯಾಣ ಮಾರ್ಗಸೂಚಿಯನ್ನು ಹೊರಡಿಸಿದೆ. ಓಮಿಕ್ರಾನ್‌ ಸೋಂಕಿನ ಆತಂಕದ ನಡುವೆ, ನಾಗರಿಕ ವಿಮಾನಯಾನ ಸಚಿವಾಲಯವು ಪ್ರಯಾಣ ಮಾರ್ಗಸೂಚಿಯನ್ನು ಪರಿಷ್ಕರಣೆ ಮಾಡಿದೆ. "ಅಧಿಕ ಅಪಾಯಯುತ ಎಂದು ಗುರುತಿಸಲಾದ ದೇಶದಿಂದ ಬರುವವರು ಮೊದಲೇ ಏರ್‌ ಸುವಿಧ ಪೋರ್ಟಲ್‌ ಮೂಲಕ ಆರ್‌ಟಿ-ಪಿಸಿಆರ್‌ ಪರೀಕ್ಷೆಗೆ ಬುಕ್ಕಿಂಗ್‌ ಮಾಡಿಕೊಳ್ಳಬೇಕು. ಅತೀ ಅಪಾಯಯುತ ದೇಶದಿಂದ ಆಗಮಿಸುವವರು ಪ್ರಯಾಣ ಮಾಡುವುದಕ್ಕೂ ಮುನ್ನವೇ ಆರ್‌ಟಿ-ಪಿಸಿಆರ್‌ ಪರೀಕ್ಷೆಗೆ ಬುಕ್ಕಿಂಗ್‌ ಮಾಡಿಕೊಳ್ಳಬೇಕು," ಎಂದು ಸರ್ಕಾರ ಹೇಳಿದೆ.

(ಒನ್‌ಇಂಡಿಯಾ ಸುದ್ದಿ)

English summary
Omicron Threat: Decision on Booster Shots Soon, Says NITI Aayog Expert.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X